ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹಾರ್ದಿಕ್ ಪಾಂಡ್ಯ ಹೊರಕ್ಕೆ

Hardik Pandya ruled out of Test Series | Test Cricket | India | Cricket

ನವದೆಹಲಿ, ಫೆಬ್ರವರಿ 1: ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಆಡುತ್ತಿಲ್ಲ. ಮುಂಬರಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಪಾಂಡ್ಯ ಹೊರಗಿರುವುದನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಶನಿವಾರ ಖಾತರಿಪಡಿಸಿದೆ.

ಕ್ರಿಕೆಟ್‌ ಲೋಕದಲ್ಲಿ ಮತ್ತೊಂದು ಸೂಪರ್ ಓವರ್: ಇದ್ಯಾವ ತಂಡಗಳ ವಿರುದ್ಧ ಗೊತ್ತಾ !ಕ್ರಿಕೆಟ್‌ ಲೋಕದಲ್ಲಿ ಮತ್ತೊಂದು ಸೂಪರ್ ಓವರ್: ಇದ್ಯಾವ ತಂಡಗಳ ವಿರುದ್ಧ ಗೊತ್ತಾ !

ಬೆನ್ನು ಮೂಳೆಯ ಶಸ್ತ್ರ ಚಿಕಿತ್ಸಕ ಡಾ. ಜೇಮ್ಸ್ ಆ್ಯಲಿಬೋನ್ ಅವರೊಂದಿಗೆ ವಿಮರ್ಶೆ ನಡೆಸುವುದಕ್ಕಾಗಿ ಹಾರ್ದಿಕ್ ಪಾಂಡ್ಯ ಅವರು ಎನ್‌ಸಿಎ ಹೆಡ್ ಫಿಸಿಯೋ ಆಶಿಶ್ ಕೌಶಿಕ್‌ ಜೊತೆಗೆ ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಸಂಪೂರ್ಣ ಚೇತರಿಸಿಕೊಳ್ಳುವ ತನಕ ಹಾರ್ದಿಕ್ ಅವರು ಎನ್‌ಸಿಎಯಲ್ಲಿ ಇರಲಿದ್ದಾರೆ,' ಎಂದು ಬಿಸಿಸಿಐ ಹೇಳಿಕೆ ಮೂಲಕ ತಿಳಿಸಿದೆ.

ಅಫ್ಘಾನಿಸ್ತಾನ ಮಣಿಸಿದ ಪಾಕಿಸ್ತಾನಕ್ಕೆ ಸೆಮಿಫೈನಲ್‌ನಲ್ಲಿ ಭಾರತ ಎದುರಾಳಿ!ಅಫ್ಘಾನಿಸ್ತಾನ ಮಣಿಸಿದ ಪಾಕಿಸ್ತಾನಕ್ಕೆ ಸೆಮಿಫೈನಲ್‌ನಲ್ಲಿ ಭಾರತ ಎದುರಾಳಿ!

ನ್ಯೂಜಿಲೆಂಡ್‌ ಪ್ರವಾಸ ಹೊರಡಲಿದ್ದ ಭಾರತ 'ಎ' ತಂಡದ ಪರ ಆಡಿಸುವ ಸಲುವಾಗಿ ನಡೆಸಲಾದ ಫಿಟ್‌ನೆಸ್‌ ಟೆಸ್ಟ್‌ನಲ್ಲಿ ಹಾರ್ದಿಕ್ ಪಾಂಡ್ಯ ವಿಫಲರಾಗಿದ್ದರು. ಹೀಗಾಗಿ ಪಾಂಡ್ಯ ಬದಲಿಗೆ ವಿಜಯ್ ಶಂಕರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ನ್ಯೂಜಿಲೆಂಡ್ ಈ ಪ್ರವಾಸ ಸರಣಿಯು 50 ಓವರ್‌ಗಳ 2 ಅಭ್ಯಾಸ ಪಂದ್ಯ, ಲಿಸ್ಟ್ ಎ 3 ಪಂದ್ಯಗಳು ಮತ್ತು ನಾಲ್ಕು ದಿನಗಳ 2 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿತ್ತು.

2 ಸೂಪರ್ ಓವರ್, 2 ಗೆಲುವು: ನಾಲ್ಕನೇ ಟಿ20ಯಲ್ಲಿ ಇತಿಹಾಸ ಬರೆದ ಭಾರತ2 ಸೂಪರ್ ಓವರ್, 2 ಗೆಲುವು: ನಾಲ್ಕನೇ ಟಿ20ಯಲ್ಲಿ ಇತಿಹಾಸ ಬರೆದ ಭಾರತ

ಭಾರತ ತಂಡದ ಮಾಜಿ ನಾಯಕ, ಈಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಹಾರ್ದಿಕ್ ಆರೋಗ್ಯದ ಬಗ್ಗೆ ಮಾತನಾಡಿ, ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆಯಾದ ಬಳಿಕ ಪಾಂಡ್ಯ ಸಂಪೂರ್ಣ ಚೇತರಿಸಿಕೊಂಡಿಲ್ಲ ಎಂಬ ವಿಚಾರವನ್ನು ತಿಳಿಸಿದ್ದಾರೆ. 'ಆತ ಈಗ ಆಡುತ್ತಿಲ್ಲ. ಸಂಪೂರ್ಣ ಚೇತರಿಸಿಕೊಳ್ಳಲು ಅವನಿಗೆ ಇನ್ನೊಂದಿಷ್ಟು ಕಾಲಾವಕಾಶ ಬೇಕು' ಎಂದು ಗಂಗೂಲಿ ಹೇಳಿದ್ದಾರೆ.

ಮೊನ್ನೆ ಶಮಿ ಇಂದು ಠಾಕೂರ್: ಫೈನಲ್ ಓವರ್ ಹೀರೋಗಳು!ಮೊನ್ನೆ ಶಮಿ ಇಂದು ಠಾಕೂರ್: ಫೈನಲ್ ಓವರ್ ಹೀರೋಗಳು!

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕಡೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 4 ಪಂದ್ಯಗಳನ್ನು ಗೆದ್ದಿದೆ. ಈ ಸರಣಿ ಬಳಿಕ 3 ಪಂದ್ಯಗಳ ಏಕದಿನ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 5 - October 19 2021, 03:30 PM
ಸ್ಕಾಟ್ಲೆಂಡ್
ಪಪುವಾ ನ್ಯೂ ಗಿನಿವಾ
Predict Now

For Quick Alerts
ALLOW NOTIFICATIONS
For Daily Alerts
Story first published: Saturday, February 1, 2020, 15:00 [IST]
Other articles published on Feb 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X