ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ತವರಿನಲ್ಲಿ ಅಕ್ಷರ್ ಪಟೇರ್ ಸ್ಮರಣೀಯ ಆರಂಭ

India vs England: Dream start for Axar Patel in his home ground

ಟೀಮ್ ಇಂಡಿಯಾ ಪರವಾಗಿ ಎರಡನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಆಕ್ಷರ್ ಪಟೇಲ್ ಮೊದಲ ಬಾರಿಗೆ ತವರಿನ ಅಂಗಳ ಅಹ್ಮದಾಬಾದ್‌ನಲ್ಲಿ ಆಡಲು ಇಳಿದಿದ್ದಾರೆ. ಈ ಪಂದ್ಯದಲ್ಲಿ ಅಕ್ಷರ್ ಪಟೇಲ ತನ್ನ ಮೊದಲ ಎಸೆತದಲ್ಲಿಯೇ ವಿಕೆಟ್ ಕಬಳಿಸುವ ಮೂಲಕ ಸ್ಮರಣೀಯವನ್ನಾಗಿಸಿದ್ದಾರೆ.

ವಿಶ್ವದ ಬೃಹತ್ ಕ್ರಿಕೆಟ್ ಸ್ಟೇಡಿಯಂ ಖ್ಯಾತಿಯ ಮೊಟೇರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಇದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ ಆರಂಭದಲ್ಲೇ ಇಂಗ್ಲೆಂಡ್ ತನ್ನ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಮೊಟೆರಾ ಸ್ಟೇಡಿಯಂ ಇನ್ಮುಂದೆ 'ನರೇಂದ್ರ ಮೋದಿ ಸ್ಟೇಡಿಯಂ'ಮೊಟೆರಾ ಸ್ಟೇಡಿಯಂ ಇನ್ಮುಂದೆ 'ನರೇಂದ್ರ ಮೋದಿ ಸ್ಟೇಡಿಯಂ'

ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಇಶಾಂತ್ ಶರ್ಮಾ ಅವರ ಎಸೆತದಲ್ಲಿ ಜಾಕ್ ಕ್ರಾವ್ಲೆ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ 100ನೇ ಪಂದ್ಯವನ್ನಾಡುತ್ತಿರುವ ಇಶಾಂತ್ ಶರ್ಮಾ ಕೂಡ ಯಶಸ್ಸನ್ನು ಪಡೆದುಕೊಂಡರು. ಬಳಿಕ ಆರು ಓವರ್‌ಗಳು ಅಂತ್ಯವಾಗುತ್ತಿದ್ದಂತೆಯೇ ನಾಯಕ ವಿರಾಟ್ ಕೊಹ್ಲಿ ಚೆಂಡು ಸ್ಪಿನ್ನರ್‌ಗೆ ಕೈಗೆ ನೀಡಲು ನಿರ್ಧರಿಸಿದರು.

ನಾಯಕ ವಿರಾಟ್ ಕೊಹ್ಲಿ ಈ ಸಂದರ್ಣದಲ್ಲಿ ಅನುಭವಿ ಆರ್ ಅಶ್ವಿನ್‌ಗೆ ನೀಡದೆ ಯುವ ಸ್ಪಿನ್ನರ್ ಅಕ್ಷರ್ ಪಟೇಲ್ ಮೇಲೆ ಭರವಸೆಯನ್ನು ವ್ಯಕ್ತಪಡಿಸಿದ್ದರು. ಈ ನಂಬಿಕೆಯನ್ನು ಹುಸಿಗೊಳಿಸದ ಅಕ್ಷರ್ ಪಟೇಲ್ ತಾನೆಸೆದ ಆರಂಭಿಕ ಎಸೆತದಲ್ಲಿಯೇ ವಿಕೆಟ್ ಪಡೆಯಲು ಸಫಲರಾದರು. ಜಾನಿ ಬೈರ್‌ಸ್ಟೋವ್ ಅಕ್ಷರ್ ಎಸೆತವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿ ಎಲ್‌ಬಿ ಬಲೆಗೆ ಬಿದ್ದರು.

ಒಂದು ಪಂದ್ಯ ಗೆದ್ದು ಒಂದು ಪಂದ್ಯ ಡ್ರಾ ಮಾಡಿಕೊಳ್ಳಲು ನೋಡುತ್ತಿಲ್ಲ: ಕೊಹ್ಲಿಒಂದು ಪಂದ್ಯ ಗೆದ್ದು ಒಂದು ಪಂದ್ಯ ಡ್ರಾ ಮಾಡಿಕೊಳ್ಳಲು ನೋಡುತ್ತಿಲ್ಲ: ಕೊಹ್ಲಿ

ಇಂಗ್ಲೆಂಡ್‌ನ ಡಾಮಿನಿಕ್ ಸಿಬ್ಲಿ ಹಾಗೂ ಜಾನಿ ಬೈರ್‌ಸ್ಟೀವ್ ಇಬ್ಬರೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಮೊದಲ 15 ಓವರ್‌ಗಳ ಅಂತ್ಯದಲ್ಲಿ ಇಂಗ್ಲೆಂಡ್ 54 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

Story first published: Wednesday, February 24, 2021, 16:01 [IST]
Other articles published on Feb 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X