ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಗೆಲುವು, ಸರಣಿಯಲ್ಲಿ 1-0 ಮುನ್ನಡೆ

Posted By:

ಚೆನ್ನೈ, ಸೆ. 17: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್ ಗಳಲ್ಲಿ ಟೀಂ ಇಂಡಿಯಾ 281/7 ಸ್ಕೋರ್ ಮಾಡಿದ್ದಲ್ಲದೆ, ಆಸ್ಟ್ರೇಲಿಯಾ ತಂಡವನ್ನು ಕಟ್ಟಿ ಹಾಕಿ, ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಗಿದ್ದರಿಂದ ಆಸ್ಟ್ರೇಲಿಯಾಕ್ಕೆ 21 ಓವರ್ ಗಳಲ್ಲಿ 164ರನ್ ಗಳಿಸುವ ಗುರಿ ನೀಡಲಾಗಿತ್ತು. ಡಕ್ವರ್ಥ್ ಲೂಯಿಸ್ ನಿಯಮದಂತೆ ಭಾರತ 26ಗಳಿಂದ ಗೆಲುವು ಸಾಧಿಸಿ, ಐದು ಪಂದ್ಯಗಳ ಸರಣಿಯಲ್ಲಿ 1-0ರ ಮುನ್ನಡೆ ಪಡೆಯಿತು.

ಆಸ್ಟ್ರೇಲಿಯಾ ಚೇಸಿಂಗ್:
ಡೇವಿಡ್ ವಾರ್ನರ್ 25 ರನ್ ಗಳಿಸಿ ಔಟಾದರೆ, ಹಿಲ್ಟನ್ 1, ಸ್ಟೀವ್ ಸ್ಮಿತ್ 1 ಟ್ರಾವಿಸ್ ಹೆಡ್ 5 ರನ್, ಮಾರ್ಕಸ್ ಸ್ಟೋಯಿನಿಸ್ 3, ಮ್ಯಾಥ್ಯೂ ವೇಡ್ 9 ಮಾತ್ರ ಗಳಿಸಿ ನಿರಾಶೆ ಮೂಡಿಸಿದರು.

ಗ್ಲೆನ್ ಮ್ಯಾಕ್ಸ್ ವೆಲ್ಸ್ 4 ಸಿಕ್ಸರ್ ಗಳನ್ನು ಸಿಡಿಸಿ 18 ಎಸೆತಗಳಲ್ಲಿ 39ರನ್ ಚೆಚ್ಚಿದರು. ಉಳಿದಂತೆ ಜೇಮ್ಸ್ ಫಾಲ್ಕ್ನರ್ ಸ್ವಲ್ಪ ಹೋರಾಟ ತೋರಿದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 21 ಓವರ್ ಗಳಲ್ಲಿ 137/9 ಸ್ಕೋರ್ ಮಾಡಿತು.

ಭಾರತದ ಪರ ಯಜುವೇಂದ್ರ ಚಾಹಲ್ 30ಕ್ಕೆ 3, ಕುಲದೀಪ್ ಯಾದವ್ 33ಕ್ಕೆ2, ಹಾರ್ದಿಕ್ ಪಾಂಡ್ಯ 28ಕ್ಕೆ2 ಗಳಿಸಿ ಉತ್ತಮ ಪ್ರದರ್ಶನ ನೀಡಿದರು.

ಭಾರತದ ಇನ್ನಿಂಗ್ಸ್ :
ಮೊದಲ ಎಂಟು ಓವರ್ ಗಳೊಳಗೆ ಮೂರು ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟದಲ್ಲಿದ್ದ ಭಾರತಕ್ಕೆ ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ ಹಾಗೂ ಎಂಎಸ್ ಧೋನಿ ಆಸರೆಯಾದರು. 50 ಓವರ್ ಗಳಲ್ಲಿ ಭಾರತ 281/7 ಸ್ಕೋರ್ ಮಾಡಿತು.

ಕೇದಾರ್ 40, ಹಾರ್ದಿಕ್ ಪಾಂಡ್ಯ 66 ಎಸೆತಗಳಲ್ಲಿ 83 ರನ್ (5 ಬೌಂಡರಿ, 5 ಸಿಕ್ಸರ್), ಧೋನಿ 79ರನ್(88 ಎಸೆತ, 4 ಬೌಂಡರಿ, 2 ಸಿಕ್ಸರ್) ಗಳಿಸಿ ತಂಡವು ಗೌರವಯುತ ಮೊತ್ತ ದಾಖಲಿಸಲು ನೆರವಾದರು. ಆಸ್ಟ್ರೇಲಿಯಾ ಪರ ನಾಥನ್ ಕೌಲ್ಟರ್ 3, ಸ್ಟೊಯಿನಸ್ 2, ಝಂಪಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಸ್ಕೋರ್ ಕಾರ್ಡ್

ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಪಂದ್ಯ ನಡೆಯುತ್ತಿದೆ. ಐದು ಏಕದಿನ ಸರಣಿಯ ಮೊದಲ ಪಂದ್ಯ ಇದಾಗಿದೆ.

India Vs Australia, 1st ODI: Virat Kohli wins toss, elects to bat against Steve Smith & Co

ಭಾರತದ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಗಾಯಾಳುವಾಗಿದ್ದು ತಂಡದಿಂದ ಹೊರ ನಡೆದಿದ್ದಾರೆ. ಅವರ ಬದಲಿಗೆ ರೋಹಿತ್ ಶರ್ಮ ಜತೆಗೆ ಅಜಿಂಕ್ಯ ರಹಾನೆ ಅವರು ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುತ್ತಿದ್ದಾರೆ.

3 ಏಕದಿನ ಪಂದ್ಯಗಳಿಗೆ ಭಾರತ ತಂಡ

ಮತ್ತೊಬ್ಬ ಗಾಯಾಳು ಆಲ್ ರೌಂಡರ್ ಅಕ್ಷರ್ ಪಟೇಲ್ ಬದಲಿಗೆ ಆಲ್ ರೌಂಡರ್ ರವೀಂದ್ರ ಜಡೇಜ ಅವರು ತಂಡ ಸೇರಿಕೊಂಡಿದ್ದಾರೆ.

ಆಡುವ ‍‍XI :
ಆಸ್ಟೇಲಿಯಾ:
ಡೇವಿಡ್ ವಾರ್ನರ್, ಹಿಲ್ಟನ್ ಕಾರ್ಟ್ ರೈಟ್, ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯಿನಿಸ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಜೇಮ್ಸ್ ಫಾಲ್ಕ್ನರ್, ಪ್ಯಾಟ್ ಕುಮಿನ್ಸ್, ನಾಥನ್ ಕೌಲ್ಟರ್ ನೈಲ್, ಆಡಂ ಝಂಪಾ.

ಏಕದಿನ ಹಾಗೂ ಟಿ20 ಸರಣಿ ವೇಳಾಪಟ್ಟಿ

ಭಾರತ: ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ(ನಾಯಕ), ಮನೀಶ್ ಪಾಂಡೆ, ಎಂಎಸ್ ಧೋನಿ(ವಿಕೆಟ್ ಕೀಪರ್), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್ ಪ್ರೀತ್ ಬೂಮ್ರಾ.

Story first published: Sunday, September 17, 2017, 13:28 [IST]
Other articles published on Sep 17, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ