ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA 1st T20I: ಬೌಲಿಂಗ್ ವೇಳೆ ಅರ್ಷ್‌ದೀಪ್‌ಗೆ ಅಂಪೈರ್ ವಾರ್ನಿಂಗ್‌

asrsh

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಆಟಗಾರ ಅರ್ದೀಪ್ ಸಿಂಗ್ ಅದ್ಭುತ ಬೌಲಿಂಗ್ ಮಾಡಿದ್ದಾರೆ. ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಬುಮ್ರಾ ಕೂಡ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಈ ವೇಳೆಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಅರ್ಷ್‌ದೀಪ್ ಸಿಂಗ್ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಲ್ಲದೆ, ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾದ್ರು.

ಪಂದ್ಯ ಎರಡನೇ ಓವರ್‌ನಲ್ಲಿ, ಅರ್ಷ್‌ದೀಪ್ ಮೂರು ವಿಕೆಟ್ ಉರುಳಿಸಿದ್ರು. ಕ್ವಿಂಟನ್ ಡಿಕಾಕ್ 1, ರಿಲ್ಲೈ ರೊಸ್ಸೊ 0, ಡೇವಿಡ್ ಮಿಲ್ಲರ್ 0 ಸುತ್ತಿ ಪೆವಿಲಿಯನ್ ಸೇರಿಕೊಂಡರು. ಹೀಗೆ ಎರಡು ಓವರ್‌ಗಳಲ್ಲಿ 8ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ, ಮೂರನೇ ಓವರ್‌ನಲ್ಲಿ ಮತ್ತೊಂದು ವಿಕೆಟ್ ಕಳೆದುಕೊಂಡಿತು. ದೀಪಕ್ ಚಹಾರ್ ಎರಡನೇ ಓವರ್‌ನಲ್ಲಿ ಟ್ರಿಸ್ಟನ್ ಸ್ಟಬ್ಸ್‌ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು. ಅರ್ಷ್‌ದೀಪ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದ್ರು.

ದ.ಆಫ್ರಿಕಾ ವಿರುದ್ಧದ T20 ಪಂದ್ಯದಿಂದ ಹೊರಗುಳಿದ ಬುಮ್ರಾ: ಫ್ಯಾನ್ಸ್‌ ಅಸಮಾಧಾನದ.ಆಫ್ರಿಕಾ ವಿರುದ್ಧದ T20 ಪಂದ್ಯದಿಂದ ಹೊರಗುಳಿದ ಬುಮ್ರಾ: ಫ್ಯಾನ್ಸ್‌ ಅಸಮಾಧಾನ

ಹೀಗೆ ಅರ್ಷ್‌ದೀಪ್ ಹಾಗೂ ದೀಪಕ್ ಚಹಾರ್ ಬೌಲಿಂಗ್‌ನಿಂದಾಗಿ ದ. ಆಫ್ರಿಕಾ 9 ರನ್‌ಗೆ 5 ವಿಕೆಟ್ ಕಳೆದುಕೊಂಡಿತು. ಜೊತೆಗೆ ಹರ್ಷಲ್ ಪಟೇಲ್ ಸಾಥ್ ಕೊಟ್ಟ ಹಿನ್ನಲೆ ಪ್ರವಾಸಿಗರು ಕೇವಲ 106ರನ್‌ಗಳಿಸಲಷ್ಟೇ ಶಕ್ತರಾದ್ರು.

ಭಾರತದ ಪರ ಅದ್ಭುತ ಬೌಲಿಂಗ್ ಮಾಡಿದ ಅರ್ಷ್‌ದೀಪ್ ಸಿಂಗ್ 32 ರನ್ ನೀಡಿ 3 ವಿಕೆಟ್ ಪಡೆದ್ರೆ, ದೀಪಕ್ ಚಹಾರ್ 24 ರನ್ ನೀಡಿ 2 ವಿಕೆಟ್ ಸಂಪಾದಿಸಿದರು. ಇನ್ನು ಹರ್ಷಲ್ ಪಟೇಲ್ 26 ರನ್‌ ನೀಡಿ 2 ವಿಕೆಟ್ ಉರುಳಿಸಿದರು. ಅಕ್ಷರ್ ಪಟೇಲ್ ಕೇವಲ 16 ರನ್ ನೀಡಿ 1 ವಿಕೆಟ್ ತನ್ನ ಖಾತೆಗೆ ಹಾಕಿಕೊಂಡರು.

ಈ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆಯಲ್ಲಿ ಅರ್ಷ್‌ದೀಪ್ ಸಿಂಗ್ ಅಂಪೈರ್‌ನಿಂದ ವಾರ್ನಿಂಗ್ ಪಡೆದರು. ಅರ್ಷ್‌ದೀಪ್ ಸಾಮಾನ್ಯವಾಗಿ ಯಾವಾಗಲೂ ಡೆತ್ ಓವರ್‌ನಲ್ಲಿ 2 ಓವರ್‌ಗಳನ್ನು ಬೌಲ್ ಮಾಡುತ್ತಾರೆ. ಆದರೆ ಅವರು ಪವರ್‌ಪ್ಲೇನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ಕಾರಣ, ರೋಹಿತ್ ಶರ್ಮಾ ಪವರ್‌ಪ್ಲೇನಲ್ಲಿ ಹೆಚ್ಚುವರಿ ಓವರ್ ಬೌಲ್ ಮಾಡಲು ನೀಡಿದ್ರು.

ಈ ವೇಳೆಯಲ್ಲಿ ಅರ್ಷ್‌ದೀಪ್ ಸಿಂಗ್ ಚೆಂಡನ್ನು ಹಿಡಿಯಲು ಹೋಗಿ ಪಿಚ್ ಮಧ್ಯಕ್ಕೆ ಬಂದರು. ಇದನ್ನು ಕಂಡ ಅಂಪೈರ್ ಅರ್ಷ್‌ದೀಪ್‌ಗೆ ಎಚ್ಚರಿಕೆ ನೀಡಿದರು. ಯಾವುದೇ ಆಟಗಾರನು ತನ್ನ ಪಾದವನ್ನು ನೇರವಾಗಿ ಸ್ಟಂಪ್‌ಗಳ ಕಡೆಯ ಸಾಲಿನಲ್ಲಿ ಇಡಬಾರದು. ಬೌಲರ್‌ಗಳು ಆ ಸ್ಥಳದಲ್ಲಿ ಓಡಿದರೆ ಅಂಪೈರ್ ಎಚ್ಚರಿಕೆ ನೀಡುತ್ತಾರೆ. ಆ ತಪ್ಪನ್ನು ನಿರಂತರವಾಗಿ ಮಾಡಿದರೆ, ಆ ನಂತರ ಬೌಲರ್‌ಗೆ ಉಳಿದ ಓವರ್‌ಗಳನ್ನು ಬೌಲ್ ಮಾಡಲು ಸಾಧ್ಯವಾಗುವುದಿಲ್ಲ. ಈ ನಿಯಮದಿಂದಾಗಿ ಅರ್ಷ್‌ದೀಪ್ ಸಿಂಗ್ ಸ್ವಲ್ಪ ಉದ್ವೇಗಕ್ಕೆ ಒಳಗಾದರು ಮತ್ತು ನಂತರ ಪಿಚ್‌ನ ಮಧ್ಯದಿಂದ ಹೊರನಡೆದರು.

ಸ್ಟಂಪ್‌ಗಳ ವಿರುದ್ಧ ನೇರವಾಗಿ ಪಿಚ್‌ನ ಆ ಭಾಗವನ್ನು ಅಪಾಯದ ವಲಯ ಎಂದು ಕರೆಯಲಾಗುತ್ತದೆ. ಏಕೆಂದರೆ ಶೂ ಕಾಲಿನಿಂದ ಅಲ್ಲಿಗೆ ಓಡಿದರೆ ಅದು ಪಿಚ್‌ಗೆ ಹಾನಿ ಮಾಡುತ್ತದೆ. ಆದ್ದರಿಂದ ಬ್ಯಾಟ್ಸ್‌ಮನ್‌ಗಳು ಚೆಂಡನ್ನು ಎದುರಿಸುವಾಗ, ಚೆಂಡು ಆ ಜಾಗಕ್ಕೆ ಬಡಿದರೆ ಅನಿರೀಕ್ಷಿತವಾಗಿ ವರ್ತಿಸುತ್ತದೆ.

Story first published: Thursday, September 29, 2022, 0:02 [IST]
Other articles published on Sep 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X