ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಡೀ ತಂಡಕ್ಕೆ ಸಿರಾಜ್ ಮೇಲೆ ನಂಬಿಕೆಯಿತ್ತು: ಅಂತಿಮ ಓವರ್‌ನಲ್ಲಿ ಗೆದ್ದ ಬಳಿಕ ಚಾಹಲ್ ಹೇಳಿಕೆ

Ind vs WI: Yuzvendra Chahal praises Mohammed Siraj said We had full confidence of defending

ಅಂತಿಮ ಓವರ್‌ನಲ್ಲಿ ರೋಚಕವಾಗಿ ಗೆಲುವು ಸಾಧಿಸಿದ ಭಾರತ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಭಾರತ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಸಾಗಿದ ಕಾರಣ ವಿಜಯ ಲಕ್ಷ್ಮಿ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಆರಂಭದಿಂದ ಅಂತಿಮ ಹಂತದವರೆಗೂ ಮುಂದುವರಿದಿತ್ತು. ಅಂತಿಮ ಓವರ್‌ ಎಸೆದ ಮೊಹಮ್ಮದ್ ಸಿರಾಜ್ ಭಾರತ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.

ಈ ಗೆಲುವಿನ ಬಳಿಕ ಭಾರತದ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಇಡೀ ತಂಡ ಮೊಹಮ್ಮದ್ ಸಿರಾಜ್ ಅಂತಿಮ ಓವರ್‌ನಲ್ಲಿ ನಿಯಂತ್ರಣ ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ಹೊಂದಿತ್ತು. ಅವರು ಹಾಕಿತ್ತಿದ್ದ ಯಾರ್ಕರ್‌ಗಳ ಕಾರಣದಿಂದಾಗಿ ಎಲ್ಲರಿಗೂ ಭಾರತ ಈ ಪಂದ್ಯವನ್ನು ಉಳಿಸಿಕೊಳ್ಳಲಿದೆ ಎಂಬ ಭಾವನೆ ಮೂಡಿತ್ತು ಎಂದಿದ್ದಾರೆ.

Ind vs WI : ಕೇವಲ 3 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡ ಶಿಖರ್ ಧವನ್: ಟ್ವಿಟರ್ ಪ್ರತಿಕ್ರಿಯೆInd vs WI : ಕೇವಲ 3 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡ ಶಿಖರ್ ಧವನ್: ಟ್ವಿಟರ್ ಪ್ರತಿಕ್ರಿಯೆ

ಅಂತಿಮ ಓವರ್‌ನಲ್ಲಿ 15 ರನ್‌ಗಳ ಗುರಿ

ಅಂತಿಮ ಓವರ್‌ನಲ್ಲಿ 15 ರನ್‌ಗಳ ಗುರಿ

ಭಾರತ ನೀಡಿದ 309 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಾ ಸಾಗಿತ ವೆಸ್ಟ್ ಇಂಡೀಸ್ ತಂಡಕ್ಕೆ ಅಂತಿಮ ಓವರ್‌ನಲ್ಲಿ ಅಗತ್ಯವಿದ್ದಿದ್ದು 15 ರನ್‌ಗಳು. ಕ್ರೀಸ್‌ನಲ್ಲಿ ನೆಲೆಯೂರಿದ್ದ ಇಬ್ಬರು ದಾಂಡಿಗರು ಇದ್ದ ಕಾರಣ ಎರಡು ತಂಡಗಳಿಗೂ ಸಮಾನ ಅವಕಾಶಗಳಿದ್ದವು. ಆದರೆ ಅಂತಿಮ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ 11 ರನ್‌ಗಳನ್ನು ಮಾತ್ರವೇ ನೀಡುವ ಮೂಲಕ ಗೆಲುವು ಸಾಧಿಸಲು ಕಾರಣವಾದರು. ಈ ಸಂದರ್ಭದಲ್ಲಿ ವಿಕೆಟ್‌ನ ಹಿಂದೆ ಸಂಜು ಸ್ಯಾಮ್ಸನ್ ಬೌಂಡರಿಗೆ ಹೋಗುವ ಸಾಧ್ಯತೆಯಿದ್ದ ವೈಡ್ ಎಸೆತವೊಂದನ್ನು ಅದ್ಭುತ ರೀತಿಯಲ್ಲಿ ತಡೆಯುವ ಮೂಲಕ ಮಿಂಚಿದರು.

ವಿಶ್ವಾಸವಿತ್ತು ಎಂದ ಚಾಹಲ್

ವಿಶ್ವಾಸವಿತ್ತು ಎಂದ ಚಾಹಲ್

15 ರನ್‌ಗಳನ್ನು ಅಂತಿಮ ಓವರ್‌ನಲ್ಲಿ ರಕ್ಷಿಸಿಕೊಳ್ಳುವುದು ಸಾಧ್ಯ ಎಂಬ ಭರವಸೆ ಮೂಡಿತ್ತು. ಇದಕ್ಕೆ ಕಾರಣ ಸಿರಾಜ್ ಪರಿಣಾಮಕಾರಯಾಗಿ ಎಸೆಯುತ್ತಿದ್ದ ಯಾರ್ಕರ್‌ಗಳು. ಅಂತಿಮ ಓವರ್‌ನಲ್ಲಿ ಒತ್ತಡದ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಎಡವಿದರೂ ದೊಡ್ಡ ಹೊಡೆತವನ್ನು ಅನುಭವಿಸುವ ಸಾಧ್ಯತೆಯಿದ್ದು ಅದು ಪಂದ್ಯದ ಫಲಿತಾಂಶವನ್ನು ಬದಲಾಯಿಸಿಬಿಡಬಹುದಾಗಿತ್ತು. ಆದರೆ ಅದನ್ನು ಅದ್ಭುತವಾಗಿ ಸಿರಾಜ್ ನಿಭಾಯಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಸಂಜು ಸ್ಯಾಮ್ಸನ್ ಅವರ ಅದ್ಭುತವಾದ ತಡೆಯಿಂದಾಗಿ ಗೆಲುವಿನ ವಿಶ್ವಾಸ ಹೆಚ್ಚಾಯಿತು ಎಂದಿದ್ದಾರೆ ಯುಜುವೇಂದ್ರ ಚಾಹಲ್.

India vs West Indies: ಪಂದ್ಯದ ನಂತರ ಶಿಖರ ಧವನ್ ಮತ್ತು ನಿಕೋಲಸ್ ಪೂರನ್ ಏನ್ ಹೇಳಿದ್ರು? | *Cricket | OneIndia
ಭಾನುವಾರ ನಡೆಯಲಿದೆ ಎರಡನೇ ಪಂದ್ಯ

ಭಾನುವಾರ ನಡೆಯಲಿದೆ ಎರಡನೇ ಪಂದ್ಯ

ಸಿರಾಜ್ ಮೇಲೆ ನಂಬಿಕೆಯಿತ್ತು
ಭಾನುವಾರ ನಡೆಯಲಿದೆ ಎರಡನೇ ಪಂದ್ಯ

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ. ಈ ಪಂದ್ಯ ಕೂಡ ಪೋರ್ಟ್ ಆಫ್ ಸ್ಪೈನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿದ್ದು ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಭಾರತ ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಈಗಾಗಲೇ ಮೇಲುಗೈ ಸಾಧಿಸಿದ್ದು ಸರಣಿಯನ್ನು ವಶಕ್ಕೆ ಪಡೆಯುವ ಅವಕಾಶ ಹೊಂದಿದೆ. ಆದರೆ ಆತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ ಭಾನುವಾರದ ಪಂದ್ಯ ಬಹಳ ಮುಖ್ಯವಾಗಿದ್ದು ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಮಾತ್ರವೇ ಸರಣಿಯಲ್ಲಿ ಜೀವಂತವಾಗುಳಿಯಲು ಸಾಧ್ಯವಾಗಲಿದೆ.


ಆಡುವ ಬಳಗ:
ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಶಮರ್ ಬ್ರೂಕ್ಸ್, ನಿಕೋಲಸ್ ಪೂರನ್ (ನಾಯಕ), ಅಕೆಲ್ ಹೊಸೈನ್, ರೋಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್
ಬೆಂಚ್: ಕೀಮೋ ಪಾಲ್, ಕೀಸಿ ಕಾರ್ಟಿ

ಭಾರತ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ,
ಬೆಂಚ್: ಋತುರಾಜ್ ಗಾಯಕ್ವಾಡ್, ಆವೇಶ್ ಖಾನ್, ಇಶಾನ್ ಕಿಶನ್, ಅರ್ಷದೀಪ್ ಸಿಂಗ್

Story first published: Saturday, July 23, 2022, 16:55 [IST]
Other articles published on Jul 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X