ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND Vs NZ: 3ನೇ ಟಿ20 ಪಂದ್ಯದಲ್ಲೂ ಸ್ಯಾಮ್ಸನ್‌ಗೆ ಇಲ್ಲ ಸ್ಥಾನ, ರಿಷಬ್‌ ಪಂತ್‌ಗೆ ಇದು ಕೊನೆ ಅವಕಾಶ

IND vs NZ: No Place For Sanju Samson, Last Chance For Rishabh Pant In 3rd T20I

ನ್ಯೂಜಿಲೆಂಡ್ ವಿರುದ್ಧದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿ, ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡ ಟೀಂ ಇಂಡಿಯಾ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸಿ, ಸರಣಿಯನ್ನು ವಶಪಡಿಸಿಕೊಳ್ಳುವ ಉತ್ಸಾಹದಲ್ಲಿದೆ. ಮೂರನೇ ಟಿ20 ಪಂದ್ಯ ನೇಪಿಯರ್ ನ ಮೆಕ್‌ಲೀನ್ ಪಾರ್ಕ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ ಸರಣಿಯನ್ನು ವೈಟ್‌ವಾಷ್ ಮಾಡುವ ಅವಕಾಶವಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಯುವ ಪಡೆ 2ನೇ ಟಿ20 ಪಂದ್ಯದಲ್ಲಿ ಅತ್ತುತ್ಯಮ ಆಲ್‌ರೌಂಡ್ ಪ್ರದರ್ಶನ ನೀಡಿತ್ತು. ಸೂರ್ಯಕುಮಾರ್ ಯಾದವ್ ಭರ್ಜರಿ ಶತಕ ಸಿಡಿಸಿದ್ದರು. ದೀಪಕ್ ಹೂಡಾ, ಮೊಹಮ್ಮದ್ ಸಿರಾಜ್, ಯುಜುವಂದ್ರ ಚಹಾಲ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು.

Vijay Hazare Trophy 2022: ಸಿಕ್ಕಿಂ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಕರ್ನಾಟಕVijay Hazare Trophy 2022: ಸಿಕ್ಕಿಂ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಕರ್ನಾಟಕ

ಮೂರನೇ ಪಂದ್ಯದಲ್ಲೂ ತಮ್ಮ ಉತ್ತಮ ಆಟವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ ಟೀಂ ಇಂಡಿಯಾ. ಮತ್ತೊಂದೆಡೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸ್ ಮೂರನೇ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದು, ಟಿಮ್ ಸೌಥಿ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಕೇನ್ ವಿಲಿಯಮ್ಸನ್ ಬದಲಿಗೆ ಮಿಚೆಲ್ ಬ್ರಾಸ್‌ವೆಲ್ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಸ್ಯಾಮ್ಸನ್, ಮಲಿಕ್ ಕಾಯುವಿಕೆಗೆ ಅಂತ್ಯ ಯಾವಾಗ?

ಸ್ಯಾಮ್ಸನ್, ಮಲಿಕ್ ಕಾಯುವಿಕೆಗೆ ಅಂತ್ಯ ಯಾವಾಗ?

ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ತಂಡ ಮೂರನೇ ಪಂದ್ಯದಲ್ಲಿ ಆಡುವ ಬಳಗವನ್ನು ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಸಂಜು ಸ್ಯಾಮ್ಸನ್ ಮತ್ತು ಉಮ್ರಾನ್ ಮಲಿಕ್ ಅವರು ಅವಕಾಶ ಪಡೆಯಲು ಮತ್ತೊಂದು ಸರಣಿಗಾಗಿ ಕಾಯಬೇಕಾಗುತ್ತದೆ.

ಅದರಲ್ಲೂ ರಿಷಬ್ ಪಂತ್ ಎರಡನೇ ಟಿ20 ಪಂದ್ಯದಲ್ಲಿ ವಿಫಲರಾಗಿದ್ದರೂ ಅವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಇದ್ದು, ಸಂಜು ಸ್ಯಾಮ್ಸನ್ ಅವಕಾಶ ಪಡೆಯುವುದು ಅನುಮಾನವಾಗಿದೆ. ಈ ಬಗ್ಗೆ ಈಗಾಗಲೇ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijay Hazare Trophy: ರೋಹಿತ್ ಶರ್ಮಾರ 264 ರನ್ ದಾಖಲೆ ಧೂಳಿಪಟ ಮಾಡಿದ ಜಗದೀಸನ್

ರಿಷಬ್‌ ಪಂತ್‌ಗೆ ಇದೇ ಕೊನೆ ಚಾನ್ಸ್?

ರಿಷಬ್‌ ಪಂತ್‌ಗೆ ಇದೇ ಕೊನೆ ಚಾನ್ಸ್?

ಭಾರತದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಉತ್ತಮ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಟಿ20 ಮಾದರಿ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ. ಪದೇ ಪದೇ ಅವರ ಬ್ಯಾಟಿಂಗ್ ಕ್ರಮಾಂಕ ಬದಲಿಸುವುದು, ಸತತವಾಗಿ ಅವಕಾಶಗಳನ್ನು ನೀಡದಿರುವುದು ಅಸ್ಥಿರ ಪ್ರದರ್ಶನಕ್ಕೆ ಕಾರಣ ಎಂದರೂ, ಪಂತ್ ತಮಗೆ ಸಿಗುತ್ತಿರುವ ಅವಕಾಶಗಳನ್ನು ಕನಿಷ್ಠ ಕೂಡ ಸದ್ಭಳಕೆ ಮಾಡಿಕೊಂಡಿಲ್ಲ ಎನ್ನುವುದು ಕೂಡ ಸತ್ಯ.

ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ವಿಫಲವಾದ ಪಂತ್, ಇಂಗ್ಲೆಂಡ್ ವಿರುದ್ಧವೂ ಕಳಪೆ ಆಟ ಆಡಿದರು. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದರೂ ಅವರು ರನ್ ಗಳಿಸಲಿಲ್ಲ. ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡದಿರುವ ಬಗ್ಗೆ ಈಗಾಗಲೇ ಟೀಕೆ ವ್ಯಕ್ತವಾಗುತ್ತಿದ್ದು, ಪಂತ್‌ಗೆ ಇದು ಕೊನೆಯ ಅವಕಾಶವಾಗುವ ಸಾಧ್ಯತೆ ಇದೆ.

ಇನ್ನೂ ಕಾಯಬೇಕಿದೆ ಉಮ್ರಾನ್ ಮಲಿಕ್

ಇನ್ನೂ ಕಾಯಬೇಕಿದೆ ಉಮ್ರಾನ್ ಮಲಿಕ್

ಭಾರತದ ವೇಗಿ ಉಮ್ರಾನ್ ಮಲಿಕ್ ವರ್ಷದ ನಂತರ ಸರಣಿಯಲ್ಲಿ ಸ್ಥಾನ ಪಡೆದಿದ್ದರೂ, ಅವರು ಪಂದ್ಯವನ್ನಾಡಲೂ ಕಾಯುವಿಕೆಯನ್ನು ಮುಂದುವರೆಸಬೇಕಿದೆ. ಎರಡನೇ ಟಿ20 ಪಂದ್ಯದಲ್ಲಿ ಭಾರತದ ಬೌಲಿಂಗ್ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡಿರುವುದರಿಂದ ಉಮ್ರಾನ್ ಮಲಿಕ್ ಮೂರನೇ ಟಿ20 ಪಂದ್ಯದಲ್ಲಿ ಸ್ಥಾನ ಪಡೆಯುವುದು ಬಹುತೇಕ ಅನುಮಾನವಾಗಿದೆ.

ಬ್ಯಾಟಿಂಗ್‌ನಲ್ಲಿ ವಿಫಲರಾದರೂ ದೀಪಕ್ ಹೂಡಾ ಕೂಡ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು, ಕುಲದೀಪ್ ಯಾದವ್ ಕೂಡ ಅವಕಾಶ ಪಡೆಯಲಾರರು, ಒಂದು ವೇಳೆ ತಂಡ ವಾಷಿಂಗ್ಟನ್ ಸುಂದರ್ ಬದಲಿಗೆ ಉಮ್ರಾನ್ ಮಲಿಕ್‌ಗೆ ಅವಕಾಶ ನೀಡಿ ಪ್ರಯೋಗ ಮಾಡಬಹುದು.

"ಎಲ್ಲರಿಗೂ ಅವಕಾಶ ಕೊಡಬೇಕು ಎನ್ನುವ ಆಸೆ ನನಗೂ ಇದೆ. ಆದರೆ ಇನ್ನು ಉಳಿದಿರುವುದು ಒಂದೇ ಪಂದ್ಯ, ಇದು ಸರಣಿ ನಿರ್ಣಾಯಕ ಪಂದ್ಯವಾಗಿರುವುದರಿಂದ, ವಿಜೇತ ತಂಡವನ್ನೇ ಉಳಿಸಿಕೊಳ್ಳಬೇಕಾ, ಬದಲಾವಣೆ ಮಾಡಬೇಕಾ ಎಂದು ತೀರ್ಮಾನಿಸುವುದು ತುಂಬಾಕಷ್ಟ, ನೇಪಿಯರ್ ನಲ್ಲಿನ ಸ್ಥಿತಿಗತಿಗಳನ್ನು ನೋಡಿ ತೀರ್ಮಾನ ಮಾಡಲಾಗುವುದು" ಎಂದು ನಾಯಕ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.

Story first published: Monday, November 21, 2022, 19:06 [IST]
Other articles published on Nov 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X