ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vsಇಂಗ್ಲೆಂಡ್ 2ನೇ ಟೆಸ್ಟ್: ಸಂಭಾವ್ಯ ತಂಡ, ಹವಾಮಾನ ವರದಿ, ಪಿಚ್ ರಿಪೋರ್ಟ್ ಹಾಗೂ ನೇರಪ್ರಸಾರ

India vs England, 2nd Test: Preview, predicted XIs, Chennai weather forecast, and pitch report

ಶನಿವಾರ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ 227 ರನ್‌ಗಳ ಅಂತರದ ಬೃಹತ್ ಸೋಲಿನ ಬಳಿಕ ಟೀಮ್ ಇಂಡಿಯಾ ತಿರುಗೇಟು ನೀಡಲು ಹವಣಿಸುತ್ತಿದೆ. ಹೀಗಾಗಿ ಈ ಪಂದ್ಯ ಕುತೂಹಲವನ್ನು ಮೂಡಿಸಿದೆ.

ಮೊದಲ ಪಂದ್ಯದಲ್ಲಿ ಭಾರತ ಟಾಸ್ ಸೋತು ಬೌಲಿಂಗ್‌ಗೆ ಇಳಿದ ಬಳಿಕ ವಿಕೆಟ್ ಪಡೆಯಲು ವಿಫಲವಾಯಿತು. ಟೀಮ್ ಇಂಡಿಯಾದಲ್ಲಿ ಕುಲ್‌ದೀಪ್ ಯಾದವ್ ಬದಲಿಗೆ ಶಹ್ಬಾಜ್ ನದೀಮ್‌ಗೆ ಅವಕಶ ನೀಡಿದ ಬಗ್ಗೆ ಸಾಕಷ್ಟು ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಪ್ರಶ್ನೆಯನ್ನು ಮಾಡಿದರು. ಮತ್ತೊಂದೆಡೆ ಅನುಭವಿ ಆಟಗಾರರಾದ ಅಜಿಂಕ್ಯ ರಹಾನೆ ಹಾಗೂ ರೋಹಿತ್ ಶರ್ಮಾ ಸಂಪೂರ್ಣ ವೈಫಲ್ಯವನ್ನು ಕಂಡ ಹಿನ್ನೆಲೆಯಲ್ಲಿ ಸಾಕಷ್ಟು ಟೀಕೆಗೂ ಗುರಿಯಾಗಿದ್ದಾರೆ.

2ನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಆತಂಕ ಮೂಡಿಸಿದ ನಾಲ್ಕು ಸಂಗತಿಗಳು2ನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಆತಂಕ ಮೂಡಿಸಿದ ನಾಲ್ಕು ಸಂಗತಿಗಳು

ಮೊದಲ ಪಂದ್ಯದಲ್ಲಿ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಉತ್ತಮ ಪ್ರದರ್ಶನ ಹಾಗೂ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ತಂಡದ ಪಾಲಿಗೆ ಆಶಾದಾಯಕ ಬೆಳವಣಿಗೆಯಾಗಿದೆ. ಪಂದ್ಯದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ..

ಪಂದ್ಯದ ಮಾಹಿತಿ ಮತ್ತು ನೇರಪ್ರಸಾರ

ಪಂದ್ಯದ ಮಾಹಿತಿ ಮತ್ತು ನೇರಪ್ರಸಾರ

ದಿನಾಂಕ: ಫೆಬ್ರವರಿ 13ರಿಂದ 17ರ ವರೆಗೆ(ಶನಿವಾರ-ಬುಧವಾರ)
ಪಂದ್ಯದ ಸಮಯ: ಬೆಳಗ್ಗೆ 9:30 AM
ಸ್ಥಳ: ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ ಹಾಗೂ ಹಾಟ್‌ಸ್ಟಾರ್

ಹವಾಮಾನ ವರದಿ

ಹವಾಮಾನ ವರದಿ

ಹವಾಮಾನ ಪರಿಸ್ಥಿತಿ ಎರಡನೇ ಪಂದ್ಯಕ್ಕೂ ಮೊದಲನೇ ಪಂದ್ಯದ ರೀತಿಯಲ್ಲೇ ಮುಂದುವರಿಯಲಿದೆ. ಹವಾಮಾನ ವರದಿಯ ಪ್ರಕಾರ ಆಡುವ ಐದು ದಿನಗಳಲ್ಲೂ ಮಳೆಯಾಗುವ ಬಗ್ಗೆ ಯಾವುದೇ ಸಾಧ್ಯತೆಗಳು ಇಲ್ಲ. ಸರಾಸರಿ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಪಿಚ್ ವರದಿ

ಪಿಚ್ ವರದಿ

ಈ ಪಂದ್ಯ ಮೊದಲನೇ ಟೆಸ್ಟ್ ಪಂದ್ಯ ನಡೆದ ಕ್ರೀಡಾಂಗಣದಲ್ಲಿಯೇ ನಡೆಯುತ್ತಿದ್ದರೂ ಬೆರೆಯದೇ ಸರ್ಫೇಸ್‌ನಲ್ಲಿ ಆಡಲಾಗುತ್ತದೆ. ಆದರೆ ಮೊದಲ ಟೆಸ್ಟ್ ಪಂದ್ಯದ ರೀತಿಯಲ್ಲೇ ಇದು ವರ್ತಿಸಲಿದೆ. ಎರಡು ದಿನಗಳ ಆಟದ ನಂತರ ಸ್ಪಿನ್‌ ಬೌಲರ್‌ಗಳು ಹೆಚ್ಚಿನ ಯಶಸ್ಸು ಪಡೆಯಲಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತವನ್ನು ದಾಖಲಿಸುವುದು ಬಹಳಷ್ಟು ಪ್ರಮುಖವಾಗಿರಲಿದೆ.

ಭಾರತದ ಸಂಭಾವ್ಯ ತಂಡ

ಭಾರತದ ಸಂಭಾವ್ಯ ತಂಡ

ಶುಬ್ಮನ್ ಗಿಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ವಾಶಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಆಕ್ಷರ್ ಪಟೇಲ್/ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮತ್ತು ಇಶಾಂತ್ ಶರ್ಮಾ.

ಇಂಗ್ಲೆಂಡ್ ಸಂಭಾವ್ಯ ತಂಡ

ಇಂಗ್ಲೆಂಡ್ ಸಂಭಾವ್ಯ ತಂಡ

ಡೊಮಿನಿಕ್ ಸಿಬ್ಲಿ, ರೋರಿ ಬರ್ನ್ಸ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಡೇನಿಯಲ್ ಲಾರೆನ್ಸ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಆಲ್ಲಿ ಪೋಪ್, ಡೊಮ್ ಬೆಸ್, ಜ್ಯಾಕ್ ಲೀಚ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್/ ಜೇಮ್ಸ್ ಆಂಡರ್ಸನ್

Story first published: Thursday, February 11, 2021, 23:05 [IST]
Other articles published on Feb 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X