ಭಾರತ vs ಇಂಗ್ಲೆಂಡ್ ಟೆಸ್ಟ್: ಭಾರತದ ಯುವ ಆಟಗಾರನಿಗೆ ಗಾಯ, ಮೊದಲ ಟೆಸ್ಟ್‌ಗೆ ಅಲಭ್ಯ ಸಾಧ್ಯತೆ: ವರದಿ

ಶುಭ್‌ಮನ್ ಗಿಲ್ ಗೆ ಇಂಗ್ಲೆಂಡ್ ಸರಣಿಗೂ ಮುನ್ನ ಗಾಯ | Oneindia Kannada

ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೆ ಇನ್ನೂ ತಿಂಗಳಿಗೂ ಅಧಿಕ ಸಮಯವಿದೆ. ಆದರೆ ಅದಕ್ಕೂ ಮುನ್ನವೇ ಟೀಮ್ ಇಂಡಿಯಾ ತಂಡಕ್ಕೆ ಮೊದಲ ಹಿನ್ನೆಡೆಯಾಗಿದೆ. ಟೀಮ್ ಇಂಡಿಯಾದ ಯುವ ಆಟಗಾರ ಗಾಯಗೊಂಡಿದ್ದಾರೆ.

ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಗಾಯಗೊಂಡಿದ್ದಾರೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ. 'ಆಂತರಿಕ ಗಾಯ' ಎಂದಷ್ಟೇ ಕ್ರಿಕ್ ಬಜ್ ಉಲ್ಲೇಖ ಮಾಡಿದ್ದು ಯಾವ ಸ್ವರೂಪದ್ದು ಹಾಗೂ ಯಾವ ಭಾಗಕ್ಕೆ ಗಾಯವಾಗಿದೆ ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿಗಳು ಲಭ್ಯವಾಗಬೇಕಿದೆ.

ಬಯೋಬಬಲ್ ಉಲ್ಲಂಘಿಸಿದ ಶ್ರೀಲಂಕಾ ಆಟಗಾರರಿಗೆ ಒಂದು ವರ್ಷಗಳ ನಿಷೇಧಬಯೋಬಬಲ್ ಉಲ್ಲಂಘಿಸಿದ ಶ್ರೀಲಂಕಾ ಆಟಗಾರರಿಗೆ ಒಂದು ವರ್ಷಗಳ ನಿಷೇಧ

ಮೂಲಗಳ ಪ್ರಕಾರ ಶುಬ್ಮನ್ ಗಿಲ್ ಅವರು ಹಲವು ಸಮಯಗಳಿಂದ ಈ ಗಾಯದಿಂದ ಬಳಲುತ್ತಿದ್ದರು ಆದರೆ ಇತ್ತೀಚೆಗೆ ಅದು ಉಲ್ಬಣವಾಗಿದೆ ಎನ್ನಲಾಗಿದೆ. ಶುಬ್ಮನ್ ಗಿಲಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಈ ಪಂದ್ಯವನ್ನು ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತ್ತು.

ಶುಬ್ಮನ್ ಗಿಲ್ ಅವರ ಗೈರು ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲು ಹಂಬಲಿಸುತ್ತಿರುವ ಇಬ್ಬರು ಕನ್ನಡಿಗ ಆಟಗಾರರಲ್ಲಿ ಓರ್ವನಿಗೆ ಆರಂಭಿಕನಾಗಿ ರೋಹಿತ್ ಶರ್ಮಾಗೆ ಸಾಥ್ ನೀಡಲು ಅವಕಾಶ ನೀಡಲಿದೆ. ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಮಧ್ಯೆ ಒಬ್ಬರು ಆರಂಭಿನ ಸ್ಥಾನವನ್ನು ತುಂಬಲಿದ್ದಾರೆ. ಈ ಇಬ್ಬರು ಕೂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಅಂತಿಮ 15ರ ಬಳಗದಿಂದ ಹೊರಗುಳಿದಿದ್ದರು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ನಂತರ ಸದ್ಯ ಟೀಮ್ ಇಂಡಿಯಾ 20 ದಿನಗಳ ಬಿಡುವು ಹೊಂದಿದೆ. ಭಾರತೀಯ ತಂಡದ ಸದಸ್ಯರು ಡರಮ್‌ನಲ್ಲಿ ಜುಲೈ 14ರಂದು ಒಟ್ಟಾಗಲಿದ್ದು ಇಂಗ್ಲೆಂಡ್ ವಿರುದ್ಧಧ ಟೆಸ್ಟ್ ಸರಣಿಗೆ ಸಿದ್ಧತೆಯನ್ನು ನಡೆಸಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, June 30, 2021, 20:33 [IST]
Other articles published on Jun 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X