ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಟಾಸ್ ಗೆದ್ದು ಪಂದ್ಯ ಸೋತ ದಾಖಲೆಗಳು

Indias Test defeats after Virat Kohli winning the toss

ಲೀಡ್ಸ್‌: ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಶನಿವಾರ (ಆಗಸ್ಟ್ 28) ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್‌ ಸಹಿತ 76 ರನ್ ಸೋಲನುಭವಿಸಿದೆ. ಇದರೊಂದಿಗೆ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿ ಕೆಟ್ಟ ದಾಖಲೆ ನಿರ್ಮಾಣವಾಗಿದೆ.

ಭಾರತ ಗೆಲ್ಲಿಸುವುದಾಗಿ ಮೈದಾನಕ್ಕೆ ನುಗ್ಗಿದ್ದ 'ಜಾರ್ವೋ 69'ಗೆ ಆಜೀವ ನಿಷೇಧ!ಭಾರತ ಗೆಲ್ಲಿಸುವುದಾಗಿ ಮೈದಾನಕ್ಕೆ ನುಗ್ಗಿದ್ದ 'ಜಾರ್ವೋ 69'ಗೆ ಆಜೀವ ನಿಷೇಧ!

ವಿರಾಟ್ ಕೊಹ್ಲಿ ಟಾಸ್ ಗೆದ್ದು ಪಂದ್ಯ ಸೋತ ದಾಖಲೆಗಳ ಪಟ್ಟಿಗೆ ಲೀಡ್ಸ್‌ ಪಂದ್ಯವೂ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದಲ್ಲಿ ಅಡಿಲೇಡ್‌ನಲ್ಲಿ ನಡೆದ ಪಂದ್ಯದ ವೇಳೆಯೂ ಕೊಹ್ಲಿ ಟಾಸ್ ಗೆದ್ದು ಆಡಿದ್ದಾಗ ಭಾರತ 8 ವಿಕೆಟ್‌ಗಳಿಂದ ಸೋತಿತ್ತು. ವಿಶೇಷವೆಂದರೆ ಕೊಹ್ಲಿ ಟಾಸ್ ಗೆದ್ದಿದ್ದೇ ಕಡಿಮೆ. ಗೆದ್ದಿದ್ದರಲ್ಲಿ ಭಾರತ ಹೆಚ್ಚಿನದರಲ್ಲಿ ಗೆದ್ದಿತ್ತು. ಸೋಲಿದ್ದೇ ಅಪರೂಪ. ಆದರೆ ಸೋತು ಮತ್ತೊಂದು ಕೆಟ್ಟ ದಾಖಲೆ ನಿರ್ಮಾಣವಾಗಿದೆ.

ಕೊಹ್ಲಿ ಟಾಸ್ ಗೆದ್ದು ಪಂದ್ಯ ಸೋತ ಕೆಟ್ಟ ದಾಖಲೆಗಳು
* ಭಾರತಕ್ಕೆ 8 ವಿಕೆಟ್ ಸೋಲು, ಆಸ್ಟ್ರೇಲಿಯಾ ವಿರುದ್ಧ, ಅಡಿಲೇಡ್ 2020/21
* ಇನ್ನಿಂಗ್ಸ್ ಸಹಿತ ಭಾರತಕ್ಕೆ 76 ರನ್ ಸೋಲು, ಇಂಗ್ಲೆಂಡ್ ವಿರುದ್ಧ, ಲೀಡ್ಸ್ 2021

ಇಂಗ್ಲೆಂಡ್ ನಾಯಕನಾಗಿ ಹೊಸ ದಾಖಲೆ ನಿರ್ಮಿಸಿದ ಜೋ ರೂಟ್ ಇಂಗ್ಲೆಂಡ್ ನಾಯಕನಾಗಿ ಹೊಸ ದಾಖಲೆ ನಿರ್ಮಿಸಿದ ಜೋ ರೂಟ್

ಇತ್ತಂಡಗಳ ಸ್ಕೋರ್‌ಕಾರ್ಡ್
ತೃತೀಯ ಟೆಸ್ಟ್‌ನ ಆರಂಭಿಕ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 19, ಚೇತೇಶ್ವರ ಪೂಜಾರ 1, ವಿರಾಟ್ ಕೊಹ್ಲಿ 7, ಅಜಿಂಕ್ಯ ರಹಾನೆ 18, ರಿಷಭ್ ಪಂತ್ 2, ರವೀಂದ್ರ ಜಡೇಜಾ 4, ಇಶಾಂತ್ ಶರ್ಮಾ 8, ಮೊಹಮ್ಮದ್ ಸಿರಾಜ್ 3 ರನ್‌ನೊಂದಿಗೆ ಭಾರತ 40.4 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 78 ರನ್ ಗಳಿಸಿತ್ತು. ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್‌ನಲ್ಲಿ ರೋರಿ ಬರ್ನ್ಸ್ 61, ಹಸೀಬ್ ಹಮೀದ್ 68, ಡೇವಿಡ್ ಮಲನ್ 70, ಜೋ ರೂಟ್ 121, ಜಾನಿ ಬೈರ್‌ಸ್ಟೊ 29, ಜೋಸ್ ಬಟ್ಲರ್ 7, ಮೊಯೀನ್ ಅಲಿ 8, ಸ್ಯಾಮ್ ಕರನ್ 15, ಕ್ರೇಗ್ ಓವರ್‌ಟನ್ 32 ರನ್‌ ನೊಂದಿಗೆ 132.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 432 ರನ್ ಬಾರಿಸಿತ್ತು. ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 59, ಕೆಎಲ್ ರಾಹುಲ್ 8, ಚೇತೇಶ್ವರ ಪೂಜಾರ 91, ವಿರಾಟ್ ಕೊಹ್ಲಿ 55, ಅಜಿಂಕ್ಯ ರಹಾನೆ 10, ರಿಷಭ್ ಪಂತ್ 1, ರವೀಂದ್ರ ಜಡೇಜಾ 30, ಮೊಹಮ್ಮದ್ ಶಮಿ 6, ಇಶಾಂತ್ ಶರ್ಮಾ 2, ಜಸ್ಪ್ರೀತ್ ಬೂಮ್ರಾ 1 ರನ್‌ನೊಂದಿಗೆ ಭಾರತ 99.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 278 ರನ್ ಗಳಿಸಿ ಸೋಲೊಪ್ಪಿಕೊಂಡಿತು.

Story first published: Sunday, August 29, 2021, 0:21 [IST]
Other articles published on Aug 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X