ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೇಲುಗೈ ಸಾಧಿಸಿದ ಇಂಗ್ಲೆಂಡ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಉತ್ತಮ ಆರಂಭ

India vs England: Rohit, Rahul good start after England take 99-run lead

ಲಂಡನ್, ಸೆಪ್ಟೆಂಬರ್ 3: ಓವಲ್ ಅಂಗಳದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತೀಯ ಬೌಲರ್‌ಗಳು ಅದ್ಭುತ ಬೌಲಿಂಗ್ ದಾಳಿಯ ಹೊರತಾಗಿಯೂ ಇಂಗ್ಲೆಂಡ್ ತಂಡ ಮುನ್ನಡೆಯನ್ನು ಪಡೆದುಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 99 ರನ್‌ಗಳ ನಿರ್ಣಾಯಕ ಮುನ್ನಡೆ ಪಡೆಯುವ ಮೂಲಕ ಎರಡನೇ ದಿನದ ಗೌರವ ಸಂಪಾದಿಸಿದೆ. ಆದರೆ ಇಂಗ್ಲೆಂಡ್ ದಾಂಡಿಗರ ವಿರುದ್ಧ ಟೀಮ್ ಇಮಡಿಯಾ ಬೌಲರ್‌ಗಳು ಸಾಧಿಸಿದ ಯಶಸ್ಸು ಕಡೆಗಣಿಸುವಂತಿಲ್ಲ. ಇಂಗ್ಲೆಂಡ್ ತಂಡದ ಅಗ್ರ ಕ್ರಮಾಂಕದ ದಾಂಡಿಗರನ್ನು ಅಗ್ಗಕ್ಕೆ ಫೆವಿಲಿಯನ್‌ಗೆ ಸೇರಿಸುವ ಮೂಲಕ ದೊಡ್ಡ ಮೊತ್ತದ ಮುನ್ನಡೆಯನ್ನು ಪಡೆಯದಂತೆ ತಡೆಯಲು ಭಾರತೀಯ ಬೌಲಿಂಗ್ ವಿಭಾಗ ಯಶಸ್ವಿಯಾಗಿದ್ದು ಕೂಡ ಗಮನಾರ್ಹ ಸಂಗತಿಯಾಗಿದೆ.

ಇಂಗ್ಲೆಂಡ್ ಅಗ್ರ ಕ್ರಮಾಂಕಕ್ಕೆ ಕಡಿವಾಣ: ಓವಲ್ ಅಂಗಳದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಅದ್ಭುತವಾದ ಬೌಲಿಂಗ್ ಪ್ರದರ್ಶನ ಮಾಡಿದ್ದಾರೆ. ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳ ವಿರುದ್ಧ ಟೀಮ್ ಇಂಡಿಯಾ ವೇಗಿಗಳು ನೀಡಿದ ಬೌಲಿಂಗ್ ಪ್ರದರ್ಶನಕ್ಕೆ ಆತಿಥೆಯರು ತತ್ತರಿಸಿದ್ದರು. ಒಂದು ಹಂತದಲ್ಲಿ ಇಂಗ್ಲೆಂಡ್ ತಂಡ ಕೇವಲ 62 ರನ್‌ಗಳಿಗೆ 5 ವಿಕೆಟ್ ಕಳೆದುಕೊಳ್ಳುವ ಮೂಲಕ ಹೀನಾಯ ಸ್ಥಿತಿಯಲ್ಲಿತ್ತು. ಈ ಸರಣಿಯುದ್ಧಕ್ಕೂ ಅದ್ಭುತ ಪ್ರದರ್ಶನ ನಿಡಿ ಮಿಂಚಿರುವ ಜೋ ರೂಟ್, ಆರಂಬಿಕ ಆಟಗಾರರಾದ ರೋರಿ ಬರ್ನ್ಸ್ ಹಾಗೂ ಹಸೀಬ್ ಹಮೀದ್, ಡೇವಿಡ್ ಮಲನ್ ಹಾಗೂ ಕ್ರೇಗ್ ಓವರ್ಟನ್ ವಿಕೆಟ್ ಬೇಗನೆ ಕಳೆದುಕೊಂಡಿತ್ತು ಇಂಗ್ಲೆಂಡ್. ಈ ಮೂಲಕ ಭಾರತ ತಂಡವನ್ನು ಅಗ್ಗಕ್ಕೆ ಆಲೌಟ್ ಮಾಡಿದ ಹೊರತಾಗಿಯೂ ದೊಡ್ಡ ಹಿನ್ನೆಡೆ ಅನುಭವಿಸುವ ಆತಂಕಕ್ಕೆ ಆತಿಥೇಯರು ಒಳಗಾಗಿದ್ದರು.

ಆದರೆ ಮಧ್ಯಮ ಹಾಗೂ ಕೆಳ ಕ್ರಮಾಂಕದ ಆಟಗಾರರು ನೀಡಿದ ಬ್ಯಾಟಿಂಗ್ ಪ್ರದರ್ಶನ ಟೀಮ್ ಇಂಡಿಯಾಗೆ ಸವಾಲಾಗಿ ಪರಿಣಮಿಸಿತ್ತು. ಒಲ್ಲೀ ಪೋಪ್, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್, ಆಲ್‌ರೌಂಡರ್ ಮೊಯೀನ್ ಅಲಿ ಹಾಗೂ ಕ್ರಿಸ್ ವೋಕ್ಸ್ ಇಂಗ್ಲೆಂಡ್ ತಂಡಕ್ಕೆ ನೆರವಾದರು. ಒಲ್ಲೀ ಪೋಪ್ ಸರ್ವಾಧಿಕ 81 ರನ್‌ಗಳ ಕೊಡುಗೆಯನ್ನು ನೀಡಿದರೆ ಕ್ರಿಸ್ ವೋಕ್ಸ್ 50 ರನ್‌ಗಳನ್ನುಗಳಿಸಿದರು. ಬೈರ್‌ಸ್ಟೋವ್ ಹಾಗೂ ಮೊಯೀನ್ ಅಲಿ ಕೂಡ 30+ ರನ್‌ಗಳ ಕೊಡುಗೆಯನ್ನು ನೀಡುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಿದರು. ಇಂಗ್ಲೆಂಡ್ ತಮಡದ ಅಗ್ರ ಕ್ರಮಾಂಕದ ಆಟಗಾರರನ್ನು ಶೀಘ್ರವಾಗಿ ಔಟ್ ಮಾಡಲು ಭಾರತೀಯ ತಂಡಕ್ಕೆ ಸಾಧ್ಯವಾದರೂ ಕೆಳ ಕ್ರಮಾಂಕದ ಆಟಗಾರರು ಕಾಡಿದರು. ಅಂತಿಮವಾಗಿ ಇಂಗ್ಲೆಂಡ್ ತಂಡ 99 ರನ್‌ಗಳ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಮಿಂಚಿದ ಬೌಲರ್‌ಗಳು: ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 191 ರನ್‌ಗಳ ಅಲ್ಪ ಮೊತ್ತವನ್ನು ದಾಖಲಿಸಿತಾದರೂ ಇಂಗ್ಲೆಂಡ್ ತಂಡ ದೊಡ್ಡ ಮೊತ್ತದ ಮುನ್ನಡೆ ಪಡೆಯದಂತೆ ಕಡಿಮಾಣ ಹಾಕಲು ಟೀಮ್ ಇಂಡಿಯಾ ಬೌಲರ್‌ಗಳ ಕೊಡುಗೆ ಬಹಳ ಪ್ರಮುಖವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಪರವಾಗಿ ವೇಗಿ ಉಮೇಶ್ ಯಾದವ್ ಮೂರು ವಿಕೆಟ್ ಪಡೆದು ಮಿಂಚು ಹರಿಸಿದರು. ಸರಣಿಯಲ್ಲಿ ಮೊದಲ ಬಾರಿಗೆ ಆಡುವ ಬಳಗದಲ್ಲಿ ಅವಕಾಶ ಪಡೆದ ಉಮೇಶ್ ಯಾದವ್ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ಡೇವಿಡ್ ಮಲನ್ ವಿಕೆಟ್ ಸೇರಿದಂತೆ ಒಟ್ಟು ಮೂರು ವಿಕೆಟ್‌ಗಳು ಉಮೇಶ್ ಯಾದವ್ ಪಾಲಾದವು. ಜಸ್ಪ್ರೀತ್ ಬೂಮ್ರಾ ಹಾಗೂ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಶಾರ್ದೂಲ್ ಠಾಕೂರ್ ಹಾಗೂ ಮೊಹಮ್ಮಸ್ ಸಿರಾಜ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ: ಇನ್ನು ಟೀಮ್ ಇಂಡಿಯಾ 99 ರನ್‌ಗಳ ಹಿನ್ನಡೆಯನ್ನು ಅನುಭವಿಸಿದ ಬಳಿಕ ದ್ವಿತೀಯ ಇನ್ನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಿದೆ. ಉತ್ತಮ ಪ್ರದರ್ಶನ ನೀಡಲು ಆರಂಭಿಸಿದ ಭಾರತೀಯ ಆರಂಭಿಕರು ತಂಡಕ್ಕೆ ಉತ್ತಮ ಕೊಡುಗೆ ನೀಡುವ ವಿಶ್ವಾಸ ಮೂಡಿಸಿದ್ದಾರೆ. ಇನ್ನೂ ಮೂರು ದಿನಗಳ ಆಟ ಬಾಕಿಯಿರುವ ಕಾರಣ ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲೇಬೇಕಿದೆ. ಭಾರತೀಯ ತಂಡ ಪಡೆಯುವ ಆರಂಭ ಪ್ರಮುಖವಾಗಿದೆ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಲಯವನ್ನು ಪ್ರದರ್ಶಿಸಿದ್ದು ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ. ರೋಹಿತ್ ಶರ್ಮಾ 56 ಎಸೆತಗಳನ್ನು ಎದುರಿಸಿದ್ದು 20 ರನ್‌ಗಳಿಸಿದ್ದಾರೆ. ಕೆಎಲ್ ರಾಹುಲ್ 41 ಎಸೆತಗಳಲ್ಲಿ 22 ರನ್ ಬಾರಿಸಿದ್ದು ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ.

ಮೂರನೇ ದಿನದಾಟ ಟೀಮ್ ಇಂಡಿಯಾಗೆ ನಿರ್ಣಾಯಕ: ಮೊದಲ ಇನ್ನಿಂಗ್ಸ್‌ನಲ್ಲಿ 99 ರನ್‌ಗಳ ಹಿನ್ನಡೆ ಅನುಭವಿಸುವ ಭಾರತ ತಂಡ ಪಂದ್ಯದಲ್ಲಿ ಹಿಡಿತ ಸಾಧಿಸಬೇಕಾದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ರನ್‌ಗಳಿಸಬೇಕಿದೆ. ಮೂರನೇ ದಿನ ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ ನೀಡುವ ಪ್ರದರ್ಶನ ತಂಡದ ಪಾಲಿಗೆ ಬಹಳ ಪ್ರಮುಖವಾಗಿದೆ. ಟೀಮ್ ಇಂಡಿಯಾ ದಾಂಡಿಗರು ಈ ಇನ್ನಿಂಗ್ಸ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲೇಬೇಕಾದ ಅನಿವಾರ್ಯತೆಯಿದೆ. ಆರಂಭಿಕರಾದ ರೋಹಿತ್ ಶರ್ಮಾ ಕೆಎಲ್ ರಾಹುಲ್ ಜೊತೆಗೆ ಚೇತೇಶ್ವರ್ ಪೂಜಾರ, ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ ರಷಬ್ ಪಂತ್‌ಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಮಿಂಚಲು ಮತ್ತೊಂದು ಅವಕಾಶ ದೊರೆತಿದೆ. ಈ ಅವಕಾಶವನ್ನು ಯಾವೆಲ್ಲಾ ಆಟಗಾರರು ಎಷ್ಟರ ಮಟ್ಟಿಗೆ ಉತ್ತಮವಾಗಿ ಬಳಸಿಕೊಳ್ಳುತ್ತಾರೆ ಎಂಬುದು ಕೂಡ ಪ್ರಮುಖವಾಗಿದೆ. ಹೀಗಾಗಿ ಮೂರನೇ ದಿನದಾಟ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ.

ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ.

ಈ ಮೂವರ ನಡುವಿನ ರೋಚಕ ಫೈಟ್ ನೋಡೋದೇ ಸಖತ್ ಮಜಾ | Oneindia Kannada

ಇಂಗ್ಲೆಂಡ್ ಆಡುವ ಬಳಗ: ಹಸೀಬ್ ಹಮೀದ್, ರೋರಿ ಬರ್ನ್ಸ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಕ್ರೇಗ್ ಓವರ್‌ಟನ್, ಒಲ್ಲಿ ಪೋಪ್, ಕ್ರಿಸ್ ವೋಕ್ಸ್, ಜಾನಿ ಬೈರ್‌ಸ್ಟೊವ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್,

Story first published: Saturday, September 4, 2021, 9:51 [IST]
Other articles published on Sep 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X