ಲಾರ್ಡ್ಸ್ ಅಂಗಳದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ಟಾಪ್ 3 ಪ್ರದರ್ಶನ

ಲಂಡನ್ ಆಗಸ್ಟ್ 12: ವಿಶ್ವ ಕ್ರಿಕೆಟ್‌ನಲ್ಲಿ ಲಾರ್ಡ್ಸ್ ಅಂಗಳಕ್ಕೆ ತನ್ನದೇ ಆದ ಘನತೆಯಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಲಾರ್ಡ್ಸ್ ಅಂಗಳಕ್ಕೆ ವಿಶೇಷ ಮಾನ್ಯತೆಯನ್ನು ನೀಡಲಾಗುತ್ತದೆ. ಬಹುತೇಕ ಕ್ರಿಕೆಟಿಗರು ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ವಿಶೇಷ ಸಾಧನೆಗಳನ್ನು ಮಾಡಲು ಹಾತೊರೆಯುತ್ತಿರುತ್ತಾರೆ. ಈ ಕ್ರೀಡಾಂಗಣದಲ್ಲಿ 200 ವರ್ಷಗಳಷ್ಟು ಹಳೇಯ ಕ್ರಿಕೆಟ್‌ನ ನೆನಪುಗಳಿವೆ. ಎಲ್ಲಾ ಕ್ರಿಕೆಟಿಗರು ಕೂಡ ಈ ಅಂಗಳದಲ್ಲಿ ಕ್ರಿಕೆಟ್ ಆಡಿ ಖ್ಯಾತ ಲಾರ್ಡ್ಸ್ ಗೌರವ ಫಲಕದಲ್ಲಿ ಸ್ಥಾನವನ್ನು ಪಡೆಯಬೇಕೆಂಬ ಹಂಬಲವನ್ನು ಹೊಂದಿರುತ್ತಾರೆ.

ಇದರಿಂದ ಭಾರತೀಯ ಕ್ರಿಕೆಟಿಗರು ಕೂಡ ಹೊರತಾಗಿಲ್ಲ. ಈಗಾಗಲೇ ಹಲವಾರು ಭಾರತೀಯ ಕ್ರಿಕೆಟಿಗರು ಲಾರ್ಡ್ಸ್ ಅಂಗಳದ ಬಗ್ಗೆ ಹೊಂದಿರುವ ಪ್ರೀತಿಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಭಾರತ ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಈವರೆಗೆ 18 ಟೆಸ್ಟ್ ಪಂದ್ಯಗಳಲ್ಲಿ ಆಡಿದೆ. ಆದರೆ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿದ್ದು ನಾಲ್ಕರಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಹಾಗಿದ್ದರೂ ಭಾರತೀಯ ಕ್ರಿಕೆಟಿಗರು ಲಾರ್ಡ್ಸ್ ಅಂಗಳದಲ್ಲಿ ನೀಡಿದ ಕೆಲ ಪ್ರದರ್ಶನ ಸುದೀರ್ಘ ಕಾಲ ಸ್ಮರಣೆಯಲ್ಲಿಳಿಯುವಂತಿದೆ.

ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಆಂಗ್ಲ ವೇಗಿ ಸ್ಟುವರ್ಟ್ ಬ್ರಾಡ್ ಹೊರಕ್ಕೆ!ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಆಂಗ್ಲ ವೇಗಿ ಸ್ಟುವರ್ಟ್ ಬ್ರಾಡ್ ಹೊರಕ್ಕೆ!

ಭಾರತ ಈಗ ಮತ್ತೆ ಲಾರ್ಡ್ಸ್ ಅಂಗಳದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಂದ ಬಂದ ಅತ್ಯಂತ ಮಹತ್ವದ ಮೂರು ಇನ್ನಿಂಗ್ಸ್‌ಗಳ ಬಗ್ಗೆ ನೋಡೋಣ..

2014ರಲ್ಲಿ ಅಜಿಂಕ್ಯಾ ರಹಾನೆ ಸಿಡಿಸಿದ 104 ರನ್

2014ರಲ್ಲಿ ಅಜಿಂಕ್ಯಾ ರಹಾನೆ ಸಿಡಿಸಿದ 104 ರನ್

2011ರ ಇಂಗ್ಲೆಂಡ್ ಪ್ರವಾಸದಲ್ಲಿ 0-4 ಅಂತರದಿಂದ ಇಂಗ್ಲೆಂಡ್‌ಗೆ ಶರಣಾಗಿದ್ದ ಭಾರತ 2014ರಲ್ಲಿ ಅದಕ್ಕಿಂತ ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಹೊಂದಿತ್ತು. ಆ ಸರಣಿಯಲ್ಲಿ ಕೂಡ ಟ್ರೆಂಟ್ ಬ್ರಿಡ್ಸ್‌ಜನಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿತ್ತು. ಹೀಗಾಗಿ ಭಾರತ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮೇಲುಗೈ ಸಾಧಿಸುವ ಉತ್ಸಾಹ ಮತ್ತಷ್ಟು ಹೆಚ್ಚಾಗಿತ್ತು. ಲಾರ್ಡಸ್ ಅಂಗಳದ ಹಸಿರು ಪಿಚ್‌ನಲ್ಲಿ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿದಿತ್ತು. ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಅವರಂತಾ ಬೌಲರ್‌ಗಳ ಮುಂದೆ ಭಾರತ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡಿತ್ತು.

ಆದರೆ ಭಾರತೀಯ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. 86-3 ವಿಕೆಟ್ ಕಳೆದುಕೊಂಡಿದ್ದಾಗ ಅಜಿಂಕ್ಯಾ ರಹಾನೆ ಕ್ರೀಸ್‌ಗೆ ಇಳಿದಿದ್ದರು. ಆದರೆ ಟೀ ವಿರಾಟಮದ ವೇಳೆಗೆ ಭಾರತ ತಂಡ 147 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಬಾಲಂಗೋಚಿಗಳಾದ ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ಅವರನ್ನು ಸೇರಿಕೊಂಡು ಅಜಿಂಕ್ಯಾ ರಹಾನೆ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ಮೂಲಕ ತಮ್ಮ ಶತಕವನ್ನು ಕೂಡ ಪೂರ್ಣಗೊಳಿಸಿದರು. ಬಳಿಕ 103 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಈ ಪ್ರದರ್ಶನದಿಂದಾಗಿ ಭಾರತ ಈ ಪಂದ್ಯದಲ್ಲಿ ಗೌರವಯುತವಾದ ಮೊತ್ತವನ್ನು ಗಳಿಸಲು ಸಾಧ್ಯವಾಗಿತ್ತು, ಭಾರತ 295 ರನ್‌ಗಳನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಪೇರಿಸಿತ್ತು. ಈ ಅದ್ಭುತ ಪ್ರದರ್ಶನದಿಂದಾಗಿ ಈ ಪಂದ್ಯವನ್ನು ಭಾರತ 95 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 295 ರನ್‌ಗಳಿಸಿದರೆ ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ 319 ರನ್‌ಗಳನ್ನು ಗಳಿಸಿ ಅಲ್ಪ ಮುನ್ನಡೆಯನ್ನು ಪಡೆದುಕೊಂಡಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 342 ರನ್‌ಗಳನ್ನು ಗಳಿಸಲು ಶಕ್ತವಾಗಿತ್ತು. ಬಳಿಕ ಇಂಗ್ಲೆಂಡ್ ಕೇವಲ 223 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ 95 ರನ್‌ಗಳ ಉತ್ತಮ ಅಂತರದಿಂದ ಗೆದ್ದು ಬೀಗಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಶಾಂತ್ ಶರ್ಮಾ 7 ವಿಕೆಟ್ ಕಿತ್ತು ಇಂಗ್ಲೆಂಡ್ ತಂಡಕ್ಕೆ ಆಘಾತವನ್ನು ನೀಡಿದ್ದರು.

1986ರಲ್ಲಿ ದಿಲೀಪ್ ವೆಂಗ್‌ಸರ್ಕಾರ್ ಅಜೇಯ 126 ರನ್

1986ರಲ್ಲಿ ದಿಲೀಪ್ ವೆಂಗ್‌ಸರ್ಕಾರ್ ಅಜೇಯ 126 ರನ್

ಲಾರ್ಡ್ಸ್ ಅಂಗಳದಲ್ಲಿ ಭಾರತದ ಐತಿಹಾಸಿಕ ಪ್ರಪ್ರಥಮ ಗೆಲುವಿನಲ್ಲಿ ಮಿಂಚಿದ್ದು ಭಾರತದ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕಾರ್. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 294 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತ 90 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಆಗ ವೆಂಗ್‌ಸರ್ಕಾರ್ ಬ್ಯಾಟಿಂಗ್‌ಗೆ ಇಳಿದಿದ್ದರು. ಅವರು ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಭಾರತ ಅಂದು ಮೊದಲ ಇನ್ನಿಂಗ್ಸ್‌ನಲ್ಲಿ 340 ರನ್‌ಗಳನ್ನು ಪೇರಿಸಲು ಯಶಸ್ವಿಯಾಗಿತ್ತು. 126 ರನ್‌ಗಳೊಂದಿಗೆ ವೆಂಗ್‌ಸರ್ಕಾರ್ ಅಜೇಯವಾಗುಳಿದಿದ್ದರು.

ಈ ಪಂದ್ಯದಲ್ಲಿ ಮೊಹಿಂದರ್ ಅಮರನಾಥ್, ಮೊಹಮ್ಮದ್ ಅಜರುದ್ಧೀನ್ ಹಾಗೂ ಕಿರಣ್ ಮೋರೆ ಜೊತೆ ಸೇರಿ ವೆಂಗ್‌ಸರ್ಕಾರ್ ನಿರ್ಣಾಯಕ ಜೊತೆಯಾಟವನ್ನು ಪ್ರದರ್ಶಿಸಿದ್ದರು. ಇಂಗ್ಲೆಂಡ್ ತಂಡದ ಗ್ರಹಾಂ ಡಿಲ್ಲಿ, ರಿಚರ್ಡ್ ಎಲ್ಲಿಸನ್ ಮತ್ತು ಜಾನ್ ಎಂಬುರಿ ದಾಳಿಯನ್ನು ದಿಲೀಪ್ ವೆಂಗ್‌ಸರ್ಕಾರ್ ತಮ್ಮದೇ ಶೈಲಿಯಲ್ಲಿ ಎದುರಿಸಿ ಹಿಮ್ಮೆಟ್ಟಿಸಿದ್ದರು. ಈ ಮೂಲಕ ಭಾರತ ತಂಡಕ್ಕೆ ನಿರ್ಣಾಯಕ ಮುನ್ನಡೆಯನ್ನು ಒದಗಿಸಲು ಕಾರಣವಾಗಿದ್ದರು.

ಇನ್ನು ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನೆಡೆ ಕಂಡಿದ್ದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರೀ ಆಘಾತಕ್ಕೆ ಒಳಗಾಗಿತ್ತು. ಕಪಿಲ್‌ದೇವ್ ದಾಳಿಗೆ ಸಿಲುಕಿದ ಇಂಗ್ಲೆಂಡ್ ಪಡೆ ಅಕ್ಷರಶಃ ನಲುಗಿ ಹೋಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 180 ರನ್‌ಗಳನ್ನು ಮಾತ್ರವೇ ಗಳಿಸಿತ್ತು ಇಂಗ್ಲೆಂಡ್ ಪಡೆ. ಈ ಮೂಲಕ ಭಾರತ ಅಂತಿಮ ಇನ್ನಿಂಗ್ಸ್‌ನಲ್ಲಿ 134 ರನ್‌ಗಳಿಸುವ ಸವಾಲು ಪಡೆಯಿತು. ಇದನ್ನು ಭಾರತ ಐದು ವಿಕೆಟ್ ಕಳೆದುಕೊಂಡು ಗೆದ್ದು ಬೀಗಿತು. ಈ ಮೂಲಕ ಲಾರ್ಡ್ಸ್ ಅಂಗಳದಲ್ಲಿ ಭಾರತ ಪ್ರಥಮ ಗೆಲುವನ್ನು ದಾಖಲಿಸಿತ್ತು.

1996ರಲ್ಲಿ ಸೌರವ್ ಗಂಗೂಲಿ 131 ರನ್

1996ರಲ್ಲಿ ಸೌರವ್ ಗಂಗೂಲಿ 131 ರನ್

ಈ ಸರಣಿಯಲ್ಲಿ ಭಾರತ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಸೋಲು ಕಂಡು ಲಾರ್ಡ್ಸ್ ಅಂಗಳದಲ್ಲಿ ಎರಡನೇ ಪಂದ್ಯವನ್ನಾಡಲು ಬಂದಿತ್ತು. ಈ ಪಂದ್ಯದಲ್ಲಿ ಭಾರತದ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಇಬ್ಬರು ಆಟಗಾರರ ಕಾಲಿಟ್ಟಿದ್ದರು. ಆ ಇಬ್ಬರು ಕೂಡ ಇಂದು ಕ್ರಿಕೆಟ್ ಲೋಕದ ದಿಗ್ಗಜರಾಗಿ ಮೆರೆಯುತ್ತಿದ್ದಾರೆ. ಅದು ಬೇರೆ ಯಾರೂ ಅಲ್ಲ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 344 ರನ್‌ಗಳನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸಿತ್ತು. 25 ರನ್‌ಗಳಿಗೆ ಭಾರತ ತನ್ನ ಪ್ರಥಮ ವಿಕೆಟ್ ಕಳೆದುಕೊಂಡಿದ್ದಾಗ ಸೌರವ್ ಗಂಗೂಲಿ ಚೊಚ್ಚಲ ಬಾರಿಗೆ ಬ್ಯಾಟಿಂಗ್ ಮಾಡಲು ಕಣಕ್ಕಿಳಿದರು. ಆದರೆ ಬಳಿಕ ನಡೆದಿದ್ದು ಇತಿಹಾಸ.

ಭಾರತದ ಪ್ರಥಮ ಇನ್ನಿಂಗ್ಸ್‌ನಲ್ಲಿ ಉಳಿದ ಆಟಗಾರರಿಂದ ದೊಡ್ಡ ಪ್ರದರ್ಶನ ಬಾರದಿದ್ದರೂ ಸೌರವ್ ಗಂಗೂಲಿ ಮಾತ್ರ ತಮ್ಮ ಪ್ರಥಮ ಪಂದ್ಯದಲ್ಲಿಯೇ ದೊಡ್ಡ ಸಂದೇಶವನ್ನು ನೀಡಿದ್ದರು. ಈ ಪಂದ್ಯದಲ್ಲಿ ಸೌರವ್ ಗಂಗೂಲಿ 131 ರನ್‌ಗಳಿಸಿದರು. ರಾಹುಲ್ 95 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಪ್ರದರ್ಶನದಿಂದಾಗಿ ಭಾರತ ಆ ಪಂದ್ಯದಲ್ಲಿ 429 ರನ್‌ಗಳ ಗೌರವಯುತ ಮೊತ್ತವನ್ನು ದಾಖಲಿಸಿತ್ತು. ಸೌರವ್ ಗಂಗೂಲಿ ಪ್ರಥಮ ಪಂದ್ಯದಲ್ಲಿಯೇ ಲಾರ್ಡ್ಸ್ ಅಂಗಳದಲಲ್ಇ ಆಡುವ ಅವಕಾಶ ಗಳಿಸಿದ್ದಲ್ಲದೆ ಅದೇ ಪಂದ್ಯದಲ್ಲಿ ಶತಕದ ಸಾಧನೆ ಮಾಡಿ ಬೀಗಿದ್ದರು. ಈ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು.

For Quick Alerts
ALLOW NOTIFICATIONS
For Daily Alerts
Story first published: Thursday, August 12, 2021, 12:04 [IST]
Other articles published on Aug 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X