ನಾಯಕನಾದ ಆರಂಭದಲ್ಲೇ 2 ಏಕದಿನ ಪಂದ್ಯ ಸೋತ ಕೆ.ಎಲ್. ರಾಹುಲ್‌ : ಎಲೈಟ್ ಲಿಸ್ಟ್‌ನಲ್ಲಿ ಸೇರ್ಪಡೆ

ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾದ ನಾಯಕನಾಗಿ ಏಕದಿನ ಸರಣಿಯಲ್ಲಿ ಭಾರತವನ್ನ ಮುನ್ನಡೆಸುತ್ತಿರುವ ಕೆ.ಎಲ್ ರಾಹುಲ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾಗಿದ್ದಾರೆ. ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಮುನ್ನಡೆದ ಭಾರತ ಮೊದಲೆರಡು ಏಕದಿನ ಪಂದ್ಯದಲ್ಲಿ ಸೋಲನ್ನ ಕಂಡಿದೆ.

ಪಾರ್ಲ್‌ನ ಬೊಲ್ಯಾಂಡ್ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತವು 31ರನ್‌ಗಳಿಂದ ಸೋಲನ್ನ ಕಂಡಿತ್ತು. ಇದಾದ ಬಳಿಕ ಅದೇ ಮೈದಾನದಲ್ಲಿ ಶುಕ್ರವಾರ (ಜ. 21) ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ.

Ind vs SA 2nd ODI: ದ. ಆಫ್ರಿಕಾಗೆ 7 ವಿಕೆಟ್‌ಗಳ ಜಯ, ಸರಣಿ ಗೆಲುವುInd vs SA 2nd ODI: ದ. ಆಫ್ರಿಕಾಗೆ 7 ವಿಕೆಟ್‌ಗಳ ಜಯ, ಸರಣಿ ಗೆಲುವು

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಗೆ 288 ರನ್‌ಗಳ ಗುರಿಯನ್ನ ನೀಡಿತ್ತು. ಈ ಸುಲಭ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಇನ್ನೂ 11 ಎಸೆತ ಬಾಕಿ ಇರುವಂತೆಯೇ ಪಂದ್ಯ ಗೆದ್ದು ಬೀಗಿತು. ಈ ಮೂಲಕ ಭಾರತದ ವಿರುದ್ಧ ಮೊದಲೆರಡು ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ ಸರಣಿಯನ್ನ ತನ್ನದಾಗಿಸಿಕೊಂಡಿದೆ.

ತಾನು ನಾಯಕತ್ವ ವಹಿಸಿದ ಮೊದಲೆರಡು ಪಂದ್ಯದಲ್ಲೇ ಕೆ.ಎಲ್ ರಾಹುಲ್‌ ಸೋಲನ್ನ ಕಂಡ ಮೊದಲ ನಾಯಕರೇನಲ್ಲ. ಭಾರತದ ಪರ ಕೆಲ ಖ್ಯಾತ ನಾಮ ಕ್ರಿಕೆಟಿಗರು ತಾವು ನಾಯಕತ್ವ ವಹಿಸಿಕೊಂಡಾಗ ಸೋಲಿನ ಹೆಜ್ಜೆಯ ಮೂಲಕವೇ ಆರಂಭಿಸಿದ್ದಾರೆ. ಹೀಗೆ ತಮ್ಮ ಮೊದಲೆರಡು ಪಂದ್ಯ ಸೋತ ಭಾರತದ ನಾಯಕರು ಯಾರು ಎಂಬುದನ್ನ ಈ ಕೆಳಗೆ ತಿಳಿಯಿರಿ

ಕೊಹ್ಲಿ ರಾಹುಲ್ ಮಧ್ಯೆ ವೈಮನಸ್ಸಿದೆ ಅನ್ನೋದಕ್ಕೆ ಸಾಕ್ಷಿಯಾಯ್ತು ಈ ಘಟನೆ | Oneindia Kannada

ಅಜಿತ್ ವಾಡೇಕರ್
ದಿಲೀಪ್ ವೆಂಗಸರ್ಕಾರ್
ಕೃಷ್ಣಮಾಚಾರಿ ಶ್ರೀಕಾಂತ್
ಮೊಹಮ್ಮದ್ ಅಜರುದ್ದೀನ್
ಕೆ.ಎಲ್ ರಾಹುಲ್

For Quick Alerts
ALLOW NOTIFICATIONS
For Daily Alerts
Story first published: Friday, January 21, 2022, 23:05 [IST]
Other articles published on Jan 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X