ನಂಬರ್ 1 ಟೆಸ್ಟ್ ತಂಡವಾಗಿ ಮುಂದುವರಿದ ಭಾರತ: ಮೂರನೇ ಸ್ಥಾನಕ್ಕೇರಿದ ಇಂಗ್ಲೆಂಡ್

ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದ್ದು ಭಾರತ ನಂಬರ್ 1 ತಂಡವಾಗಿಯೇ ಮುಂದುವರಿದಿದೆ. ಎರಡನೇ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡ ಮುಂದುವರಿದಿದೆ. ಆದರೆ ಮೂರನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಒಂದು ಸ್ಥಾನದ ಹಿನ್ನೆಡೆ ಅನುಭವಿಸಿದ್ದು ಇಂಗ್ಲೆಂಡ್ ಮೂರನೇ ಸ್ಥಾನವನ್ನು ಆಕ್ರಮಿಸಿಕೊಂಡಿದೆ.

ಟೆಸ್ಟ್ ಅಂಕದಲ್ಲಿ ಟೀಮ್ ಇಂಡಿಯಾ ಒಂದು ಅಂಕವನ್ನು ಸೇರಿಸಿಕೊಂಡಿದ್ದು ತನ್ನ ಖಾತೆಯಲ್ಲಿ ಈಗ 121 ಅಂಕಗಳನ್ನು ಹೊಂದಿದೆ. ಮತ್ತೊಂದೆಡೆ ನ್ಯೂಜಿಲೆಂಡ್ ತಂಡ 2 ಅಂಕಗಳನ್ನು ಖಾತೆಗೆ ಸೇರ್ಪಡೆಗೊಳಿಸಿದ್ದು ಭಾರತ ತಂಡಕ್ಕಿಂತ ಕೇವಲ ಒಂದು ಅಂಕಗಳಷ್ಟು ಹಿಂದಿದೆ.

ನಮ್ಮ ತಲೆಯನ್ನು ದ್ರಾವಿಡ್ ಭಾರತಕ್ಕೆ ಬಳಸಿಕೊಂಡರು: ಗ್ರೆಗ್ ಚಾಪೆಲ್

ಗಮನಾರ್ಹ ಸಂಗತಿಯೆಂದರೆ ಟೀಮ್ ಇಂಡಿಯಾ ನಂಬರ್ 1 ಸ್ಥಾನವನ್ನು ಉಳಿಸಿಕೊಳ್ಳಲು ಆಸ್ಟ್ರೇಲಿಯಾ ವಿರುದ್ಧ ಅದರದ್ದೇ ನೆಲದಲ್ಲಿ 2-1 ಅಂತರದಿಂದ ಸಾಧಿಸಿದ ಗೆಲುವು ಪ್ರಮುಖ ಕಾರಣವಾಗಿದೆ. ನಂತರ ಇಂಗ್ಲೆಂಡ್ ವಿರುದ್ಧ 3-1 ಅಂತರದಿಂದ ಸಾಧಿಸಿದ ಗೆಲುವು ಕೂಡ ಪಾತ್ರವಹಿಸಿದೆ.

ಪಾಕಿಸ್ತಾನ ತಂಡ ಮೂರು ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ಆದರೆ ಐದನೇ ಸ್ಥಾನದಲ್ಲಿಯೇ ಮುಂದುವರಿದಿದೆ. 8ನೇ ಸ್ಥಾನದಲ್ಲಿದ್ದ ವೆಸ್ಟ್ ಇಂಡೀಸ್ ತಂಡ ಆರನೇ ಸ್ಥಾನಕ್ಕೇರಿದೆ. 2013ರ ನಂತರ ಇದು ವಿಂಡೀಸ್ ತಂಡದ ಅತ್ಯುತ್ತಮ ಟೆಸ್ಟ್ ಸ್ಥಾನವಾಗಿದೆ.

'ನಾನು ಮತ್ತೆ ಕಣಕ್ಕಿಳಿಯಲಿದ್ದೇನೆ, ಆದರೆ ಐಪಿಎಲ್ ಆಡೋದು ಕಷ್ಟ'

ದಕ್ಷಿಣ ಆಫ್ರಿಕಾ ತಂಡ ಟೆಸ್ಟ್‌ನಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿದ್ದು ಇದು ಟೆಸ್ಟ್ ಇತಿಹಾಸದಲ್ಲಿ ದಲ್ಷಿಣ ಆಫ್ರಿಕಾದ ಅತ್ಯಂತ ಕನಿಷ್ಠ ಸ್ಥಾನಕ್ಕೆ ಸಮವಾಗಿದೆ. ಶ್ರೀಲಂಕಾ ತಂಡ 8ನೇ ಸ್ಥಾನದಲ್ಲಿದೆ. ಐದು ಅಂಕಗಳನ್ನು ಕಳೆದುಕೊಮಡಿದ್ದರೂ ಬಾಂಗ್ಲಾದೇಶ 9ನೇ ಸ್ಥಾನದಲ್ಲಿ ಮುಂದುವರಿದಿದೆ. ಜಿಂಬಾಬ್ವೆ 8 ಸ್ಥಾನಗಳ ಏರಿಕೆ ಕಂಡಿದ್ದು 10ನೇ ಸ್ಥಾನದಲ್ಲಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, May 13, 2021, 12:28 [IST]
Other articles published on May 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X