ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ- ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದ ಅಂಕಿ ಅಂಶ

ಬರ್ಮಿಂಗ್‌ಹ್ಯಾಮ್, ಆಗಸ್ಟ್ 4: ಭಾರಿ ಕುತೂಹಲ ಮೂಡಿಸಿದ್ದ ಮೊದಲ ಟೆಸ್ಟ್ ಪಂದ್ಯ ಆಂಗ್ಲರ ಪಾಲಾಗಿದೆ. ಇಂಗ್ಲೆಂಡ್ ನೆಲದಲ್ಲಿ ಭಾರತದ ವೈಫಲ್ಯಗಾಥೆ ಮುಂದುವರಿದಿದೆ.

ಏಷ್ಯಾಖಂಡದ ನೆಲದಲ್ಲಿ ಯಾವಾಗಲೂ ಸವಾರಿ ಮಾಡುವ ಭಾರತ, ಇಂಗ್ಲೆಂಡ್ ನೆಲದಲ್ಲಿ ಅಲ್ಲಿನ ವೇಗದ ಪಿಚ್‌ಗಳಲ್ಲಿ ತಡಬಡಾಯಿಸುವ ಪರಿ ಇಂದು ನಿನ್ನೆಯದಲ್ಲ. ಮಿಗಿಲಾಗಿ ಇಂಗ್ಲೆಂಡ್ ತಂಡ ಹಿಂದೆಂದಿಗಿಂತ ಬಲಿಷ್ಠವಾಗಿದೆ. ಅತ್ಯುತ್ತಮ ಆಲ್‌ರೌಂಡರ್‌ಗಳು ತಂಡದಲ್ಲಿದ್ದಾರೆ.

ಅನುಭವ, ತಾಳ್ಮೆ, ಕೌಶಲಗಳನ್ನು ಪರಿಗಣಿಸಿದರೆ, ಈ ಹಿಂದೆ ಇಂಗ್ಲೆಂಡ್ ನೆಲದಲ್ಲಿ ಆಡಿದ್ದ ಭಾರತದ ತಂಡದಲ್ಲಿ ಹೆಚ್ಚು ಪರಿಣತ ಆಟಗಾರರಿದ್ದರು. ಆದರೂ ಅಲ್ಲಿನ ಬೌಲರ್‌ಗಳ ಸ್ವಿಂಗ್, ಬೌನ್ಸರ್‌ಗಳನ್ನು ಎದುರಿಸಲು ವಿಫಲರಾಗುತ್ತಿದ್ದರು.

1ನೇ ಟೆಸ್ಟ್: ಕೊಹ್ಲಿ ಹೋರಾಟ ವ್ಯರ್ಥ, ಇಂಗ್ಲೆಂಡ್ ಗೆ 31 ರನ್ ಗೆಲುವು1ನೇ ಟೆಸ್ಟ್: ಕೊಹ್ಲಿ ಹೋರಾಟ ವ್ಯರ್ಥ, ಇಂಗ್ಲೆಂಡ್ ಗೆ 31 ರನ್ ಗೆಲುವು

ತಂಡ ಬದಲಾದರೂ, ಆಟಗಾರರ ಮನಸ್ಥಿತಿ ಬದಲಾಗಿದ್ದರೂ, ಭಾರತದ ಸ್ಥಿತಿ ಮಾತ್ರ ಬದಲಾಗಿಲ್ಲ. ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್‌ಮನ್‌ಗಳೂ ಆಡುವ ಕೆಚ್ಚು ಪ್ರದರ್ಶಿಸಲಿಲ್ಲ. ಒಬ್ಬ ಆಟಗಾರನ ಪ್ರಯತ್ನವಿದ್ದರೂ ಭಾರತ ಗೆಲುವು ಸಾಧಿಸಲು ಸಾಧ್ಯವಾಗುತ್ತಿತ್ತು.

ಸೋಲು ಗೆಲುವಿನ ಈ ಲೆಕ್ಕಾಚಾರದ ನಡುವೆ ಪಂದ್ಯದ ಬಳಿಕ ದೊರೆತ ಕೆಲವು ಕುತೂಹಲಕಾರಿ ಅಂಕಿ ಅಂಶಗಳತ್ತ ಕಣ್ಣುಹಾಯಿಸೋಣ.

ಭಾರತದ ಕಡಿಮೆ ಅಂತರದ ಸೋಲು

12- ಪಾಕಿಸ್ತಾನ, ಚೆನ್ನೈ, 1999
16- ಪಾಕಿಸ್ತಾನ, ಬೆಂಗಳೂರು, 1987
16- ಆಸ್ಟ್ರೇಲಿಯಾ, ಬ್ರಿಸ್ಬೇನ್, 1977
31- ಇಂಗ್ಲೆಂಡ್, ಎಡ್ಜ್‌ಬಾಸ್ಟನ್, 2018

ಎರಡೂ ಇನ್ನಿಂಗ್ಸ್‌ನಲ್ಲಿ ಅಧಿಕ ರನ್ ಗಳಿಸಿದವರು
ಸುನಿಲ್ ಗವಾಸ್ಕರ್ ಮತ್ತು ರಾಹುಲ್ ದ್ರಾವಿಡ್- 8
ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ- 6

ವಿರಾಟ್ ಕೊಹ್ಲಿ-ಜೇಮ್ಸ್ ಆಂಡರ್ಸನ್ ಯುದ್ಧದಲ್ಲಿ ಗೆದ್ದಿದ್ದು ಯಾರು?

ಟೆಸ್ಟ್ ಪಂದ್ಯದಲ್ಲಿ ಅಧಿಕ ಸರಾಸರಿ ರನ್ ಕಾಣಿಕೆ (ಎಲ್ಲ ವಿಕೆಟ್ ಪತನಗೊಂಡಿದ್ದಾಗ)

ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ತಂಡದ ಎರಡೂ ಇನ್ನಿಂಗ್ಸ್‌ನ ಒಟ್ಟು ಸ್ಕೋರ್ ಹಾಗೂ ಅಧಿಕ ರನ್ ಸ್ಕೋರರ್‌ನ ಕಾಣಿಕೆಯನ್ನು ಹೋಲಿಸಿದಾಗ ದೊರೆತ ಶೇಕಡಾವಾರು ಫಲಿತಾಂಶವಿದು,
45.87%- ವಿರಾಟ್ ಕೊಹ್ಲಿ-ಇಂಗ್ಲೆಂಡ್ ವಿರುದ್ಧ (200/436)
43.71%- ಸುನಿಲ್ ಗವಾಸ್ಕರ್- ವೆಸ್ಟ್ ಇಂಡೀಸ್ (344/787)
42.34%- ವಿವಿಎಸ್ ಲಕ್ಷ್ಮಣ್- ಆಸ್ಟ್ರೇಲಿಯಾ (174/411)
41.97%- ವೀರೇಂದ್ರ ಸೆಹ್ವಾಗ್- ಶ್ರೀಲಂಕಾ (251/598)
41.76%- ವಿನೂ ಮಂಕಡ್- ಇಂಗ್ಲೆಂಡ್ (256/613)

ಅತಿ ಕಡಿಮೆ ಟಾರ್ಗೆಟ್ ಚೇಸಿಂಗ್‌ನಲ್ಲಿ ಸೋತಿದ್ದು

ವೆಸ್ಟ್ ಇಂಡೀಸ್- 120
ಶ್ರೀಲಂಕಾ- 176
ಇಂಗ್ಲೆಂಡ್- 194
ದಕ್ಷಿಣ ಆಫ್ರಿಕಾ- 208

ಏಷ್ಯಾದ ತಂಡಗಳಿಗೆ ಸತತ ಜಯ ಸಿಗದೆ ಇರುವ ಮೈದಾನಗಳು

ಎಡ್ಜ್‌ಬಾಸ್ಟನ್- 17 (1962- ಇಲ್ಲಿಯವರೆಗೂ)
ಲಾರ್ಡ್ಸ್- 16 (1932-82)
ಕೆನ್ಸಿಂಗ್ಟನ್ ಓವಲ್- 16 (1953-2017)
ಎಂಸಿಜಿ- 14 (1983-2017)
ಸಬೀನಾ ಪಾರ್ಕ್ - 13 (1953-2004)
ಲಾರ್ಡ್ಸ್- 13 (2001-14)
ಗಬ್ಬಾ- 13 (1947-ಇಲ್ಲಿಯವರೆಗೂ)

Story first published: Saturday, August 4, 2018, 18:44 [IST]
Other articles published on Aug 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X