ಕೊಹ್ಲಿಯದ್ದು ಹೊಲಸುಬಾಯಿ; ಆತ ರೂಟ್, ವಿಲಿಯಮ್ಸನ್ ಮತ್ತು ಸಚಿನ್ ರೀತಿ ಉತ್ತಮನಲ್ಲ ಎಂದ ಮಾಜಿ ಕ್ರಿಕೆಟಿಗ!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಚರ್ಚಿಸಲ್ಪಡುತ್ತಿರುವ ವಿಷಯವಾಗಿದೆ. ಅದರಲ್ಲಿಯೂ ಭಾರತ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವಂತೂ ಸಾಕಷ್ಟು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ತುಂಬಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಟಿ ಟ್ವೆಂಟಿ ವಿಶ್ವಕಪ್‌ಗೆ ಹಾರ್ದಿಕ್ ಪಾಂಡ್ಯ ಬದಲು ಆಯ್ಕೆಯಾಗಬಲ್ಲ 3 ಆಟಗಾರರುಟಿ ಟ್ವೆಂಟಿ ವಿಶ್ವಕಪ್‌ಗೆ ಹಾರ್ದಿಕ್ ಪಾಂಡ್ಯ ಬದಲು ಆಯ್ಕೆಯಾಗಬಲ್ಲ 3 ಆಟಗಾರರು

ಭಾರತ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 151 ರನ್‌ಗಳ ಗೆಲುವನ್ನು ಸಾಧಿಸುವುದರ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಕಾಯ್ದುಕೊಂಡಿದೆ. ಆದರೆ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸುಲಭವಾಗಿರಲಿಲ್ಲ, ಐದನೇ ದಿನ ಆರಂಭವಾದಾಗಲೂ ಸಹ ಇಂಗ್ಲೆಂಡ್ ತಂಡ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ನಂತರ ಟೀಮ್ ಇಂಡಿಯಾ ಬೌಲರ್‌ಗಳು ನೀಡಿದ ಅಮೋಘ ಪ್ರದರ್ಶನದಿಂದ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಗೆಲುವಿನ ಕೇಕೆ ಹಾಕಿತು.

ಟಿಟ್ವೆಂಟಿ ವಿಶ್ವಕಪ್‌: 15 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಥಾನ ಪಡೆದ ಬಲಿಷ್ಠ ಆಟಗಾರಟಿಟ್ವೆಂಟಿ ವಿಶ್ವಕಪ್‌: 15 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಥಾನ ಪಡೆದ ಬಲಿಷ್ಠ ಆಟಗಾರ

ಇದರ ಜೊತೆಗೆ ಲಾರ್ಡ್ಸ್ ಕ್ರೀಡಾಂಗಣ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಆಟಗಾರರ ನಡುವಿನ ವಾಕ್ಸಮರ ಮತ್ತು ನಿಂದನೆಗಳಿಗೂ ಸಾಕ್ಷಿಯಾಯಿತು. ಹೌದು ಜೇಮ್ಸ್ ಆ್ಯಂಡರ್ಸನ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಬುಮ್ರಾ ಎಸೆದ ಬೌನ್ಸರ್ ಎಸೆತಗಳಿಂದ ಆರಂಭವಾದ ಆಟಗಾರರ ನಡುವಿನ ವಾಕ್ಸಮರ ಪಂದ್ಯದುದ್ದಕ್ಕೂ ಆಗಿಂದಾಗ್ಗೆ ನಡೆಯುತ್ತಲೇ ಇತ್ತು. ಮತ್ತೆ ಬುಮ್ರಾ ಬ್ಯಾಟಿಂಗ್ ಬಂದ ವೇಳೆ ಇಂಗ್ಲೆಂಡ್ ಆಟಗಾರರು ಬುಮ್ರಾ ವಿರುದ್ಧ ವಾಕ್ಸಮರವನ್ನು ನಡೆಸಿದರು. ಇದಕ್ಕೂ ಮುನ್ನ ಜೇಮ್ಸ್ ಆ್ಯಂಡರ್ಸನ್ ಜೊತೆ ವಿರಾಟ್ ಕೊಹ್ಲಿ ಮೈದಾನದಲ್ಲಿಯೇ ನಿಂದನಾತ್ಮಕ ಪದಗಳನ್ನು ಉಪಯೋಗಿಸಿ ಮಾತಿನ ಚಕಮಕಿ ನಡೆಸಿದ್ದರು ಹಾಗೂ ಇಂಗ್ಲೆಂಡ್ ತಂಡದ ಮತ್ತೋರ್ವ ಆಟಗಾರ ರಾಬಿನ್ಸನ್ ಜತೆ ಕೂಡ ಕೊಹ್ಲಿ ವಾಕ್ಸಮರ ನಡೆಸಿದ್ದರು.

ಲಾರ್ಡ್ಸ್ ಸೋಲಿಗೆ ಟೀಕಿಸುವವರ ವಿರುದ್ಧ ಕಿಡಿಕಾರಿದ ನಾಸಿರ್ ಹುಸೇನ್ಲಾರ್ಡ್ಸ್ ಸೋಲಿಗೆ ಟೀಕಿಸುವವರ ವಿರುದ್ಧ ಕಿಡಿಕಾರಿದ ನಾಸಿರ್ ಹುಸೇನ್

ಹೀಗೆ ಪಂದ್ಯದ ವೇಳೆ ಇಂಗ್ಲೆಂಡ್ ತಂಡದ ವಿವಿಧ ಆಟಗಾರರ ಜೊತೆ ಮಾತಿನ ಚಕಮಕಿ ನಡೆಸಿದ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಇದೀಗ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ನಿಕ್ ಕಾಂಪ್ಟನ್ ಈ ಕೆಳಕಂಡಂತಿದೆ ಕಿಡಿಕಾರಿದ್ದಾರೆ.

'ಕೊಹ್ಲಿಯದ್ದು ಹೊಲಸು ಬಾಯಿ, ಆತ ಸಚಿನ್, ವಿಲಿಯಮ್ಸನ್ ಮತ್ತು ರೂಟ್ ಹಂತಕ್ಕೆ ಯಾವತ್ತೂ ಬರಲಾರ!'

'ಕೊಹ್ಲಿಯದ್ದು ಹೊಲಸು ಬಾಯಿ, ಆತ ಸಚಿನ್, ವಿಲಿಯಮ್ಸನ್ ಮತ್ತು ರೂಟ್ ಹಂತಕ್ಕೆ ಯಾವತ್ತೂ ಬರಲಾರ!'

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಮುಗಿದು 2 ದಿನಗಳು ಕಳೆದ ಬಳಿಕ ಪಂದ್ಯದಲ್ಲಿ ನಡೆದ ವಾಕ್ಸಮರಗಳ ಕುರಿತು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ನಿಕ್ ಕಾಂಪ್ಟನ್ ಮಾತನಾಡಿದ್ದು ಕೊಹ್ಲಿಯದ್ದು ಕೆಟ್ಟ ಬಾಯಿ ಎಂದು ಕಿಡಿಕಾರಿದ್ದಾರೆ. 'ವಿರಾಟ್ ಕೊಹ್ಲಿ ಓರ್ವ ಹೊಲಸು ಬಾಯಿಯ ವ್ಯಕ್ತಿಯಲ್ಲವೇ? 2012ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ವಿರಾಟ್ ಕೊಹ್ಲಿ ನನ್ನ ವಿರುದ್ಧ ಬಳಸಿದ ಅವಾಚ್ಯ ಶಬ್ದಗಳನ್ನು ಕೇಳಿ ದಿಗ್ಭ್ರಮೆಗೊಂಡಿದ್ದೆ ಹಾಗೂ ಅದನ್ನು ನನ್ನ ಜೀವನಪೂರ್ತಿ ಮರೆಯುವುದಿಲ್ಲ. ಆದರೆ ಜೋ ರೂಟ್, ಕೇನ್ ವಿಲಿಯಮ್ಸನ್ ಮತ್ತು ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿ ರೀತಿಯಲ್ಲ ಅವರೆಲ್ಲರೂ ಶಾಂತ ಸ್ವಭಾವದವರು' ಎಂದು ನಿಕ್ ಕಾಂಪ್ಟನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ವಿರಾಟ್ ಕೊಹ್ಲಿ ಕುರಿತು ಈ ವಿಷಯವನ್ನು ಟ್ವೀಟ್ ಮಾಡಿದ್ದ ನಿಕ್ ಕಾಂಪ್ಟನ್ ಸದ್ಯ ಆ ಟ್ವೀಟ್‌ನ್ನು ಡಿಲಿಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿಗೆ ಕೋಪ ಸ್ವಭಾವವೇ ಸರಿ ಎಂದಿದ್ದ ಇನ್ಜಮಾಮ್ ಉಲ್ ಹಕ್

ವಿರಾಟ್ ಕೊಹ್ಲಿಗೆ ಕೋಪ ಸ್ವಭಾವವೇ ಸರಿ ಎಂದಿದ್ದ ಇನ್ಜಮಾಮ್ ಉಲ್ ಹಕ್

ಇಂಗ್ಲೆಂಡ್ ತಂಡದ ಮಾಜಿ ಆಟಗಾರ ನಿಕ್ ಕಾಂಪ್ಟನ್ ವಿರಾಟ್ ಕೊಹ್ಲಿ ಬಾಯಿ ಸರಿಯಿಲ್ಲ ಆತ ಅವಾಚ್ಯ ಶಬ್ಧಗಳನ್ನು ಹೆಚ್ಚಾಗಿ ಬಳಸುತ್ತಾರೆ, ಮೈದಾನದಲ್ಲಿ ಸುಮ್ಮನೆ ಕೂಗುತ್ತಾರೆ ಎಂದು ಆಪಾದನೆ ಮಾಡಿದ್ದಾರೆ. ಆದರೆ ಇದೇ ಪಂದ್ಯದ ನಂತರ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇನ್ಜಮಾಮ್ ಉಲ್ ಹಕ್ ಮಾತನಾಡಿ ವಿರಾಟ್ ಕೊಹ್ಲಿ ಯಾವತ್ತೂ ಸಹ ತಮ್ಮ ಕೋಪ ಸ್ವಭಾವವನ್ನು ಬಿಟ್ಟು ಕೊಡಬಾರದು, ಅವರು ಕೋಪ ಸ್ವಭಾವದಿಂದ ಆಡಿದರೆ ಮಾತ್ರ ತಮ್ಮ ಅಸಲಿ ಆಟವನ್ನು ಪ್ರದರ್ಶಿಸುತ್ತಾರೆ. ಹೀಗಾಗಿ ಯಾವಾಗಲೂ ವಿರಾಟ್ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಆಡಬೇಕು ಎಂದು ಇನ್ಜಮಾಮ್ ಉಲ್ ಹಕ್ ತಮ್ಮ ಪಾಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಇಂಗ್ಲೆಂಡ್ ಪರವಾಗಿ ಬ್ಯಾಟ್ ಬೀಸಿದ ನಾಸಿರ್ ಹುಸೇನ್ | Oneindia Kannada
ಭಾರತೀಯರನ್ನು ಕೆಣಕಬೇಡಿ ಎಂದಿದ್ದ ಮೈಕಲ್ ವಾನ್!

ಭಾರತೀಯರನ್ನು ಕೆಣಕಬೇಡಿ ಎಂದಿದ್ದ ಮೈಕಲ್ ವಾನ್!

ಒಂದೆಡೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ನಿಕ್ ಕಾಂಪ್ಟನ್ ವಿರಾಟ್ ಕೊಹ್ಲಿ ವಿರುದ್ಧ ಈ ರೀತಿಯ ಆಪಾದನೆಯನ್ನು ಮಾಡಿದ್ದರೆ ಮತ್ತೊಂದೆಡೆ ಇಂಗ್ಲೆಂಡ್ ಕ್ರಿಕೆಟ್‌ನ ದಿಗ್ಗಜ ಮಾಜಿ ಆಟಗಾರ ಮೈಕಲ್ ವಾನ್ ಭಾರತೀಯರನ್ನು ಕೆಣಕಬೇಡಿ ಎಂದು ಇಂಗ್ಲೆಂಡ್ ತಂಡದ ಆಟಗಾರರಿಗೆ ಎಚ್ಚರಿಕೆಯನ್ನು ನೀಡಿದ್ದರು. ವಿರಾಟ್ ಕೊಹ್ಲಿ ಹುಡುಗರು ತುಂಬಾ ತುಂಬಾ ಶಕ್ತಿವಂತರು, ಅವರನ್ನು ಕೆಣಕುವ ಅಗತ್ಯವಿಲ್ಲ ಎಂದು ಮೈಕಲ್ ವಾನ್ ಇಂಗ್ಲೆಂಡ್ ಆಟಗಾರರಿಗೆ ಎಚ್ಚರಿಕೆ ನೀಡಿದ್ದರು.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Thursday, August 19, 2021, 13:22 [IST]
Other articles published on Aug 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X