ಲಂಡನ್, ಜುಲೈ 14: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಎರಡನೇ ಏಕದಿನ ಪಂದ್ಯದಲ್ಲಿ ಆಂಗ್ಲರ ವಿರುದ್ಧ 86 ರನ್ ಸೋಲು ಕಂಡಿದೆ. ಇಂಗ್ಲೆಂಡ್ ಆಟಗಾರರ ಎಚ್ಚರಿಕೆಯ ಆಟ ಮತ್ತು ಭಾರತೀಯ ಬ್ಯಾಟ್ಸ್ಮನ್ ಗಳ ಬೇಜಾವಾಬ್ದಾರಿಯ ಆಟ ಟೀಮ್ ಇಂಡಿಯಾಕ್ಕೆ ಸೋಲಿನ ಬೆಲೆ ಕೇಳಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ಕರಾರುವಕ್ಕಾದ ಆಟವಾಡಿತ್ತು. ಜೋ ರೂಟ್ (ಅಜೇಯ 113/116) ಮತ್ತು ನಾಯಕ ಇಯಾನ್ ಮಾರ್ಗನ್ (53/51) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ 50 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 322 ರನ್ ಪೇರಿಸಿ ಭಾರತಕ್ಕೆ ಗರಿಷ್ಠ 323 ರನ್ ಗುರಿ ನೀಡಿತ್ತು.
2nd ODI: England (322/7) beat India (236 all out in 50 Ovs) by 86 runs to level the 3-match series 1-1; Raina (46), Kohli (45), Dhoni (37), Plunkett (4/46), Rashid (2/38) #ENGvIND pic.twitter.com/aYPmdsLXFY
— Doordarshan News (@DDNewsLive) July 14, 2018
ಚೇಸಿಂಗ್ ಇಳಿದ ಭಾರತದಿಂದ ಯಾರೂ ಬ್ಯಾಟಿಂಗ್ ಕಾವಲು ನಿಲ್ಲಲಿಲ್ಲ. ಎಲ್ಲಾ ಬ್ಯಾಟ್ಸ್ಮನ್ ಗಳು ಬೇಗನೆ ವಿಕೆಟ್ ಒಪ್ಪಿಸಿ ತೆರಳಿದರು. ಹೀಗಾಗಿ ಭಾರತ 50 ಓವರ್ ಗೆ ಎಲ್ಲಾ ವಿಕೆಟ್ ಕಳೆದು 236 ರನ್ ಪೇರಿಸಿ ಆಂಗ್ಲರೆದುರು ತಲೆ ಬಾಗಿತು. ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಭಾರತ ಎರಡನೇ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ತೋರಿಸಿತು.
#ENGvIND 2nd ODI: England (322/7) beat India (236-all out) by 86 runs to level 3-match series 1-1 at Lord's. Plunkett 4/46, Rashid 2/38, Raina 46https://t.co/ISucsT2KfW
— Indiacom (@indiacom) July 14, 2018
ರೋಹಿತ್ ಶರ್ಮಾ 15, ಶಿಖರ್ ಧವನ್ 36, ಕೆಎಲ್ ರಾಹುಲ್ 0 ರನ್ ಬಾರಿಸಿ ಔಟಾದರು. ತಂಡಕ್ಕಾಗಿ ಕೊಂಚ ರನ್ ಕೊಡುಗೆ ನೀಡಿದವರೆಂದರೆ ಧವನ್ ಸೇರಿಸಿ ಕೊಹ್ಲಿ (45/56), ಸುರೇಶ್ ರೈನಾ (46/63), ಧೋನಿ (37/59) ಮಾತ್ರ.
ಭಾರತ ಇನ್ನಿಂಗ್ಸ್ ವೇಳೆ ಪ್ಲಂಕೆಟ್ ಬೌಲಿಂಗ್ ಪಾರಮ್ಯ ಮೆರೆದರು. 10 ಓವರ್ ಎಸೆದ ಪ್ಲಂಕೆಟ್, 46 ರನ್ ನೀಡಿ 4 ವಿಕೆಟ್ ಕಬಳಿಸಿದರು.
ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ