ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶುಬ್ಮನ್ ಗಿಲ್ ದಾಖಲೆಯ ದ್ವಿಶತಕದ ಬಳಿಕ ವೈರಲ್ ಆಯ್ತು ರೋಹಿತ್ ಶರ್ಮಾ 'ಭವಿಷ್ಯ'ದ ಟ್ವೀಟ್

IND vs NZ: Rohit Sharma’s old tweet on Shubman Gill goes viral after Double Hundred against New Zeakland

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಯುವ ಆಟಗಾರ ಶುಬ್ಮನ್ ಗಿಲ್ ದಾಖಲೆಯ ದ್ವಿಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಅಮೋಘ ಸಾಧನೆಗೆ ಕ್ರಿಕೆಟ್ ದಿಗ್ಗಜರು ಹಾಗೂ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವೇ ಹರಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸುಮಾರು ಮೂರು ವರ್ಷಗಳ ಹಿಂದೆ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.

2023ರಲ್ಲಿ ಶುಬ್ಮನ್ ಗಿಲ್ ಅದ್ಭುತ ಆರಂಭವನ್ನು ಪಡೆದುಕೊಂಡಿದ್ದು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅದಾಗಲೇ ಒಂದು ಶತಕ ಸಿಡಿಸಿ ಮಿಂಚಿದ್ದರು. ಇದೀಗ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ದ್ವಿಶತಕವನ್ನು ಕೂಡ ಸಿಡಿಸಿ ಅಬ್ಬರಿಸಿದ್ದಾರೆ. ಕಳೆದ ನಾಲ್ಕು ಏಕದಿನ ಪಂದ್ಯಗಳಲ್ಲಿ ಶುಬ್ಮನ್ ಗಿಲ್ 415 ರನ್‌ಗಳನ್ನು ಗಳಿಸಿದ್ದು 103.75ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಇನ್ನು ಈ ವರ್ಷವೇ ಗಿಲ್ ಟಿ20ಗೂ ಪದಾರ್ಪಣೆ ಮಾಡಿದ್ದಾರಾದರೂ ಮಿಂಚಲು ವಿಫಲವಾದರು.

ಹೈದರಾಬಾದ್‌ನಲ್ಲಿ ಶುಬ್ಮನ್ ಗಿಲ್ ಸಿಡಿಸಿದ ದಾಖಲೆಯ ದ್ವಿಶತಕದ ಬಳಿಕ ರೋಹಿತ್ ಶರ್ಮಾ ಮಾಡಿರುವ ಟ್ವೀಟ್‌ವೊಂದು ವೈರಲ್ ಆಗಿದೆ. ಈ ಟ್ವೀಟ್‌ನಲ್ಲಿ ರೋಹಿತ್ ಶರ್ಮಾ "ದಿ ಫ್ಯೂಚರ್" ಎಂದು ಬಣ್ಣಿಸಿದ್ದರು. 2020ರಲ್ಲಿ ಶುಬ್ಮನ್ ಗಿಲ್ ರೋಹಿತ್ ಶರ್ಮಾ ಹುಟ್ಟುಹಬ್ಬದಂದು ಶುಭಾಶಯ ಕೋರಿ ಟ್ವಿಟ್ ಮಾಡಿದ್ದರು. ಇದಕ್ಕೆ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿ "ತ್ಯಾಂಕ್ಸ್ ಫ್ಯೂಚರ್" ಎಂದು ರಿಟ್ವೀಟ್ ಮಾಡಿದ್ದರು. ಈ ಟ್ವೀಟ್ ಈಗ ವೈರಲ್ ಆಗಿದೆ.

ಇನ್ನು ರೋಹಿತ್ ಶರ್ಮಾ ಹೀಗೆ ಮಾಡಿರುವ ಟ್ವೀಟ್‌ಗಳು ಈ ಹಿಂದೆ ಕೂಡ ವೈರಲ್ ಆಗಿರುವ ಇತಿಹಾಸವಿದೆ. ಸೂರ್ಯಕುಮಾರ್ ಯಾದವ್ ಬಗ್ಗೆ ರೋಹಿತ್ ಶರ್ಮಾ 2011ರಲ್ಲಿಯೇ ಟ್ವೀಟ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಭರವಸೆಯ ಮಾತುಗಳನ್ನಾಡಿದ್ದರು. ಇದು ಕೂಡ ಸಾಕಷ್ಟು ವೈರಲ್ ಆಗಿತ್ತು.

2011ರಲ್ಲಿ ರೋಹಿತ್ ಶರ್ಮಾ "ಚೆನ್ನೈನಲ್ಲಿ ಬಿಸಿಸಿಐ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದೆ. ಕೆಲ ಅದ್ಭುತ ಆಟಗಾರರು ಭವಿಷ್ಯದಲ್ಲಿ ಬರಲು ಉತ್ಸುಕರಾಗಿದ್ದಾರೆ. ಮುಂಬೈನಿಂದ ಸೂರ್ಯಕುಮಾರ್ ಯಾದವ್ ಅವರನ್ನು ಭವಿಷ್ಯದಲ್ಲಿ ಎದುರುನೋಡಬಹುದು" ಎಂದು ಟ್ವಿಟ್ ಮಾಡಿದ್ದರು. ಇದು ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಾಗ ಸಾಕಷ್ಟು ವೈರಲ್ ಆಗಿತ್ತು.

Story first published: Thursday, January 19, 2023, 18:04 [IST]
Other articles published on Jan 19, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X