ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: 5ನೇ ಏಕದಿನಕ್ಕೆ ಸಂಭಾವ್ಯ ಭಾರತ XI ತಂಡ

India’s predicted XI for 5th ODI in Delhi; tactical changes expected

ನವದೆಹಲಿ, ಮಾರ್ಚ್ 12: ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ (ಮಾರ್ಚ್ 13) 5ನೇ ಮತ್ತು ಕೊನೆಯ ಏಕದಿನ ಪಂದ್ಯಕ್ಕಾಗಿ ಪ್ರವಾಸಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಮೈದಾನಕ್ಕಿಳಿಯಲಿವೆ. ಸರಣಿ ಗೆದ್ದುಕೊಳ್ಳುವ ನಿಟ್ಟಿನಲ್ಲಿ ಇದು ಎರಡೂ ತಂಡಗಳಿಗೂ ನಾನಾ-ನೀನಾ ಪಂದ್ಯ! (ಚಿತ್ರಕೃಪೆ: ಬಿಸಿಸಿಐ).

ಕೊಹ್ಲಿ, ಸೆಹ್ವಾಗ್, ಗಂಭೀರ್ ಸನ್ಮಾನ ಸಮಾರಂಭ ರದ್ದುಗೊಳಿಸಿದ ಡಿಡಿಸಿಎಕೊಹ್ಲಿ, ಸೆಹ್ವಾಗ್, ಗಂಭೀರ್ ಸನ್ಮಾನ ಸಮಾರಂಭ ರದ್ದುಗೊಳಿಸಿದ ಡಿಡಿಸಿಎ

ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಹೈದರಾಬಾದ್ ಮತ್ತು ನಾಗ್ಪುರ ಪಂದ್ಯಗಳನ್ನು ಕೊಹ್ಲಿ ಬಳಗ ಗೆದ್ದುಕೊಂಡರೆ, ಅನಂತರ ರಾಂಚಿ ಮತ್ತು ಮೊಹಾಲಿ ಪಂದ್ಯಗಳನ್ನು ಆ್ಯರನ್ ಫಿಂಚ್ ಬಳಗ ಗೆದ್ದುಕೊಂಡಿತ್ತು. ಹೀಗಾಗಿ ಏಕದಿನ ಸರಣಿ 2-2ರಿಂದ ಸಮಬಲಗೊಂಡಿರುವುದರಿಂದ ಬುಧವಾರದ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ.

ಚಾಹಲ್ ಗಿಂತ ಕುಲದೀಪ್ ಎದುರಿಸುವುದು ಕಷ್ಟ : ಮ್ಯಾಥ್ಯೂ ಹೇಡನ್ಚಾಹಲ್ ಗಿಂತ ಕುಲದೀಪ್ ಎದುರಿಸುವುದು ಕಷ್ಟ : ಮ್ಯಾಥ್ಯೂ ಹೇಡನ್

ಸರಣಿ ಗೆಲುವಿನ ನಿಟ್ಟಿನಲ್ಲಿ ಆತಿಥೇಯ ಭಾರತಕ್ಕೆ ಈ ಕೊನೆಯ ಪಂದ್ಯ ಮಹತ್ವದ್ದಾದ್ದರಿಂದ 5ನೇ ಪಂದ್ಯಕ್ಕಾಗಿ ತಂಡದಲ್ಲಿ ಕೆಲ ಬದಲಾವಣೆಗಳಾಗಲಿವೆ. ಕೊನೆಯ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಕೆಳಗಿನಂತಿರಲಿದೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಆಸ್ಟ್ರೇಲಿಯಾದ ಭಾರತ ಪ್ರವಾಸ ಸರಣಿಯಲ್ಲಿ ಭಾರತದ ಉಪನಾಯಕ ರೋಹಿತ್ ಶರ್ಮಾ ಗಮನಾರ್ಹ ಸಾಧನೆ ತೋರಿರಲಿಲ್ಲ. ಹಾಗೆ ನೋಡಿದರೆ ರೋಹಿತ್ ಕಳಪೆ ಬ್ಯಾಟಿಂಗ್ ತೋರಿಸಿದ್ದರು ಎನ್ನಬಹುದು. ಆದರೆ ಮೊಹಲಿಯಲ್ಲಿ ನಡೆದ 4ನೇ ಏಕದಿನ ಪಂದ್ಯದಲ್ಲಿ ರೋಹಿತ್ ಕೊಂಚ ಚೇತರಿಕೆ ತೋರಿಸಿದ್ದರು. 92 ಎಸೆತಗಳಿಗೆ ರೋಹಿತ್ 95 ರನ್ ಕೊಡುಗೆ ನೀಡಿದ್ದರು.

ಶಿಖರ್ ಧವನ್

ಶಿಖರ್ ಧವನ್

ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ 4ನೇ ಏಕದಿನ ಪಂದ್ಯದಲ್ಲಿ 143 ರನ್ ಮೂಲಕ ಅಬ್ಬರಿಸಿದ್ದರು. ರೋಹಿತ್ ಮತ್ತು ಧವನ್ 193 ರನ್ ಜೊತೆಯಾಟದ ನೆರವಿನಿಂದಲೇ ಭಾರತ ಆಸೀಸ್‌ಗೆ 359 ರನ್ ಗುರಿ ನೀಡಿತ್ತು. ಆದರೂ ಪಂದ್ಯವನ್ನು ಪ್ರವಾಸಿಗರು 4 ವಿಕೆಟ್‌ಗಳಿಂದ ಗೆದ್ದುಕೊಂಡಿದ್ದರು.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಆರಂಭಿಕ ಆಟಗಾರರಾದ ಧವನ್-ಶರ್ಮಾ ಆಡದಿದ್ದ ಪಂದ್ಯಗಳಲ್ಲಿ ನಾಯಕ ವಿರಾಟ್ ತಂಡದ ಕೈ ಹಿಡಿಯುತ್ತಿದ್ದರು. ಆದರೆ ಮೊಹಾಲಿ ಪಂದ್ಯದಲ್ಲಿ ಕೊಹ್ಲಿ 7 ರನ್ನಿಗೆ ವಿಕೆಟ್ ಒಪ್ಪಿಸಿದ್ದರು. ಇತ್ತಂಡಗಳ ನಡುವಣ ಅಂತಿಮ ಪಂದ್ಯದಲ್ಲಿ ಕೊಹ್ಲಿ ಎಂದಿನಂತೆ 3ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೆಎಲ್ ರಾಹುಲ್

ಕೆಎಲ್ ರಾಹುಲ್

ಕೆಎಲ್ ರಾಹುಲ್ ವಿಶ್ವಕಪ್ ನಿಟ್ಟಿನಲ್ಲಿ ಅದೃಷ್ಟ ಪರೀಕ್ಷಿಸಲು ಇರುವ ಕೊನೆಯ ಅವಕಾಶವಾಗಿ 5ನೇ ಪಂದ್ಯದಲ್ಲಿ ಕಣಕ್ಕಿಳಿಯುವುದರಲ್ಲಿದ್ದಾರೆ. ಆಸೀಸ್ ಸರಣಿಯಲ್ಲಿ ರಾಹುಲ್ ಸಂಪೂರ್ಣವಾಗಿ ಅವಕಾಶ ಸದುಪಯೋಗ ಪಡಿಸಿಕೊಂಡಿರಲಿಲ್ಲ. 4ನೇ ಪಂದ್ಯದಲ್ಲಿ 26 ರನ್ ಕೊಡುಗೆಯನ್ನಷ್ಟೇ ನೀಡಿದ್ದರು.

ರಿಷಬ್ ಪಂತ್

ರಿಷಬ್ ಪಂತ್

ಯುವ ಆಟಗಾರ ರಿಷಬ್ ಪಂತ್ ಕೂಡ ಭಾರತಕ್ಕೆ ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಗಮನ ಸೆಳೆಯುವಲ್ಲಿ ವಿಫಲರಾಗಿದ್ದರು. ವಿಶ್ವಕಪ್ ಪಂದ್ಯದಲ್ಲಿ ಪಂತ್ ಇರಬೇಕೆನ್ನುವ ಕ್ರಿಕೆಟ್ ಅಭಿಮಾನಿಗಳು ಹೆಚ್ಚಿದ್ದಾರೆ. ಆದರೆ ಅವಕಾಶ ಪಂತ್ ಅವರ ಪಾಲಾಗಲಿದೆಯೇ ಗೊತ್ತಿಲ್ಲ. ಒಟ್ಟಿನಲ್ಲಿ ಪಂತ್ 5ನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬೇಕಷ್ಟೇ.

ಕೇದಾರ್ ಜಾಧವ್

ಕೇದಾರ್ ಜಾಧವ್

ಆಲ್ ರೌಂಡರ್ ಕೇದಾರ್ ಜಾಧವ್ ಹಿಂದಿನ ಪಂದ್ಯದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದರು. ಅಲ್ಲದೆ ತಂಡಕ್ಕೆ 10 ರನ್ ಕೊಡುಗೆ ಮಾತ್ರ ನೀಡಿದ್ದರು. ಒಟ್ಟು 5 ಓವರ್‌ ಎಸೆದಿದ್ದ ಜಾಧವ್ ಒಂದೂ ವಿಕೆಟ್ ಲಭಿಸಿರಲಿಲ್ಲ. ಅಂತಿಮ ಪಂದ್ಯದಲ್ಲೂ ಜಾಧವ್ ತಂಡದಲ್ಲಿ ಇರಲಿದ್ದಾರೆ.

ವಿಜಯ್ ಶಂಕರ್

ವಿಜಯ್ ಶಂಕರ್

ತಮಿಳುನಾಡಿನ ಆಲ್ ರೌಂಡರ್ ಆಟಗಾರ ವಿಜಯ್ ಶಂಕರ್ ಪ್ರವಾಸ ಸರಣಿಯಲ್ಲಿ ಗಮನ ಸೆಳೆದಿದ್ದು ಸುಳ್ಳಲ್ಲ. ಹಿಂದಿನ ಪಂದ್ಯದಲ್ಲಿ ಶಂಕರ್ 15 ರನ್ ಕೊಡುಗೆ ನೀಡಿದ್ದರು. ಐದು ಓವರ್‌ಗಳಲ್ಲಿ ವಿಜಯ್‌ಗೆ ವಿಕೆಟ್ ಕೆಡವಲಾಗಿರಲಿಲ್ಲ.

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ

ಆಲ್ ರೌಂಡರ್ ಜಡೇಜಾ ಕೂಡ ಸಾಧಾರಣ ಪ್ರದರ್ಶನ ಸಾಲಿನಲ್ಲಿದ್ದಾರೆ. ಜಡೇಜಾ ತನ್ನ ಹಿಂದಿನ ಪ್ರಖರತೆಯನ್ನು ಕಳೆದುಕೊಂಡಿರುವುದಕ್ಕೆ ಏಕದಿನ ಸರಣಿಯಲ್ಲಿ ಸಾಕ್ಷಿ ಹೇಳಿದ್ದಾರೆ. ಮೊಹಾಲಿ ಪಂದ್ಯದಲ್ಲಿ ಜಡೇಜಾ ಪಾಲ್ಗೊಂಡಿರಲಿಲ್ಲ.

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ಮೊಹಾಲಿ ಪಂದ್ಯದಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್ 9 ಓವರ್‌ಗಳಲ್ಲಿ 67 ರನ್ನಿಗೆ 1 ವಿಕೆಟ್ ಪಡೆದಿದ್ದರು. ಹಿಂದಿನ ಪಂದ್ಯದಲ್ಲಿ ಭುವಿಗೆ ಬ್ಯಾಟಿಂಗ್ ಅವಕಾಶವೂ ಲಭಿಸಿತ್ತು. ಆದರೆ 1 ರನ್‌ಗೆ ಭುವಿ ವಿಕೆಟ್ ಒಪ್ಪಿಸಿದ್ದರು. ಅಂತಿಮ ಪಂದ್ಯದಲ್ಲಿ ಭುವನೇಶ್ವರ್ 9ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯಲಿದ್ದಾರೆ.

ಕುಲದೀಪ್ ಯಾದವ್

ಕುಲದೀಪ್ ಯಾದವ್

ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ತಂಡದ ಬಲವಾಗಿರಲಿದ್ದಾರೆ. ಮೊಹಾಲಿಯಲ್ಲಿ ಕುಲದೀಪ್ ಅಜೇಯ 1 ರನ್ ಗಳಿಸಿದ್ದರು. 10 ಓವರ್‌ಗಳಲ್ಲಿ 64 ರನ್ನಿಗೆ 1 ವಿಕೆಟ್ ಪಡೆದಿದ್ದರು. ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಯಾದವ್ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.

ಜಸ್‌ಪ್ರೀತ್ ಬೂಮ್ರಾ

ಜಸ್‌ಪ್ರೀತ್ ಬೂಮ್ರಾ

ಮೊಹಾಲಿಯಲ್ಲಿ ಭಾರದ ವೇಗಿ ಜಸ್‌ಪ್ರೀತ್ ಬೂಮ್ರಾ 100ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಟೆಸ್ಟ್, ಟಿ20, ಏಕದಿನ ಎಲ್ಲವೂ ಸೇರಿ ಬೂಮ್ರಾ 100ನೇ ಪಂದ್ಯವನ್ನು ಉತ್ತಮವಾಗಿಯೇ ನಿಭಾಯಿಸಿದ್ದರು. ಮೊಲಾಲಿಯಲ್ಲಿ ಬೂಮ್ರಾ 8.5 ಓವರ್‌ಗೆ 63 ರನ್ ನೀಡಿ 3 ವಿಕೆಟ್ ಕೆಡವಿದ್ದರು.

Story first published: Tuesday, March 12, 2019, 15:51 [IST]
Other articles published on Mar 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X