ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: 4ನೇ ಟೆಸ್ಟ್ ಪಂದ್ಯವನ್ನು ಗೆಲ್ಲೋದು ಯಾರು? ಭವಿಷ್ಯ ನುಡಿದ ಆಕಾಶ್ ಚೋಪ್ರ

India vs England: Aakash Chopra predicts the result of the Oval Test

ಬೆಂಗಳೂರು, ಸೆಪ್ಟೆಂಬರ್ 1: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಎರಡು ತಂಡಗಳು ಕೂಡ ಸಜ್ಜಾಗಿದೆ. ಎರಡು ತಮಡಗಳು ಕೂಡ ಸರಣಿಯಲ್ಲಿ ಸಮಬಲವನ್ನು ಸಾಧಿಸಿರುವುದರಿಂದಾಗಿ ಮುಂದಿನ ಪಂದ್ಯವನ್ನು ಗೆಲ್ಲುವ ತಂಡ ಯಾವುದು ಎಂಬುದು ಈಗ ಎಲ್ಲರ ಕುತೂಹಲವಾಗಿದೆ. ಇತ್ತೀಚೆಗೆ ಅದ್ಭುತವಾಗಿ ಕಮ್‌ಬ್ಯಾಕ್ ಮಾಡುವುದಕ್ಕೆ ಖ್ಯಾತವಾಗಿರುವ ಟೀಮ್ ಇಂಡಿಯಾ ಓವಲ್ ಅಂಗಳದಲ್ಲಿ ನಡೆಯುವ ಪಂದ್ಯದಲ್ಲಿಯೂ ಕಮ್‌ಬ್ಯಾಕ್ ಮಾಡಬಹುದು ಎಂಬ ವಿಮರ್ಶೆಗಳು ನಡೆಯುತ್ತಿದೆ. ಮತ್ತೊಂದೆಡೆ ಹೆಡಿಂಗ್ಲೆ ಟೆಸ್ಟ್ ಗೆದ್ದ ಹುಮ್ಮಸ್ಸಿನಲ್ಲಿರುವ ಇಂಗ್ಲೆಂಡ್ ತಂಡ ತವರಿನಲ್ಲಿ ಮತ್ತೊಂದು ಗೆಲುವು ಸಾಧಿಸುವ ನೆಚ್ಚಿನ ತಂಡವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಕೂಡ ನಾಲ್ಕನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಪಂದ್ಯದ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮೂರನೇ ಪಂದ್ಯವನ್ನು ಭಾರೀ ಅಂತರದಿಂದ ಕಳೆದುಕೊಂಡ ನಂತರ ಆಕಾಶ್ ಚೋಪ್ರ ನೀಡಿರುವ ಈ ಅಭಿಪ್ರಾಯ ಕುತೂಹಲ ಮೂಡಿಸುವಂತಿದೆ.

ಹಾಗಾದರೆ ಸರಣಿಯ ನಾಲ್ಕನೇ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ವಿಚಾರವಾಗಿ ಆಕಾಶ್ ಚೋಪ್ರಾ ವ್ಯಕ್ತಪಡಿಸಿದ ಅಭಿಪ್ರಾಯವೇನು? ಮುಂದೆ ಓದಿ..

ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಬಹುದಾದ ಟೀಮ್ ಇಂಡಿಯಾದ 3 ಆಟಗಾರರುನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಬಹುದಾದ ಟೀಮ್ ಇಂಡಿಯಾದ 3 ಆಟಗಾರರು

ಭಾರತವೇ ಗೆಲ್ಲಲಿದೆ ಎಂದ ಆಕಾಶ್ ಚೋಪ್ರ

ಭಾರತವೇ ಗೆಲ್ಲಲಿದೆ ಎಂದ ಆಕಾಶ್ ಚೋಪ್ರ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಆಕಾಶ್ ಚೋಪ್ರ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಬಗ್ಗೆ ಮಾತನಾಡಿರುವ ಆಕಾಶ್ ಚೋಪ್ರ ನಾಲ್ಕನೇ ಪಂದ್ಯದಲ್ಲಿ ಭಾರತ ಗೆಲ್ಲಲಿದೆ ಎಂಬ ಮಾತನ್ನು ಹೇಳಿದ್ದಾರೆ. ಜೊತೆಗೆ ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲಿದೆ ಎಂದು ಕೂಡ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ಟಾಸ್ ಗೆಲ್ಲುವ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲಿದೆ. ಭಾರತ ತಂಡಕ್ಕೆ ಬ್ಯಾಟಿಂಗ್ ಉತ್ತಮ ಆಯ್ಕೆಯಾಗಿರಲಿದೆ. ಇಂಗ್ಲೆಂಡ್ ನೀವು ಕೂಡ ಲಾರ್ಡ್ಸ್‌ನಲ್ಲಿ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕಿತ್ತು. ಯಾಕೆಂದರೆ ಅಂತಿಮ ಹಂತದಲ್ಲಿ ಬ್ಯಾಟಿಂಗ್ ನಡೆಸುವುದು ಸುಲಭವಲ್ಲ. ಅಂದು ನೀವು ಕೇವಲ ಐವತ್ತು ಓವರ್‌ಗಳಲ್ಲಿಯೇ ಆಲೌಟ್ ಆಗಿದ್ದಿರಿ" ಎಂದು ಆಕಾಶ್ ಚೋಪ್ರಾ ವಿವರಣೆ ನೀಡಿದ್ದಾರೆ.

ಸ್ಪಿನ್ನರ್‌ಗಳಿಗೆ ಉತ್ತಮ ಅವಕಾಶ ಎಂದ ಚೋಪ್ರ

ಸ್ಪಿನ್ನರ್‌ಗಳಿಗೆ ಉತ್ತಮ ಅವಕಾಶ ಎಂದ ಚೋಪ್ರ

ಇನ್ನು ನಾಲ್ಕನೇ ಟೆಸ್ಟ್ ಪಂದ್ಯ ಓವಲ್ ಅಂಗಳದಲ್ಲಿ ನಡೆಯುತ್ತಿರುವ ಕಾರಣ ಇಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ಅವಕಾಶ ದೊರೆಯುವ ಸಾಧ್ಯತೆಯಿದೆ ಎಂದಿದ್ದಾರೆ ಚೋಪ್ರ. ಕಳೆದ ಮೂರು ಪಮದ್ಯಗಳಿಗೆ ಹೋಲಿಸಿದರೆ ಓವಲ್ ಮೈದಾನದಲ್ಲಿ ಸ್ಪಿನ್ನರ್‌ಗಳು ಹೆಚ್ಚಿನ ಯಶಸ್ಸು ಪಡೆಯಲಿದ್ದಾರೆ ಎಂದು ಚೋಪ್ರ ಊಹಿಸಿದ್ದಾರೆ. "ಈ ಐದು ದಿನಗಳ ಟೆಸ್ಟ್ ಪಂದ್ಯದಲ್ಲಿ ಕೊನೆಯ ದಿನದವರೆಗೆ ಪಂದ್ಯ ನಡೆದರೆ ಸ್ಪಿನ್ನರ್‌ಗಳು ಆರಕ್ಕಿಂತ ಹೆಚ್ಚಿನ ವಿಕೆಟ್ ಪಡೆಯಲಿದ್ದಾರೆ. ಮೊಯೀನ್ ಅಲಿ, ಆರ್ ಅಶ್ವಿನ್, ರವೀಂದ್ರ ಜಡೇಜಾ ಇವರಲ್ಲಿ ಯಾರಿಗೆ ಆ ಅವಕಾಶ ದೊರೆಯಲಿದೆ? ಎಂದಿದ್ದಾರೆ ಆಕಾಶ್ ಚೋಪ್ರ.

Bengaluru Bulls ಈ ಬಾರಿ ಯಾವ ಮಟ್ಟಕ್ಕೆ ಸಿದ್ದವಾಗಿದೆ | Pro Kabbadi Bengaluru | Oneindia Kannada
ಭೋಜನ ವಿರಾಮದ ನಂತರ ಬ್ಯಾಟಿಂಗ್ ಸುಲಭ

ಭೋಜನ ವಿರಾಮದ ನಂತರ ಬ್ಯಾಟಿಂಗ್ ಸುಲಭ

ಇನ್ನು ಇದೇ ಸಂದರ್ಭದಲ್ಲಿ ಮೊದಲ ಸೆಶನ್‌ನಲ್ಲಿ ಬ್ಯಾಟಿಂಗ್‌ ಸವಾಲಾಗಿದ್ದರೂ ಎರಡನೇ ಸೆಶನ್‌ನಲ್ಲಿ ಬ್ಯಾಟಿಂಗ್ ಸರಾಗವಾಗಿ ನಡೆಯಲಿದೆ ಎಂದಿದ್ದಾರೆ. ಭೋಜನ ವಿರಾಮದ ನಂತರ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ರನ್‌ಗಳನ್ನು ಕಲೆ ಹಾಕುವ ಅವಕಾಶವಿದೆ. "ಪ್ರತಿ ದಿನವೂ ಊಟದ ವಿರಾಮದ ಬಳಿಕ ಉತ್ತಮವಾಗಿ ರನ್ ಹರಿದುಬರಲಿದೆ. ಮಧ್ಯಮ ಓವರ್‌ಗಳಲ್ಲಿ ಹಳೆಯ ಚೆಂಡು, ಫ್ಲ್ಯಾಟ್ ಪಿಚ್ ಹಾಗೂ ಸ್ವಲ್ಪ ಹೆಚ್ಚು ಸ್ಪಿನ್ ಆಗಲಿದೆ. ಇಂತಾ ಸಂದರ್ಭದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ರನ್‌ಗಳಿಸಲು ಉತ್ತಮವಾದ ಅವಕಾಶವಿದೆ ಎಂದಿದ್ದಾರೆ ಆಕಾಶ್ ಚೋಪ್ರ.

Story first published: Wednesday, September 1, 2021, 23:53 [IST]
Other articles published on Sep 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X