ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3ನೇ ಟೆಸ್ಟ್ ಗೆ ಬುಮ್ರಾ ಫಿಟ್, ಕಾರ್ತಿಕ್ ಸ್ಥಾನಕ್ಕೆ ರಿಷಬ್ ಪಂತ್ ಸಾಧ್ಯತೆ

India vs England, 3rd Test: Jasprit Bumrah fit

ನವದೆಹಲಿ, ಆಗಸ್ಟ್ 14: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 0-2ರ ಹಿನ್ನೆಡೆ ಅನುಭವಿಸಿರುವುದರಿಂದ ಭಾರತ ಕ್ರಿಕೆಟ್ ತಂಡದ ನಿರ್ವಹಣಾ ಸಮಿತಿಯು ತಂಡದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲಿದೆ. ಆಡುವ 11 ಆಟಗಾರರಲ್ಲಿ ಜಸ್ ಪ್ರೀತ್ ಬುಮ್ರಾ ಮತ್ತು ರಿಷಬ್ ಪಂತ್ ಸೇರಿಕೊಳ್ಳುವ ಸಾಧ್ಯತೆಯಿದೆ.

ಐಸಿಸಿ ಶ್ರೇಯಾಂಕ: ಒಂದೇ ಪಂದ್ಯದಲ್ಲಿ ಮೊದಲ ಸ್ಥಾನ ಕಳೆದುಕೊಂಡ ಕೊಹ್ಲಿಐಸಿಸಿ ಶ್ರೇಯಾಂಕ: ಒಂದೇ ಪಂದ್ಯದಲ್ಲಿ ಮೊದಲ ಸ್ಥಾನ ಕಳೆದುಕೊಂಡ ಕೊಹ್ಲಿ

ಇಂಗ್ಲೆಂಡ್ ಎದುರು ಐದು ಪಂದ್ಯಗಳ ಸರಣಿ ಎಜ್ ಬಾಸ್ಟನ್ ನಲ್ಲಿ ಆರಂಭಗೊಂಡಾಗ ಟೆಸ್ಟ್ ರ್ಯಾಂಕಿಂಗ್ ನಲ್ಲಿ ವಿಶ್ವ ನಂ.1 ಸ್ಥಾನದಲ್ಲಿರುವ ಭಾರತ, ರ್ಯಾಂಕ್ ಗೆ ತಕ್ಕ ಪ್ರದರ್ಶನ ನೀಡುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಪಂದ್ಯ ಆರಂಭವಾದಾಗಿನಿಂದ ದ್ವಿತೀಯ ಟೆಸ್ಟ್ ಮುಕ್ತಾಯದವರೆಗೂ ಭಾರತ ಉತ್ತಮ ಪ್ರದರ್ಶನವನ್ನೇ ನೀಡಿಲ್ಲ.

ಸರಣಿಯಲ್ಲಿ ಹಿನ್ನಡೆ ಅನುಭವಿಸಿರುವುದರಿಂದ ನಾಯಕ ಕೊಹ್ಲಿ ಸಹಿತ ಭಾರತ ತಂಡವೇ ಟೀಕೆಗೆ ಒಳಗಾಗುತ್ತಿದೆ. ಭಾರತದ ಅಭಿಮಾನಿಗಳ ಅಸಮಾಧಾನಕ್ಕೂ ಕಾರಣವಾಗಿದೆ. ಹೀಗಾಗಿ ತಂಡದಲ್ಲಿ ಬದಲಾವಣೆ ತರಬೇಕಾದ ಅನಿವಾರ್ಯತೆಗೆ ತಂಡ ನಿರ್ವಹಣಾ ಸಮಿತಿ ಬಿದ್ದದೆ.

ಕಳೆದ ತಿಂಗಳು ಐರ್ಲೆಂಡ್ ಎದುರಿನ ಟಿ20 ಪಂದ್ಯದ ವೇಳೆ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಬುಮ್ರಾ ಅನಂತರದ ಪ್ರಮುಖ ಪಂದ್ಯಗಳಲ್ಲಿ ತಂಡದಿಂದ ಹೊರಗುಳಿಯುವಂತಾಗಿತ್ತು. ಆದರೆ ಈಗಿನ ಮಾಹಿತಿಯಂತೆ ಬುಮ್ರಾ ಸಂಪೂರ್ಣ ಚೇತರಿಸಿಕೊಂಡಿದ್ದು, ಮುಂಬರಲಿರುವ ಟೆಸ್ಟ್ ತಂಡಕ್ಕೆ ಬಲ ತುಂಬಲಿದ್ದಾರೆ.

ಈಗಿನ ಟೆಸ್ಟ್ ತಂಡದಲ್ಲಿರುವ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವುದರಿಂದ ಅವರ ಸ್ಥಾನಕ್ಕೆ ಯುವ ಆಟಗಾರ ರಿಷಬ್ ಪಂತ್ ಬರುವ ಸಾಧ್ಯತೆ ಹೆಚ್ಚಿದೆ. ಎರಡು ವರ್ಷಗಳಿಗೆ ಹಿಂದೆ ರಣಜಿ ಟ್ರೋಫಿಯಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸಿ ರಿಷಬ್ ತ್ರಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು.

Story first published: Tuesday, August 14, 2018, 13:20 [IST]
Other articles published on Aug 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X