
ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 12,750 ರನ್
ಭಾರತದ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ 12,750 ರನ್ ಬಾರಿಸಿದ್ದರೆ, ಶ್ರೀಲಂಕಾದ ಶ್ರೇಷ್ಠ ಆಟಗಾರ ಮಹೇಲಾ ಜಯವರ್ಧನೆ 12650 ರನ್‌ಗಳನ್ನು ಗಳಿಸಿದ್ದಾರೆ.
ಭಾನುವಾರ ತಿರುವನಂತಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 63 ರನ್ ಗಳಿಸುತ್ತಿದ್ದಂತೆಯೇ, ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರು ಮತ್ತು ಮಹೇಲಾ ಜಯವರ್ಧನೆ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇದೇ ವೇಳೆ ಶ್ರೀಲಂಕಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿದು ಸಚಿನ್ ತೆಂಡೂಲ್ಕರ್ ನಂತರದ ಸ್ಥಾನಕ್ಕೆ ವಿರಾಟ್ ಕೊಹ್ಲಿ ಬಂದರು.

ದಾಖಲೆಗಳನ್ನು ಮುರಿಯುವುದನ್ನು ಮುಂದುವರೆಸಿದ ವಿರಾಟ್ ಕೊಹ್ಲಿ
ಐಸಿಸಿ ಟ್ರೋಫಿ ಗೆಲ್ಲಲು ಭಾರತ ತಂಡವನ್ನು ಮುನ್ನಡೆಸಲು ವಿಫಲವಾದ ಕಾರಣಕ್ಕಾಗಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ, ಇತರ ಆಟಗಾರರಿಗೆ ಸಾಧಿಸಲಾಗದ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಖ್ಯಾತ ಕ್ರಿಕೆಟಿಗರ ದಾಖಲೆಗಳನ್ನು ಮುರಿಯುವುದನ್ನು ಮುಂದುವರೆಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಭಾರತದ ಮಾಜಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ರನ್ ಸ್ಕೋರರ್‌ಗಳ ಪಟ್ಟಿ
ಸಚಿನ್ ತೆಂಡೂಲ್ಕರ್ - 463 ಏಕದಿನ ಪಂದ್ಯಗಳಲ್ಲಿ 18426 ರನ್
ಕುಮಾರ ಸಂಗಕ್ಕಾರ - 404 ಏಕದಿನ ಪಂದ್ಯಗಳಲ್ಲಿ 14234 ರನ್
ರಿಕಿ ಪಾಂಟಿಂಗ್ - 375 ಏಕದಿನ ಪಂದ್ಯಗಳಲ್ಲಿ 13704 ರನ್
ಸನತ್ ಜಯಸೂರ್ಯ - 445 ಏಕದಿನ ಪಂದ್ಯಗಳಲ್ಲಿ 13430 ರನ್
ವಿರಾಟ್ ಕೊಹ್ಲಿ - 268 ಏಕದಿನ ಪಂದ್ಯಗಳಲ್ಲಿ 12750 ರನ್
ಮಹೇಲಾ ಜಯವರ್ಧನೆ - 448 ಏಕದಿನ ಪಂದ್ಯಗಳಲ್ಲಿ 12650 ರನ್
ಇದೀಗ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಶತಕವನ್ನು ತಲುಪುವ ಮೂಲಕ ತವರಿನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 21ನೇ ಶತಕ ಬಾರಿಸಿದರು ಮತ್ತು ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ತಮ್ಮ 10ನೇ ಏಕದಿನ ಶತಕವನ್ನು ಗಳಿಸಿ, ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಆಟಗಾರರಿಗಿಂತ ಹೆಚ್ಚು ಒಂದು ತಂಡದ ವಿರುದ್ಧ ಹೆಚ್ಚು ಶತಕ ಬಾರಿಸಿದಂತಾಗಿದೆ.