Ind Vs SA T20: ಮುಂದಿನ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್‌ರನ್ನು ಆಡಿಸಲ್ಲ ಎಂದಿದ್ಯಾಕೆ ರೋಹಿತ್ ಶರ್ಮಾ

ಸೂರ್ಯಕುಮಾರ್ ಯಾದವ್ ಸದ್ಯ ವಿಶ್ವ ಟಿ20 ಕ್ರಿಕೆಟ್‌ನ ಸೆನ್ಸೇಷನ್. ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಆಟಗಾರ, ಶೀಘ್ರದಲ್ಲೇ ನಂಬರ್ 1 ಪಟ್ಟಕ್ಕೇರುವ ಸಾಧ್ಯತೆ ಇದೆ. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಇವರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ 18 ಎಸೆತಗಳಲ್ಲೇ ಅರ್ಧಶತಕ ಬಾರಿಸಿದ ಸೂರ್ಯಕುಮಾರ್ ಯಾದವ್, ಟೀಂ ಇಂಡಿಯಾ ಬೃಹತ್ ಮೊತ್ತ ಗಳಿಸಲು ಕಾರಣವಾದರು. ಕಳೆದ ಮೂರು ಪಂದ್ಯಗಳಿಂದ ಸೂರ್ಯಕುಮಾರ್ ಯಾದವ್ ಸತತವಾಗಿ ಅರ್ಧಶತಕ ಗಳಿಸುತ್ತಿದ್ದಾರೆ.

ಟಿ20 ವಿಶ್ವಕಪ್‌ನಿಂದ ಜಸ್ಪ್ರಿತ್ ಬೂಮ್ರಾ ಔಟ್: ಅಧಿಕೃತವಾಗಿ ಘೋಷಿಸಿದ ಬಿಸಿಸಿಐಟಿ20 ವಿಶ್ವಕಪ್‌ನಿಂದ ಜಸ್ಪ್ರಿತ್ ಬೂಮ್ರಾ ಔಟ್: ಅಧಿಕೃತವಾಗಿ ಘೋಷಿಸಿದ ಬಿಸಿಸಿಐ

4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸೂರ್ಯಕುಮಾರ್ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಪಂದ್ಯದ ನಂತರ ನಾಯಕ ರೋಹಿತ್ ಶರ್ಮಾ ಸೂರ್ಯ ಕುಮಾರ್ ಯಾದವ್ ಪ್ರದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರ ಹರ್ಷ ಬೋಗ್ಲೆ ಫಾರ್ಮ್ ಬಗ್ಗೆ ಕೇಳಿರುವ ಪ್ರಶ್ನೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಖತ್ತಾಗಿ ಉತ್ತರ ನೀಡಿದ್ದಾರೆ.

ವಿಶ್ವಕಪ್‌ವರೆಗೆ ಆತನ ಫಾರ್ಮ್ ಹೇಗೆ ರಕ್ಷಿಸುತ್ತೀರಿ

ವಿಶ್ವಕಪ್‌ವರೆಗೆ ಆತನ ಫಾರ್ಮ್ ಹೇಗೆ ರಕ್ಷಿಸುತ್ತೀರಿ

ಎರಡನೇ ಟಿ20 ಪಂದ್ಯದ ನಂತರದ ಹರ್ಷ ಭೋಗ್ಲೆ ಭಾರತ ತಂಡದ ನಾಯಕನನ್ನು, "ನೀವು ಸೂರ್ಯಕುಮಾರ್ ಯಾದವ್‌ರ ಫಾರ್ಮ್ ಅನ್ನು ಹೇಗೆ ಒಟ್ಟಿಗೆ ಇಡುತ್ತೀರಿ? ಅವರು ಇರುವ ಫಾರ್ಮ್ ಅದನ್ನು ರಕ್ಷಿಸಿ. ನೀವು ಅದನ್ನು ಹೇಗೆ ಒಟ್ಟಿಗೆ ಹಿಡಿದಿಟ್ಟುಕೊಳ್ಳುತ್ತೀರಿ?" ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರ ನೀಡಿದ ರೋಹಿತ್ ಶರ್ಮಾ, "ಇನ್ನು ಮುಂದಿನ ಪಂದ್ಯಗಳಲ್ಲಿ ಆತನನ್ನು ಆಡಿಸಬಾರದು ಎಂದು ಯೋಚಿಸಿದ್ದೇನೆ. ಅವನು ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದವರೆಗೆ ರೆಸ್ಟ್ ತೆಗೆದುಕೊಳ್ಳಬೇಕು ಎಂದು ತಮಾಷೆಯಾಗಿ ಉತ್ತರಿಸದ್ದಾರೆ. ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಆಟವನ್ನು ಆಡಲು ಬಯಸುತ್ತಾನೆ, ಆತ ವಿಶ್ವಕಪ್‌ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಾನೆ. ಅವನನ್ನು ಸಂತೋಷವಾಗಿಡಲು ನಾವು ಬಯಸುತ್ತೇವೆ." ಎಂದು ಹೇಳಿದ್ದಾರೆ.

Ind Vs Sa T20: ಮೂರನೇ ಟಿ20 ಪಂದ್ಯದಲ್ಲಿ ಕೊಹ್ಲಿ, ರಾಹುಲ್‌ಗೆ ವಿಶ್ರಾಂತಿ, ಯಾರಿಗೆ ಸಿಗುತ್ತೆ ಅವಕಾಶ?

ಭರ್ಜರಿ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್

ಭರ್ಜರಿ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯದಿಂದ ಸತತವಾಗಿ ಅರ್ಧಶತಕಗಳನ್ನು ಗಳಿಸುತ್ತಿದ್ದಾರೆ. ಪ್ರಸ್ತುತ ಟಿ20 ಮಾದರಿಯಲ್ಲಿ ಆತ ಅತ್ಯುತ್ತಮ ಆಟಗಾರ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಆಸ್ಟ್ರೇಲಿಯಾ ವಿರುದ್ಧ ಹೈದರಾಬಾದ್‌ನಲ್ಲಿ 36 ಎಸೆತಗಳಲ್ಲಿ 69 ಗಳಿಸಿದ್ದ ಸೂರ್ಯಕುಮಾರ್ ಯಾದವ್, ತಿರುವನಂತಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲಿ 33 ಎಸೆತಗಳಲ್ಲಿ 50 ರನ್ ಗಳಿಸಿದರೆ. ಭಾನುವಾರ ಗುವಾಹಟಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 2 ನೇ ಟಿ 20 ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 22 ಎಸೆತಗಳಲ್ಲಿ 61 ರನ್ ಗಳಿಸಿ ರನ್‌ಔಟ್ ಆದರು.

ಡೇವಿಡ್ ಮಿಲ್ಲರ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು

ಡೇವಿಡ್ ಮಿಲ್ಲರ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು

ಪಂದ್ಯದ ನಂತರ ಮಾತನಾಡಿದ ಸೂರ್ಯಕುಮಾರ್ ಯಾದವ್, ನಾವು ಮೊದಲು ಬ್ಯಾಟಿಂಗ್ ಮಾಡುತ್ತಿದ್ದೆವು, ರಾಹುಲ್ ಮತ್ತು ರೋಹಿತ್ ಶರ್ಮಾ ಉತ್ತಮವಾಗಿ ಆರಂಭ ಒದಗಿಸಿದರು. ನಾನು ಅದನ್ನು ಮುಂದುವರೆಸಬೇಕಾಗಿತ್ತು. ನಾನು ಬ್ಯಾಟಿಂಗ್ ಮಾಡುವಾಗ ಆನಂದಿಸಿದೆ ಎಂದು ಹೇಳಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡುವಾಗ, ನೀವು ಗುರಿಯನ್ನು ಹೊಂದಿಸಲು ಸಾಧ್ಯವಿಲ್ಲ ಮತ್ತು ನೀವು ಸಾಧ್ಯವಾದಷ್ಟು ರನ್ ಗಳಿಸಲು ಪ್ರಯತ್ನಿಸಬೇಕು ಎಂದರು. ಡೇವಿಡ್ ಮಿಲ್ಲರ್ ಶತಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಸೂರ್ಯಕುಮಾರ್ ಯಾದವ್ ಅವರು ಸುಂದರವಾಗಿ ಬ್ಯಾಟಿಂಗ್ ಮಾಡಿದರು, ನಾನು ಅದನ್ನು ಆನಂದಿಸಿದೆ ಎಂದು ಹೇಳಿದ್ದಾರೆ,

For Quick Alerts
ALLOW NOTIFICATIONS
For Daily Alerts
Story first published: Monday, October 3, 2022, 21:58 [IST]
Other articles published on Oct 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X