ಲಾರ್ಡ್ಸ್ ಟೆಸ್ಟ್‌: ಟೀಮ್ ಇಂಡಿಯಾ ಕೆಂಪು ಟೋಫಿ ಧರಿಸಿ ಕಣಕ್ಕಿಳಿಯಲು ಕಾರಣವೇನು ಗೊತ್ತಾ?

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಟಗಾರರು ವಿಶೇಷ ಉಡುಪಿನಲ್ಲಿ ಕಂಡರು | Oneindia Kannada

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಎರಡನೇ ದಿನದಾಟ ಆರಂಭವಾಗಿದೆ. ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಸಾಮಾನ್ಯ ಟೆಸ್ಟ್ ಟೋಪಿಯ ಬದಲಾಗಿ ಕೆಂಪು ಟೋಪಿ ಧರಿಸಿ ಕಣಕ್ಕಿಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಭಾರತ ತಂಡದ ನಿರ್ಧಾರಕ್ಕೆ ಬಲವಾದ ಕಾರಣವೂ ಇದೆ. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ರೋಗಿಗಳಿಗೆ ಹಾಗೂ ಅವರ ಕುಟುಂಬಕ್ಕೆ ನೆರವಾಗುತ್ತಿರುವ ರುತ್ ಸ್ಟ್ರಾಸ್ ಕ್ಯಾನ್ಸರ್ ಫೌಂಡೇಶನ್‌ಗೆ ಬೆಂಬಲವನ್ನು ನೀಡುವ ನಿಟ್ಟಿನಲ್ಲಿ ಭಾರತ ಇಂದಿನ ಪಂದ್ಯದಲ್ಲಿ ಕೆಂಪು ಟೋಪಿಯನ್ನು ಧರಿಸಿ ಎರಡನೇ ದಿನದಾಟದಲ್ಲಿ ಕಣಕ್ಕಿಳಿದಿದೆ.

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಆ್ಯಂಡ್ರೋ ಸ್ಟ್ರಾಸ್ ಅವರ ಪತ್ನಿ ರುತ್ ಸ್ಟ್ರಾಸ್ ಸುದೀರ್ಘ ಕಾಲ ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಡಿ 2018ರಲ್ಲಿ ಮೃತಪಟ್ಟಿದ್ದರು. ಮಡದಿಯ ಅಗಲಿಕೆಯ ಬಳಿಕ ಆಂಡ್ರ್ಯೋ ಸ್ಟ್ರಾಸ್ ಪತ್ನಿಯ ಹೆಸರಿನಲ್ಲಿ ಕ್ಯಾನ್ಸರ್ ಫೌಂಡೇಶನ್ ಒಂದನ್ನು ಆರಂಭಿಸಿದ್ದರು. ಈ ಫೌಂಡೇಶನ್ ಮೂಲಕ ಧೂಮಪಾನ ಮಾಡದೆ ಶ್ವಾಸಕೋಶದ ಕ್ಯಾನ್ಸರ್‌ ಕುರಿತು ಸಂಶೋಧನೆಗೆ ಹಾಗೂ ಕ್ಯಾನ್ಸರ್‌ನ ಆಘಾತಕ್ಕೆ ಒಳಗಾಗಿರುವ ಕುಟುಂಬಕ್ಕೆ ನೆರವನ್ನು ನೀಡುತ್ತಿದೆ.

ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಶತಕ ಸಿಡಿಸಿದ ಮೂವರು ಕನ್ನಡಿಗರು ಇವರು!ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಶತಕ ಸಿಡಿಸಿದ ಮೂವರು ಕನ್ನಡಿಗರು ಇವರು!

ಈ ಫೌಂಡೇಶನ್‌ನ ಕಾರ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡನೇ ದಿನವನ್ನು 'ರೆಡ್ ಫೊರ್ ರುತ್" ಡೇ ಎಂದು ಆಚರಿಸಲಾಗುತ್ತಿದೆ. ಟೀಮ್ ಇಂಡಿಯಾ ಮಾತ್ರವಲ್ಲದೆ ಕಾಮೆಂಟರಿ ತಂಡ, ಮೈದಾನದಲ್ಲಿರುವ ಪ್ರೇಕ್ಷಕರು ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡ ಕೂಡ ಕೆಂಪು ಧಿರಿಸಿನೊಂದಿಗೆ ಕಾಣಿಸಿಕೊಂಡಿದ್ದಾರೆ.

ಟೆಸ್ಟ್‌ನ ಮೊದಲ ದಿನದಾಟದಲ್ಲಿ ಭಾರತಕ್ಕೆ ಮೇಲುಗೈ: ಇನ್ನು ಲಾರ್ಡ್ಸ್ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಭಾರತ ಸಂಒಊರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಟೀಮ್ ಇಂಡಿಯಾದ ಆಟಗಾರ ಕೆಎಲ್ ರಾಹುಲ್ ಮೊದಲ ದಿನ ಶತಕಗಳಿಸಿ ಸಂಭ್ರಮಿಸಿದ್ದರು. ಅನುಭವಿ ರೋಹಿತ್ ಶರ್ಮಾ ಕೂಡ ಮೊದಲ ದಿನ 83 ರನ್‌ಗಳ ಕೊಡುಗೆಯನ್ನು ನೀಡಿ ವಿಕೆಟ್ ಕಳೆದುಕೊಂಡರು. ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ಭಾರತ ತಂಡದ ಮೂರು ವಿಕೆಟ್‌ಗಳನ್ನು ಮಾತ್ರವೇ ಪಡೆಯಲು ಸಫಲವಾಗಿತ್ತು.

ಎರಡನೇ ದಿನದ ಆರಂಭದಲ್ಲಿಯೇ ತಿರುಗಿಬಿದ್ದ ಇಂಗ್ಲೆಂಡ್: ಇನ್ನು ಮೊದಲ ದಿನದಾಟದಲ್ಲಿ ಹಿನ್ನೆಡೆಯನ್ನು ಕಂಡಿದ್ದ ಇಂಗ್ಲೆಂಡ್ ಬೌಲರ್‌ಗಳು ಎರಡನೇ ದಿನದ ಆರಂಭದಲ್ಲಿಯೇ ಭಾರತಕ್ಕೆ ಆಘಾತವನ್ನು ನೀಡುವಲ್ಲಿ ಯಶಸ್ವಿಯಾಗಿದ್ದರು. ಶತಕಗಳಿಸಿ ಮುನ್ನುಗ್ಗುತ್ತಿದ್ದ ಕೆಎಲ್ ರಾಹುಲ್ ಎರಡನೇ ದಿನ ಕೇವಲ ಎರಡು ರನ್ ಸೇರಿಸಿ ವಿಕೆಟ್ ಕಳೆದುಕೊಂಡಿದ್ದಾರೆ. ರಾಹುಲ್ 129 ರನ್‌ಗಳನ್ನು ಗಳಿಸಿ ಔಟಾದರು. ನಂತರ ಅಜಿಂಕ್ಯ ರಹಾನೆ ಕೂಡ ಮೊದಲ ದಿನ ಗಳಿಸಿದ್ದ 1 ರನ್‌ಗೇ ಇಂದು ಕೂಡ ಆಟವನ್ನು ಅಂತ್ಯಗೊಳಿಸಿದ್ದಾರೆ. ಬಳಿಕ ರಿಷಭ್ ಪಂತ್ ಕೂಡ 57 ಎಸೆತಗಳನ್ನು ಎದುರಿಸಿ 37 ರನ್‌ಗಳನ್ನು ಮಾಡಿ ವಿಕೆಟ್ ಕಳೆದುಕೊಂಡಿದ್ದಾರೆ. ಎರಡನೇ ದಿನದ ಭೋಜನ ವಿರಾಮದ ವೇಳೆಗೆ ಟೀಮ್ ಇಂಡಿಯಾ 346 ರನ್‌ಗಳಿಸಿದ್ದು 7 ವಿಕೆಟ್ ಕಳೆದುಕೊಂಡಿದೆ. ರವೀಂದ್ರ ಜಡೇಜಾ 31 ರನ್‌ಗಳಿಸಿ ಆಡುತ್ತಿದ್ದರೆ ಇಶಾಂತ್ ಶರ್ಮಾ ಸಾಥ್ ಭೋಜನವಿರಾಮದ ವೇಳೆಗೆ ಕ್ರೀಸ್‌ನಲ್ಲಿದ್ದರು.

ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ಆಡುವ ಬಳಗ
ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.

ಇಂಗ್ಲೆಂಡ್ ಆಡುವ ಬಳಗ:
ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, August 13, 2021, 17:44 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X