ಪೂಜಾರ, ರಹಾನೆ ಪ್ರದರ್ಶನದ ಬಗ್ಗೆ ಕಳವಳ ಪಡುವ ಅಗತ್ಯವಿಲ್ಲ ಎಂದ ವಿರಾಟ್ ಕೊಹ್ಲಿ

ಲಂಡನ್, ಆಗಸ್ಟ್ 12: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಲಾರ್ಡ್ಸ್ ಅಂಗಳದಲ್ಲಿ ಗುರುವಾರ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಫಾರ್ಮ್ ಬಗ್ಗೆಯೂ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಅನುಭವಿ ಆಟಗಾರರಾದ ಪೂಜಾರ ಹಾಗೂ ರಹಾನೆ ಅವರ ವೈಯಕ್ತಿಕ ಪ್ರದರ್ಶನ ಈ ಕ್ಷಣದಲ್ಲಿ ಕಳವಳ ಪಡುವಂತದ್ದಲ್ಲ ಎಂದಿದ್ದಾರೆ ವಿರಾಟ್ ಕೊಹ್ಲಿ.

ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಇಂಗ್ಲೆಂಡ್ ನೆಲದಲ್ಲಿ ಉತ್ತಮ ಆರಂಭವನ್ನು ಪೊಡೆಯುವಲ್ಲಿ ವಿಫಲವಾಗಿದ್ದಾರೆ. ಕಳೆದ ಜೂನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿಯೂ ಈ ಇಬ್ಬರು ಆಟಗಾರರಿಂದ ಉತ್ತಮ ಪ್ರದರ್ಶನ ಬಂದಿರಲಿಲ್ಲ. ಕಳೆದ ನಾಟಿಂಗ್‌ಹ್ಯಾಮ್ ಪಂದ್ಯದಲ್ಲಿಲಿಯೂ ಸ್ವತಃ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಈ ಅನುಭವಿಗಳಿಂದ ಟೀಮ್ ಇಂಡಿಯಾಗೆ ಹೆಚ್ಚಿನ ಕೊಡುಗೆ ದೊರೆತಿರಲಿಲ್ಲ. ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಔಟಾಗಿದ್ದರೆ ಚೇತೇಶ್ವರ್ ಪೂಜಾರ ರನ್‌ಗಳುಗೆ ಆಟವನ್ನು ಮುಗಿಸಿದ್ದರು. ಉಪನಾಯಕ ಅಜಿಂಕ್ಯ ರಹಾನೆ ಐದು ರನ್‌ಗಳಿಸಲಷ್ಟೇ ಶಕ್ತವಾಗಿದ್ದರು.

ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಆಂಗ್ಲ ವೇಗಿ ಸ್ಟುವರ್ಟ್ ಬ್ರಾಡ್ ಹೊರಕ್ಕೆ!ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಆಂಗ್ಲ ವೇಗಿ ಸ್ಟುವರ್ಟ್ ಬ್ರಾಡ್ ಹೊರಕ್ಕೆ!

ಮೆಲ್ಬರ್ನ್ ಶತಕದ ಬಳಿಕ ರಹಾನೆ ಮಂಕು

ಮೆಲ್ಬರ್ನ್ ಶತಕದ ಬಳಿಕ ರಹಾನೆ ಮಂಕು

ಕಳೆದ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆ ಮೆಲ್ಬರ್ನ್‌ನಲ್ಲಿ ಗಳಿಸಿದ ಶತಕದ ಬಳಿಕ ಅಜಿಂಕ್ಯ ರಹಾನೆ ಸರರವಾಗಿ ವೈಫಲ್ಯವನ್ನು ಅನುಭವಿಸುತ್ತಾ ಬಂದಿದ್ದಾರೆ. ಆ ಬಳಿಕ ಆಡಿದ 8 ಟೆಸ್ಟ್ ಪಂದ್ಯಗಳಲ್ಲಿ ರಹಾನೆ ಗಳಿಸಿದ್ದು ಕೇವಲ 268 ರನ್‌ ಮಾತ್ರ. ಅದು ಕೇವಲ 20ರ ಆಸಿಪಾಸಿನ ಸರಾಸರಿಯಲ್ಲಿ. ಮತ್ತೊಂದೆಡೆ ಇಂಗ್ಲೆಂಡ್‌ನಲ್ಲಿ ಪೂಜಾರ ಅವರ ಸರಾಸರಿ ಕೂಡ ಕಳವಳ ಪಡುವಂತಿದೆ.

ಆದರೆ ಈ ವಿಚಾರವಾಗಿ ಮಾತನಾಡಿರುವ ನಾಯಕ ವಿರಾಟ್ ಕೊಹ್ಲಿ "ನನ್ನ ಪ್ರಕಾರ ಇದು ಕಳವಳ ಪಡಬೇಕಾದ ವಿಭಾಗ ಎನಿಸುತ್ತಿಲ್ಲ. ಈಗಿನ ಸಂದರ್ಭದಲ್ಲಿ ನಮ್ಮ ಮೂಲಬೂತ ಗಿಮ ಆಟಗಾರರು ವೈಯಕ್ತಿಕ ಪ್ರದರ್ಶನದಲ್ಲಿ ಯಾವ ಮಟ್ಟದಲ್ಲಿದ್ದಾರೆ ಎಂಬುದನ್ನು ನೋಡುವುದಾಗಿಲ್ಲ. ಒಟ್ಟಾರೆಯಾಗಿ ತಂಡಕ್ಕೆ ಅವರು ಎಷ್ಟು ಶಕ್ತಿಯನ್ನು ತುಂಬುತ್ತಾರೆ ಎಂಬುದರತ್ತ ನಾವು ಗಮನಗರಿಸುತ್ತೇವೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ

ಸಂಘಟಿತ ಪ್ರದರ್ಶನದತ್ತ ಚಿತ್ತ

ಸಂಘಟಿತ ಪ್ರದರ್ಶನದತ್ತ ಚಿತ್ತ

"ಬ್ಯಾಟಿಂಗ್ ವಿಭಾಗವಾಗಿ ನಾವು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಪ್ರದರ್ಶನ ನೀಡುತ್ತಿದ್ದೇವೆ. ಹಾಗಾಗಿ ನಾವು ಗೆಲುವಿನ ಸನಿಹಕ್ಕೆ ತಲುಪಲು ಸಾಧ್ಯವಾಗುತ್ತಿದೆ. ಪ್ರತಿ ಪಂದ್ಯದಲ್ಲಿಯೂ ಯಾರಾದರೂ ಒಬ್ಬ ಆಟಗಾರ ಮುಂದೆ ಬಂದು ತಂಡವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾರೆ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.

ಪಂತ್ ಬೆಂಬಲಕ್ಕೆ ವಿರಾಟ್

ಪಂತ್ ಬೆಂಬಲಕ್ಕೆ ವಿರಾಟ್

ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರಿಷಭ್ ಪಂತ್ ಪ್ರದರ್ಶನದ ಬಗ್ಗೆಯೂ ಪ್ರತಿಕ್ರಿಯಿಸಿದ್ದು ಪಂತ್ ಬೆಂಬಲಕ್ಕೆ ನಿಂತಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಂತ್ ಅವರಿಂದ ನಾವು ಯಾವುದೇ ರೀತಿಯಲ್ಲಿಯೂ ಇಂಗ್ಲೆಂಡ್ ಪರಿಸ್ಥಿತಿಯನ್ನು ನೋಡಿಕೊಂಡು ಆಟದ ಶೈಲಿಯನ್ನು ಬದಲಾಯಿಸುವ ನಿರೀಕ್ಷೆಯನ್ನು ಹೊಂದಿಲ್ಲ ಎಂಬುದನ್ನು ಕೊಹ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಅಲ್ಲದೆ ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಪಂದ್ಯದಲ್ಲಿ ರಿಷಭ್ ಪಂತ್ 20 ಎಸೆತದಲ್ಲಿ ನೀಡಿದ 25 ರನ್‌ಗಳ ಆಟ ತಂಡಕ್ಕೆ ನಿರ್ಣಾಯಕವಾಗಿತ್ತು ಎಂದಿದ್ದಾರೆ.

ಆಸಿಸ್, ಇಂಗ್ಲೆಂಡ್ ಸರಣಿಯಲ್ಲಿ ಪಂತ್ ಮಿಂಚು

ಆಸಿಸ್, ಇಂಗ್ಲೆಂಡ್ ಸರಣಿಯಲ್ಲಿ ಪಂತ್ ಮಿಂಚು

ಕಳೆದ ಆಸ್ಟ್ರೇಲಿಯಾದ ನೆಲದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹಾಗೂ ಇಂಗ್ಲೆಂಡ್ ತಂಡದ ವಿರುದ್ಧ ಭಾರತದಲ್ಲಿ ಆಡಿದ ಟೆಸ್ಟ್ ಸರಣಿಯಲ್ಲಿ ಭಾರತ ಗೆಲುವು ಸಾಧಿಸಲುರಿಷಭ್ ಪಂತ್ ನೀಡಿದ ಪ್ರದರ್ಶನ ಅತ್ಯಂತ ಪ್ರಮುಖವಾಗಿತ್ತು. ಆದರೆ ರಿಷಬ್ ಪಂತ್ ಇಂಗ್ಲೆಂಡ್ ನೆಲದಲ್ಲಿ ಈವರೆಗೆ ಉತ್ತಮ ಅರ್ಧಶತಕವನ್ನು ಗಳಿಸಲು ವಿಫಲವಾಗಿದ್ದಾರೆ. ನಾಯಕ ವಿರಾಟ್ ಕೊಹ್ಲಿಯಿಂದ ಉತ್ತಮ ಬೆಂಬಲವನ್ನು ಪಡೆದಿರುವ ರಿಷಭ್ ಪಂತ್ ಲಾರ್ಡ್ಸ್ ಅಂಗಳದಲ್ಲಿ ಅತ್ಯುತ್ತಮ ಆಟವನ್ನು ಪ್ರದರ್ಶಿಸುವ ನಿರೀಕ್ಷೆಯಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, August 12, 2021, 10:12 [IST]
Other articles published on Aug 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X