ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೀನ್ ಎಲ್ಗರ್ ವಿಕೆಟ್ ಪಡೆಯಲು ಬುಮ್ರಾಗೆ ಸಹಾಯವಾಯಿತು ಕೊಹ್ಲಿ ಹೇಳಿದ ಆ ಒಂದು ಮಾತು

IND vs SA : Virat Kohli told Jasprit Bumrah to take around the wicket to Dean Elgar in 1st innings
India vs South Africa, 1st Test Day 4: Team India ಗೆಲುವಿಗೆ ಎದುರಾಯ್ತು ಅತಿದೊಡ್ಡ ಕಂಟಕ |Oneindia Kannada

ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಹರಿಣಗಳ ವಿರುದ್ಧ ಮೊದಲಿಗೆ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾದಾಡುತ್ತಿರುವ ಟೀಮ್ ಇಂಡಿಯಾ ಈ ಬಾರಿ ಹರಿಣಗಳ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದು ಇತಿಹಾಸ ಸೃಷ್ಟಿಸುವ ಯೋಜನೆಯಲ್ಲಿದೆ. ಈ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಡಿಸೆಂಬರ್ 26ರ ಬಾಕ್ಸಿಂಗ್ ಡೇನಿಂದ ಆರಂಭವಾಗಿದ್ದು ಈ ಪಂದ್ಯ ಸೆಂಚೂರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಡಿಸೆಂಬರ್ 26ರಂದು ಆರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆರಿಸಿಕೊಂಡರು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಅವರ ಉತ್ತಮ ಪ್ರದರ್ಶನದಿಂದ ಮೊದಲನೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ನಷ್ಟಕ್ಕೆ 327 ರನ್ ಕಲೆಹಾಕಿತು. ಇನ್ನು ಮೊದಲನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡದ ಪರ ಆರಂಭಿಕ ಆಟಗಾರರಾಗಿ ತಂಡದ ನಾಯಕ ಡೀನ್ ಎಲ್ಗರ್ ಮತ್ತು ಏಡನ್ ಮಾರ್ಕ್ರಮ್ ಕಣಕ್ಕಿಳಿದರು. ದಕ್ಷಿಣ ಆಫ್ರಿಕಾ ತಂಡದ ಡೀನ್ ಎಲ್ಗರ್ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಎದುರಾಳಿ ತಂಡಗಳಿಗೆ ಮಾರಕವಾಗಬಲ್ಲಂತಹ ದಾಂಡಿಗ ಎಂಬುದು ತಿಳಿದಿರುವ ವಿಷಯವೇ.

ಸನ್ ರೈಸರ್ಸ್ ಫ್ರಾಂಚೈಸಿ ಬಗ್ಗೆ ಆಡಿದ ಆ ಮಾತಿಗೆ ವಾರ್ನರ್‌ ವಿರುದ್ಧ ಕಿಡಿಕಾರಿದ ಅಭಿಮಾನಿಗಳುಸನ್ ರೈಸರ್ಸ್ ಫ್ರಾಂಚೈಸಿ ಬಗ್ಗೆ ಆಡಿದ ಆ ಮಾತಿಗೆ ವಾರ್ನರ್‌ ವಿರುದ್ಧ ಕಿಡಿಕಾರಿದ ಅಭಿಮಾನಿಗಳು

ಮೊದಲನೇ ಓವರ್‌ನಲ್ಲಿಯೇ ವಿಕೆಟ್ ಕಳೆದುಕೊಂಡ ಡೀನ್ ಎಲ್ಗರ್

ಮೊದಲನೇ ಓವರ್‌ನಲ್ಲಿಯೇ ವಿಕೆಟ್ ಕಳೆದುಕೊಂಡ ಡೀನ್ ಎಲ್ಗರ್

ಹೀಗಾಗಿ ಭಾರತ ತಂಡ ಮೊದಲು ಡೀನ್ ಎಲ್ಗರ್ ಅವರ ವಿಕೆಟ್ ಕಬಳಿಸಲು ಸಾಮಾನ್ಯವಾಗಿ ಯೋಜನೆಯನ್ನು ಹಾಕಿಕೊಂಡಿತ್ತು. ಅದರಂತೆ ಡೀನ್ ಎಲ್ಗರ್ ಕಣಕ್ಕಿಳಿದಾಗ ವಿರಾಟ್ ಕೊಹ್ಲಿ ಮೊದಲನೇ ಒವರ್ ಬೌಲಿಂಗ್ ಮಾಡಲು ಜಸ್ಪ್ರೀತ್ ಬೂಮ್ರಾ ಅವರನ್ನು ಆಹ್ವಾನಿಸಿದರು. ಹೀಗೆ ಚೊಚ್ಚಲ ಓವರ್ ಬೌಲಿಂಗ್ ಮಾಡಿದ ಜಸ್ಪ್ರೀತ್ ಬುಮ್ರಾ ಐದನೇ ಎಸೆತದಲ್ಲಿಯೇ ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಅವರ ವಿಕೆಟ್ ಪಡೆದರು. 1 ಎಸೆತವನ್ನು ಎದುರಿಸಿ ಕೇವಲ 1 ರನ್ ಬಾರಿಸಿದ್ದ ಡೀನ್ ಎಲ್ಗರ್ ಜಸ್ಪ್ರೀತ್ ಬುಮ್ರಾ ಎಸೆದ ಎರಡನೇ ಎಸೆತಕ್ಕೆ ಬ್ಯಾಟ್ ಬೀಸಿದರು ಆದರೆ ಚೆಂಡನ್ನು ಸರಿಯಾಗಿ ಬಾರಿಸಲಾಗದ ಡೀನ್ ಎಲ್ಗರ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ಕ್ಯಾಚ್ ನೀಡಿದರು. ಹೀಗೆ ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಹಾಗೂ ಅಪಾಯಕಾರಿ ಆಟಗಾರ ಡೀನ್ ಎಲ್ಗರ್ ಮೊದಲನೇ ಓವರ್‌ನಲ್ಲಿಯೇ ವಿಕೆಟ್ ಕಳೆದುಕೊಂಡದ್ದು ಮಾತ್ರವಲ್ಲದೇ ಇದರಿಂದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿಯೇ ಒತ್ತಡಕ್ಕೂ ಕೂಡ ಒಳಗಾಯಿತು.

ಡೀನ್ ಎಲ್ಗರ್ ವಿಕೆಟ್ ಹಿಂದಿತ್ತು ಕೊಹ್ಲಿ ಉಪಾಯ

ಡೀನ್ ಎಲ್ಗರ್ ವಿಕೆಟ್ ಹಿಂದಿತ್ತು ಕೊಹ್ಲಿ ಉಪಾಯ

ಇನ್ನು ಜಸ್ಪ್ರೀತ್ ಬುಮ್ರಾ ಡೀನ್ ಎಲ್ಗರ್ ಅವರ ಈ ವಿಕೆಟ್ ಪಡೆಯುವ ಮುನ್ನ ವಿರಾಟ್ ಕೊಹ್ಲಿ ಜಸ್ಪ್ರೀತ್ ಬುಮ್ರಾ ಅವರಿಗೆ ಸಲಹೆಯೊಂದನ್ನು ನೀಡಿದ್ದರು. ಜಸ್ಪ್ರೀತ್ ಬುಮ್ರಾಗೆ 'ವಿಕೆಟ್ ಬಳಸಿ ಬಾಲ್ ಹಾಕಿ ಈತನನ್ನು ಔಟ್ ಮಾಡು' ಎಂದು ವಿರಾಟ್ ಕೊಹ್ಲಿ ಹಿಂದಿಯಲ್ಲಿ ಹೇಳಿದ್ದರು. ಕೊಹ್ಲಿ ಮಾತಿನಂತೆ ವಿಕೆಟ್ ಬಳಸಿ ಜಸ್ಪ್ರೀತ್ ಬುಮ್ರಾ ಎಸೆತವನ್ನು ಹಾಕಿದರು ಹಾಗೂ ಈ ಎಸೆತವನ್ನು ಸಮರ್ಥವಾಗಿ ಎದುರಿಸಲಾಗದ ಡೀನ್ ಎಲ್ಗರ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಸದ್ಯ ವಿರಾಟ್ ಕೊಹ್ಲಿ ನೀಡಿದ ಈ ಸಲಹೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಟೆಸ್ಟ್ ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಮಟ್ಟ ಅತ್ಯುತ್ತಮವಾದದ್ದು ಎಂದು ಶ್ಲಾಘಿಸುತ್ತಿದ್ದಾರೆ.

ಟೀಮ್ ಇಂಡಿಯಾಗೆ ಗೆಲ್ಲಲು ಇನ್ನು 6 ವಿಕೆಟ್ ಬಾಕಿ ಅಷ್ಟೇ

ಟೀಮ್ ಇಂಡಿಯಾಗೆ ಗೆಲ್ಲಲು ಇನ್ನು 6 ವಿಕೆಟ್ ಬಾಕಿ ಅಷ್ಟೇ

ಇನ್ನು ಮೊದಲನೇ ಇನ್ನಿಂಗ್ಸ್‌ನಲ್ಲಿ ತನ್ನ ಉಳಿದ ವಿಕೆಟ್‍ಗಳನ್ನು ವೇಗವಾಗಿ ಕಳೆದುಕೊಂಡ ದಕ್ಷಿಣ ಆಫ್ರಿಕಾ 10 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು. ಹೀಗೆ ಟೀಮ್ ಇಂಡಿಯಾ 130 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿತು. ನಂತರ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 174 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 305 ರನ್‌ಗಳ ಗುರಿಯನ್ನು ನೀಡಿದೆ. ಹೀಗೆ ಟೀಮ್ ಇಂಡಿಯಾ ನೀಡಿದ ಗುರಿಯನ್ನು ಬೆನ್ನೆಟ್ಟಿರುವ ದಕ್ಷಿಣ ಆಫ್ರಿಕಾ ನಾಲ್ಕನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 94 ರನ್ ಗಳಿಸಿದೆ. ಮೊದಲನೇ ಇನ್ನಿಂಗ್ಸ್‌ನಲ್ಲಿ 1 ರನ್‌ಗೆ ಔಟ್ ಆಗಿ ಮಂಕಾಗಿದ್ದ ಡೀನ್ ಎಲ್ಗರ್ ಈ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಮೊದಲನೇ ದಿನದಾಟದಂತ್ಯಕ್ಕೆ ಅಜೇಯ 52 ರನ್ ಗಳಿಸಿ ಟೀಮ್ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಹಾಗೂ ಐದನೇ ದಿನದಾಟದಂದು ಟೀಮ್ ಇಂಡಿಯಾಗೆ ಗೆಲ್ಲಲು ಇನ್ನೂ 6 ವಿಕೆಟ್‍ಗಳ ಅಗತ್ಯತೆಯಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 211 ರನ್‌ಗಳ ಅಗತ್ಯತೆಯಿದೆ.

Story first published: Thursday, December 30, 2021, 14:47 [IST]
Other articles published on Dec 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X