ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಸರಣಿಗೆ ಭಾರತ ತಂಡ ಮುಂಚಿತವಾಗಿ ಪ್ರಕಟಗೊಳ್ಳಲು ಜೆರ್ಸಿ ಕಾರಣ!

India’s T20I squad for South Africa series was preponed because of new jerseys

ಬೆಂಗಳೂರು, ಆಗಸ್ಟ್ 31: ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ 15 ಜನರ ಭಾರತ ತಂಡವನ್ನು ಮುಂಚಿತವಾಗಿ ಪ್ರಕಟಿಸಲು ಜೆರ್ಸಿ ಕಾರಣ ಎಂಬ ವಿಚಾರ ಈಗ ಹೊರಬಿದ್ದಿದೆ. ಅಸಲಿಗೆ ಈ ಟಿ20 ಸರಣಿಗಾಗಿ ಸೆಪ್ಟೆಂಬರ್ 4ರಂದು ತಂಡ ಪ್ರಕಟಿಸುವುದಾಗಿ ಬಿಸಿಸಿಐ ಹೇಳಿತ್ತು.

ಕ್ರಿಕೆಟ್ ಆಯ್ತು, ಆರ್ಮಿ ಆಯ್ತು ಈಗ ಬಾಲಿವುಡ್ ಗೆ ಧೋನಿಕ್ರಿಕೆಟ್ ಆಯ್ತು, ಆರ್ಮಿ ಆಯ್ತು ಈಗ ಬಾಲಿವುಡ್ ಗೆ ಧೋನಿ

ಸೆಪ್ಟೆಂಬರ್ 4ರಂದು ಪ್ರಕಟವಾಗಬೇಕಿದ್ದ ಭಾರತ ಟಿ20 ತಂಡವನ್ನು, 29ರಂದೇ ಬಿಸಿಸಿಐ ಪ್ರಕಟಿಸಿತ್ತು. ಇದಕ್ಕೆ ಕಾರಣ ಜೆರ್ಸಿಯಲ್ಲಿನ ಮಹತ್ವದ ಬದಲಾವಣೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಟೀಮ್ ಇಂಡಿಯಾದ ಜೆರ್ಸಿ ಬದಲಾಗಲಿದೆ. ಹೀಗಾಗಿ ಜೆರ್ಸಿ ತಯಾರಕರಿಗೆ ಅನುಕೂಲವಾಗುವಂತೆ ಬಿಸಿಸಿಐ ಎಣಿಕೆಗಿಂತ ಮುಂಚಿತವಾಗಿ ತಂಡ ಪ್ರಕಟಿಸಿತ್ತು.

ಭಾರತ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್, 2ನೇ ದಿನ, Live ಸ್ಕೋರ್‌ಕಾರ್ಡ್

1
46251

ಸದ್ಯ ಟೀಮ್ ಇಂಡಿಯಾದ ಜೆರ್ಸಿ ಮೇಲೆ ಮೊಬೈಲ್ ತಯಾರಕ ಚೈನೀಸ್ ಕಂಪನಿ 'ಒಪ್ಪೋ' ಹೆಸರಿದೆ. ಇನ್ಮುಂದೆ ಈ ಜಾಗದಲ್ಲಿ ಬೆಂಗಳೂರು ಮೂಲದ, ಕಲಿಕೆಗೆ ಸಂಬಂಧಿಸಿದ ವ್ಯಾವಹಾರಿಕ ಸಂಸ್ಥೆ 'ಬೈಜುಸ್' ಹೆಸರು ಕಾಣಿಸಿಕೊಳ್ಳಲಿದೆ. ಮುಂದಿನ 3 ವರ್ಷಗಳ ಟೀಮ್ ಇಂಡಿಯಾ ಜೆರ್ಸಿ ಹಕ್ಕುಗಳ ಬಿಡ್‌ಅನ್ನು ಬೈಜುಸ್ ಗೆದ್ದುಕೊಂಡಿದೆ.

ಜಗತ್ತಿನ ಅತಿ ತೂಕದ ಈ 'ದೈತ್ಯ' ಕ್ರಿಕೆಟಿಗನ ಬಗ್ಗೆ ಗೊತ್ತೇ?ಜಗತ್ತಿನ ಅತಿ ತೂಕದ ಈ 'ದೈತ್ಯ' ಕ್ರಿಕೆಟಿಗನ ಬಗ್ಗೆ ಗೊತ್ತೇ?

ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ಬಳಗ, ದ್ವಿತೀಯ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಆ ಬಳಿಕ ಅಂದರೆ ಸೆಪ್ಟೆಂಬರ್ 15ರಿಂದ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಮೊದಲ ಪಂದ್ಯ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದೆ.

Story first published: Saturday, August 31, 2019, 18:36 [IST]
Other articles published on Aug 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X