ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧ 5 ಇನ್ನಿಂಗ್ಸ್‌ಗಳಲ್ಲಿ ಉಸ್ಮಾನ್ ಖವಾಜಾ ಅತ್ಯಧಿಕ ರನ್ ದಾಖಲೆ!

India vs Australia: Usman Khawaja slams his second ODI century

ನವದೆಹಲಿ, ಮಾರ್ಚ್ 13: ಭಾರತ ವಿರುದ್ಧ ಏಕದಿನ ಸರಣಿ ಆಡುತ್ತಿರುವ ಪ್ರವಾಸಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಪ್ರತೀ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದರು. ಖವಾಜಾ ಈಗ ಅಪರೂಪದ ದಾಖಲೆಗೂ ಕಾರಣರಾಗಿದ್ದಾರೆ.

ಭಾರತ vs ಆಸ್ಟ್ರೇಲಿಯಾ, 5ನೇ ಏಕದಿನ ಪಂದ್ಯ, Live ಸ್ಕೋರ್‌ಕಾರ್ಡ್

1
45589

ನವದೆಹಲಿಯ ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಬುಧವಾರ (ಮಾರ್ಚ್ 13) ನಡೆದ ಭಾರತ-ಆಸ್ಟ್ರೇಲಿಯಾ 5ನೇ ಏಕದಿನ ಪಂದ್ಯದಲ್ಲಿ ಖವಾಜಾ ಭರ್ತಿ 100 ರನ್ ಬಾರಿಸಿ ಅಂತಾರಾಷ್ಟ್ರೀಯ ಏಕದಿನ 2ನೇ ಶತಕ ದಾಖಲಿಸಿದರು. ಇದರೊಂದಿಗೆ ಭಾರತ ವಿರುದ್ಧ 5 ಏಕದಿನ ಇನ್ನಿಂಗ್ಸ್‌ಗಳಲ್ಲಿ ಅತ್ಯಧಿಕ ರನ್ ಸಾಧನೆಗಾಗಿ ವಿಶ್ವ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೇರಿದ್ದಾರೆ.

ಭಾರತ vs ಆಸೀಸ್ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಐದೂ ಪಂದ್ಯಗಳಲ್ಲೂ ಖವಾಜಾ ಆಡಿದ್ದರು. ಸರಣಿಯಲ್ಲಿ ಕ್ರಮವಾಗಿ 50, 38, 104, 91, 100 ರನ್ ಬಾರಿಸಿದ್ದರು. ಹೀಗಾಗಿ ಒಟ್ಟು 366 ರನ್ ಸಾಧನೆಯೊಂದಿಗೆ ಭಾರತ ವಿರುದ್ಧ 5 ಇನ್ನಿಂಗ್ಸ್‌ಗಳಲ್ಲಿ ಅತ್ಯಧಿಕ ರನ್‌ಗಾಗಿ ಮೊದಲ ಸ್ಥಾನ ಪಡೆದಿದ್ದಾರೆ. ಇದೇ ಯಾದಿಯಲ್ಲಿ ನ್ಯೂಜಿಲ್ಯಾಂಡ್‌ ನಾಯಕ ಕೇನ್ ವಿಲಿಯಮ್ಸನ್ ದ್ವಿತೀಯ ಸ್ಥಾನದಲ್ಲಿದೆ.

ಸುನಿಲ್ ಗವಾಸ್ಕರ್ ಪ್ರಕಾರ ಟೀಮ್ ಇಂಡಿಯಾ 2019ರ ವಿಶ್ವಕಪ್ ಗೆಲ್ಲೋಲ್ಲ!ಸುನಿಲ್ ಗವಾಸ್ಕರ್ ಪ್ರಕಾರ ಟೀಮ್ ಇಂಡಿಯಾ 2019ರ ವಿಶ್ವಕಪ್ ಗೆಲ್ಲೋಲ್ಲ!

ಭಾರತ ವಿರುದ್ಧ ಏಕದಿನ 5 ಇನ್ನಿಂಗ್ಸ್‌ಗಳಲ್ಲಿ ಅತ್ಯಧಿಕ ರನ್ ಗಾಗಿ ಖವಾಜಾ ಪ್ರಥಮ (366 ರನ್), ವಿಲಿಯಮ್ಸನ್ - 361 ರನ್ (2014) ದ್ವಿತೀಯ, ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ -358 ರನ್ (2015) ತೃತೀಯ ಸ್ಥಾನದಲ್ಲಿದ್ದಾರೆ. ಇದೇ ಏಕದಿನ ಸರಣಿಯಲ್ಲಿ ಕೊಹ್ಲಿ 305 ರನ್ ಸಾಧನೆ ತೋರಿದ್ದಾರೆ.

Story first published: Wednesday, March 13, 2019, 19:25 [IST]
Other articles published on Mar 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X