'ಪೂಜಾರ ಯಾವತ್ತಿಗೂ ರಾಹುಲ್ ದ್ರಾವಿಡ್ ಆಗಲು ಸಾಧ್ಯವಿಲ್ಲ'; ತಂಡದಿಂದ ಹೊರಬೀಳುತ್ತಾರಾ ಪೂಜಾರ?

ಚೇತೇಶ್ವರ್ ಪೂಜಾರ ಸತತವಾಗಿ ಕಳೆದ 3 ವರ್ಷಗಳಿಂದ ಕಳಪೆ ಫಾರ್ಮ್‌ನಲ್ಲಿ ಸಿಲುಕಿ ಶತಕ ಬಾರಿಸಲು ಆಗದೆ ಪರದಾಡುತ್ತಿದ್ದಾರೆ. ಈ ಹಿಂದೆ ಪೂಜಾರ ಎಂಥದ್ದೇ ಕಷ್ಟದ ಪರಿಸ್ಥಿತಿ ಬಂದರೂ ಸಹ ವಿಕೆಟ್ ಒಪ್ಪಿಸದೆ ನೆಲಕಚ್ಚಿ ನಿಂತು ಎದುರಾಳಿಗಳಿಗೆ ಬ್ಯಾಟ್ ಮೂಲಕ ಉತ್ತರ ನೀಡಿ ಕ್ರೀಡಾಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಮತ್ತು ಪ್ರಶಂಸೆಗಳನ್ನು ಪಡೆದುಕೊಳ್ಳುತ್ತಿದ್ದರು.

ಭಾರತ vs ಇಂಗ್ಲೆಂಡ್: ಈ 3 ಭಾರತೀಯ ಕ್ರಿಕೆಟಿಗರಿಗೆ ಇದೇ ಕೊನೆಯ ಸರಣಿಯಾಗಬಹುದು!ಭಾರತ vs ಇಂಗ್ಲೆಂಡ್: ಈ 3 ಭಾರತೀಯ ಕ್ರಿಕೆಟಿಗರಿಗೆ ಇದೇ ಕೊನೆಯ ಸರಣಿಯಾಗಬಹುದು!

ಆದರೆ ಈಗ ಕಾಲ ಬದಲಾಗಿದೆ, ಜೊತೆಗೆ ಪೂಜಾರ ಕುರಿತು ಪ್ರೇಕ್ಷಕರು ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಗಳು ಕೂಡ ಬದಲಾಗಿದೆ. ಪೂಜಾರ ಬ್ಯಾಟಿಂಗ್ ವೈಖರಿಯನ್ನು ಕಂಡು ಕೊಂಡಾಡುತ್ತಿದ್ದ ಕ್ರೀಡಾಭಿಮಾನಿಗಳೇ ಇದೀಗ ಪೂಜಾರ ಬ್ಯಾಟಿಂಗ್‌ನಲ್ಲಿ ಸತತವಾಗಿ ಎಡವುತ್ತಿರುವುದನ್ನು ಟೀಕಿಸತೊಡಗಿದ್ದಾರೆ. ಅಂದು ಜೂನಿಯರ್ ವಾಲ್, ಜ್ಯೂನಿಯರ್ ರಾಹುಲ್ ದ್ರಾವಿಡ್, ಜ್ಯೂನಿಯರ್ ಆಪದ್ಭಾಂಧವ ಎಂದೆಲ್ಲಾ ಬಿರುದುಗಳನ್ನು ಪಡೆದುಕೊಂಡು ಟೆಸ್ಟ್ ಕ್ರಿಕೆಟ್ ಸ್ಪೆಷಲಿಸ್ಟ್ ಎಂದೇ ಬಿಂಬಿತವಾಗಿದ್ದ ಚೇತೇಶ್ವರ ಪೂಜಾರ ಇದೀಗ ಟ್ರೋಲಿಗರ ಪಾಲಿಗೆ ಆಹಾರವಾಗಿದ್ದಾರೆ.

ಐಪಿಎಲ್ 2021: ಯುಎಇ ಪ್ರವೇಶಿಸಲು ಆಟಗಾರರಿಗೆ ಹೊಸ ಷರತ್ತು ವಿಧಿಸಿದ ಬಿಸಿಸಿಐಐಪಿಎಲ್ 2021: ಯುಎಇ ಪ್ರವೇಶಿಸಲು ಆಟಗಾರರಿಗೆ ಹೊಸ ಷರತ್ತು ವಿಧಿಸಿದ ಬಿಸಿಸಿಐ

ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯಕ್ಕೆ ಪೂಜಾರರನ್ನು ಆಯ್ಕೆ ಮಾಡಿಕೊಂಡಾಗಲೇ ಕೆಲ ಕ್ರೀಡಾಭಿಮಾನಿಗಳು ಪ್ರಶ್ನೆಯನ್ನು ಮಾಡಿದ್ದರು. ಕಳೆದ 3 ವರ್ಷಗಳಿಂದ ಸತತವಾಗಿ ವಿಫಲರಾಗುತ್ತಿರುವ ಚೇತೇಶ್ವರ ಪೂಜಾರಗೆ ಪದೇ ಪದೇ ಅವಕಾಶ ನೀಡುತ್ತಿರುವುದಾದರೂ ಯಾಕೆ ಎಂಬ ಪ್ರಶ್ನೆಯನ್ನು ಹಾಕಿದ್ದರು. ಇತ್ತೀಚೆಗಷ್ಟೇ ನಡೆದ ನ್ಯೂಜಿಲೆಂಡ್ ವಿರುದ್ಧದ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲೂ ಮುಗ್ಗರಿಸಿದ್ದ ಚೇತೇಶ್ವರ ಪೂಜಾರ ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿಯೂ ಕಳಪೆ ಪ್ರದರ್ಶನ ತೋರಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಚೇತೇಶ್ವರ್ ಪೂಜಾರ 16 ಎಸೆತಗಳನ್ನು ಎದುರಿಸಿ 4 ರನ್ ಕಲೆಹಾಕಿ ಜೇಮ್ಸ್ ಆ್ಯಂಡರ್ಸನ್ ಎಸೆತದಲ್ಲಿ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಹೀಗೆ ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಾ ಬಂದಿರುವ ಪೂಜಾರ ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿಯೂ ಕಳಪೆ ಪ್ರದರ್ಶನ ನೀಡಿದ ನಂತರ ಟ್ವಿಟ್ಟರ್ ತುಂಬ ಪೂಜಾರ ಕಳಪೆ ಪ್ರದರ್ಶನದ ಕುರಿತು ಈ ಕೆಳಕಂಡಂತೆ ಟೀಕೆಗಳು ವ್ಯಕ್ತವಾಗಿವೆ.

ಸಚಿನ್ ಮತ್ತು ದ್ರಾವಿಡ್ ಜಾಗ ತುಂಬುವುದು ಸುಲಭದ ಮಾತಲ್ಲ

ಸಚಿನ್ ಮತ್ತು ದ್ರಾವಿಡ್ ಜಾಗ ತುಂಬುವುದು ಸುಲಭದ ಮಾತಲ್ಲ

ಸಚಿನ್ ಮತ್ತು ದ್ರಾವಿಡ್ ಜಾಗವನ್ನು ತುಂಬುವುದು ಸುಲಭವಲ್ಲ ಎಂದು ಟ್ವೀಟ್ ಮಾಡುವುದರ ಮೂಲಕ ನೆಟ್ಟಿಗರೊಬ್ಬರು ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ್ ಪೂಜಾರ ಕಳಪೆ ಪ್ರದರ್ಶನದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೂಜಾರರನ್ನು ತಂಡದಿಂದ ಕೈಬಿಡಿ

ಪೂಜಾರರನ್ನು ತಂಡದಿಂದ ಕೈಬಿಡಿ

ಚೇತೇಶ್ವರ್ ಪೂಜಾರ ಯಾವುದೇ ಕಾರಣಕ್ಕೂ ರಾಹುಲ್ ದ್ರಾವಿಡ್ ಆಗಲು ಸಾಧ್ಯವೇ ಇಲ್ಲ, ದಯವಿಟ್ಟು ಬಿಸಿಸಿಐ ಚೇತೇಶ್ವರ್ ಪೂಜಾರರನ್ನು ಮುಂದಿನ ಪಂದ್ಯದಿಂದ ಕೈಬಿಡಬೇಕು ಇಲ್ಲದಿದ್ದರೆ ಪೂಜಾರ 100 ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸದೇ ಸಮಯ ಹಾಳು ಮಾಡುತ್ತಾರೆ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.

ಪೂಜಾರ ಜಾಗಕ್ಕೆ ಸೂರ್ಯಕುಮಾರ್ ಯಾದವ್ ಸೂಕ್ತ

ಪೂಜಾರ ಜಾಗಕ್ಕೆ ಸೂರ್ಯಕುಮಾರ್ ಯಾದವ್ ಸೂಕ್ತ

ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಾ ಬರುತ್ತಿರುವ ಚೇತೇಶ್ವರ್ ಪೂಜಾರರನ್ನು ತಂಡದಿಂದ ಕೈಬಿಡಬೇಕು ಮತ್ತು ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅಥವಾ ಕೆಎಲ್ ರಾಹುಲ್‌ಗೆ ಆಡುವ ಅವಕಾಶವನ್ನು ನೀಡಬೇಕೆಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಟ್ವೀಟ್ ಮೂಲಕ ಟ್ರೊಲ್ ಆದ ವಿರಾಟ್ ಕೊಹ್ಲಿ !! | Oneindia Kannada

ಇದಿಷ್ಟೇ ಅಲ್ಲದೇ ಇನ್ನೂ ಹಲವಾರು ನೆಟ್ಟಿಗರು ಚೇತೇಶ್ವರ್ ಪೂಜಾರ ಕಳಪೆ ಪ್ರದರ್ಶನದ ಕುರಿತು ಕಿಡಿಕಾರಿದ್ದು ಬೇಸರ ವ್ಯಕ್ತಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, August 6, 2021, 20:41 [IST]
Other articles published on Aug 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X