ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಹ್ಮದಾಬಾದ್‌ನಲ್ಲಿ ಶುಬ್ಮನ್ ಅಬ್ಬರ: ಅಪರೂಪದ ಸಾಧನೆ ಮಾಡಿದ ಗಿಲ್

Ind vs NZ 3rd t20I: Shubman Gill century: becomes 5th Indian to hit hundreds in all formats of cricket

ಟೀಮ್ ಇಂಡಿಯಾದ ಯುವ ಆಟಗಾರ ಶುಬ್ಮನ್ ಗಿಲ್ ಟಿ20 ಮಾದರಿಯಲ್ಲಿಯೂ ತಮ್ಮ ಚೊಚ್ಚಲ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಏಕದಿನ ಮಾದರಿಯಲ್ಲಿ ರನ್ ಮಳೆ ಹರಿಸಿದ್ದ ಗಿಲ್ ಬಳಿಕ ಚುಟುಕು ಮಾದರಿಯಲ್ಲಿ ಮಂಕಾದಂತೆ ಕಂಡುಬಂದಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಚುಟುಕು ಮಾದರಿಯಲ್ಲಿಯೂ ತಾನು ಸಮರ್ಥ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸ್ಪೋಟಕ ಪ್ರದರ್ಶನ ನೀಡಿದ ಗಿಲ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಈ ಪಂದ್ಯದಲ್ಲಿ ಗಿಲ್ ಅಜೇಯ 126 ರನ್ ಸಿಡಿಸುವ ಮೂಲಕ ಭಾರತದ ಪರವಾಗಿ ಟಿ20 ಮಾದರಿಯಲ್ಲಿ ದಾಖಲಾದ ವೈಯಕ್ತಿಕ ಅತೀ ಹೆಚ್ಚಿನ ಮೊತ್ತ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಸಿಡಿಸಿದ್ದ ಅಜೇಯ 122 ರನ್ ಅತೀ ಹೆಚ್ಚಿನ ಸ್ಕೋರ್ ಎನಿಸಿಕೊಂಡಿತ್ತು.

ಈ ಭರ್ಜರಿ ಶತಕ ಸಿಡಿಸುವ ಮೂಲಕ ಶುಬ್ಮನ್ ಗಿಲ್ ಅಪರೂಪದ ಸಾಧನೆಯ ಪಟ್ಟಿ ಸೇರಿಕೊಂಡಿದ್ದಾರೆ. ಎಲ್ಲಾ ಮಾದರಿಯಲ್ಲಿಯೂ ಶತಕವನ್ನು ಸಿಡಿಸಿಉ ಭಾರತೀಯರ ಅಪರೂಪದ ಪಟ್ಟಿ ಇದಾಗಿದ್ದು ಈ ಪಟ್ಟಿಗೆ ಐದನೇ ಆಟಗಾರನಾಗಿ ಗಿಲ್ ಸೇರಿಕೊಂಡಿದ್ದಾರೆ. ಇದಕ್ಕೂ ಮುನ್ನ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ಸುರೇಶ್ ರೈನಾ ಮಾತ್ರವೇ ಈ ಸಾಧನೆ ಮಾಡಿದ್ದರು.

ಇನ್ನು ಟಿ20 ಕ್ರಿಕೆಟ್‌ನಲ್ಲಿ ಶತಕ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ದ್ಗವಿಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಕೂಡ ಗಿಲ್ ಹೊಂದಿದ್ದಾರೆ. ಈ ಸಾಧನೆ ಮಾಡುವ ಸಂದರ್ಭದಲ್ಲಿ ಗಿಲ್‌ಗೆ 23 ವರ್ಷ ಹಾಗೂ 146 ದಿನಗಳಾಗಿದೆ. ಡಿಸೆಂಬರ್ 2022ರಲ್ಲಿ ಶುಬ್ಮನ್ ಗಿಲ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೆಸ್ಟ್ ಶತಕವನ್ನು ಸಿಡಿಸಿದ್ದರು. 2023ರಲ್ಲಿ ಅದ್ಭುತವಾದ ಆರಂಭವನ್ನು ಪಡೆದ ಗಿಲ್ ಏಕದಿನ ಹಾಗೂ ಟಿ20ಯಲ್ಲಿ ಶತಕವನ್ನು ಸಿಡಿಸಿದ್ದಾರೆ.

ಈ ಭರ್ಜರಿ ಪ್ರದರ್ಶನದಿಂದಾಗಿ ಶುಬ್ಮನ್ ಗಿಲ್ ಮೂರು ಮಾದರಿಯಲ್ಲಿಯೂ ತಾನು ಆಡಬಲ್ಲ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಳೆದ ಕ್ರಿಕೆಟ್ ಆವೃತ್ತಿಯಲ್ಲಿಯೂ ಗಿಲ್ ಸಿಕ್ಕ ಅವಕಾಶವನ್ನೆಲ್ಲಾ ಅದ್ಭುತವಾಗಿ ಬಳಸಿಕೊಂಡಿದ್ದು ಬಹುತೇಕ ಎಲ್ಲಾ ಕಡೆಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದರು. ಸ್ಥಿರ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ತೋರಿಸಿದ್ದ ಗಿಲ್ ಮೇಲೆ ಮ್ಯಾನೇಜ್‌ಮೆಂಟ್ ಕೂಡ ಹೆಚ್ಚಿನ ನಂಬಿಕೆಯಿಟ್ಟಿದ್ದು ಆ ನಂಬಿಕೆಯನ್ನು ಗಿಲ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಭಾರತ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೇಲೆ ಚಿತ್ತ ನೆಟ್ಟಿದ್ದು ಫೆಬ್ರವರಿ 9ರಿಂದ ಆರಂಬವಾಗಲಿರುವ ಈ ಸರಣಿ ಕುತೂಹಲ ಮೂಡಿಸಿದೆ. ಈ ಸರಣಿಯಲ್ಲಿಯೂ ಶುಬ್ಮನ್ ಗಿಲ್ ಮೇಲೆ ಸಾಕಷ್ಟು ನಿರೀಕ್ಷೆಯಿದೆ.

Story first published: Thursday, February 2, 2023, 8:32 [IST]
Other articles published on Feb 2, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X