ಅಂಡರ್‌19 ವಿಶ್ವಕಪ್‌ ಫೈನಲ್: ಗೆಲ್ಲುವ ವಿಶ್ವಾಸದಲ್ಲಿ ಭಾರತ

Posted By:
India facing Australia in under 19 world cup on tomorrow

ಬೆಂಗಳೂರು, ಫೆಬ್ರವರಿ 02: ವಿಶ್ವಕಪ್ ಫೈನಲ್‌ ಗೆದ್ದು ಇತಿಹಾಸ ಸೃಷ್ಠಿಗೆ ಭಾರತದ ಅಂಡರ್‌19 ಕ್ರಿಕೆಟ್ ತಂಡ ಒಂದು ಹೆಜ್ಜೆಯಷ್ಟೆ ಹಿಂದೆ ಇದೆ.

ಶನಿವಾರ ಬೆಳಗ್ಗೆ ಭಾರತೀಯ ಕಾಲಮಾನದ ಪ್ರಕಾರ 6.30 ಗಂಟೆಗೆ ಓವೆಲ್‌ನಲ್ಲಿ ಪ್ರಾರಂಭವಾಗಲಿರುವ ಕಿರಯರ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಭಾರತ ಅಂಡರ್19 ತಂಡವು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಒಂದೂ ಪಂದ್ಯ ಸೋಲದೆ ವಿಶ್ವಾಸದ ಅಲೆಯ ಮೇಲೆ ತೇಲುತ್ತಿರುವ ಭಾರತ ಕಿರಿಯರ ತಂಡವೇ ಗೆಲ್ಲುವ ಫೆವರೇಟ್.

ಪ್ರಾಥಮಿಕ ಹಂತದ ಪಂದ್ಯದಲ್ಲೇ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ ಸೋತಿದ್ದು, ಭಾರತ ಕಿರಿಯರ ತಂಡ ಸಹಜವಾಗಿಯೇ ಆತ್ಮವಿಶ್ವಾದಲ್ಲಿದೆ. ಭಾರತದ ಬೌಲರ್‌ಗಳು ಟೂರ್ನಿಯುದ್ದಕ್ಕೂ ಅತ್ಯದ್ಬುತ ಪ್ರದರ್ಶನ ತೋರಿದ್ದು ಭಾರತದ ಗೆಲ್ಲುವ ವಿಶ್ವಾಸಕ್ಕೆ ಇಂಬು ನೀಡಿದೆ.

ಬ್ಯಾಟ್ಸ್‌ಮನ್‌ಗಳಾ ಶುಭಮನ್‌ ಗಿಲ್, ನಾಯಕ ಪೃಥ್ವಿ ಶಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಬೌಲರ್‌ಗಳಾದ ಅಂಕುಲ್‌ ರಾಯ್, ಕಮಲೇಶ್ ನಾಗರಕೋಟಿ, ಶಿವಂ ಮಣಿ ಭಾರತದ ನಾಳಿನ ಪಂದ್ಯದಲ್ಲಿ ಭಾರತದ ವಿಶ್ವಾಸಾರ್ಹ ಆಟಗಾರರು ಎನಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡ ಕೂಡ ಇಡೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನೇ ತೋರಿದ್ದು, ಭಾರತದ ವಿರುದ್ಧ ಪ್ರಾಥಮಿಕ ಹಂತದಲ್ಲಿ ಕಂಡಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾದಿದೆ.

ಒತ್ತಡಕ್ಕೊಳಗಾಗದೇ ತಮ್ಮ ನೈಜ ಆಟ ಆಡುವಂತೆ ಈಗಾಗಲೇ ಕೋಚ್ ದ್ರಾವಿಡ್ ಹೇಳಿದ್ದು, ಭಾರತ ಕಿರಿಯರು ಮತ್ತೊಮ್ಮೆ ವಿಶ್ವಕಪ್ ಅನ್ನು ಜಯಿಸುತ್ತಾರೆಯೊ ಕಾದು ನೋಡಬೇಕು.

Story first published: Friday, February 2, 2018, 18:46 [IST]
Other articles published on Feb 2, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ