ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಪಾಕ್: ಇಲ್ಲಿ ಬರೀ ಭಾವನೆಗಳಿಲ್ಲ, ಭರ್ಜರಿ ಬ್ಯುಸಿನೆಸ್ಸೂ ಇದೆ!

India vs Pakistan: Not just emotions, even profitability is in fans’ mind

ಲಂಡನ್, ಜೂನ್ 15: ದೊಡ್ಡ ಕ್ರಿಕೆಟ್ ಟೂರ್ನಿಗಳು ಬರೀ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಗಳಲ್ಲ, ಜೊತೆಗೆ ಅದು ದೊಡ್ಡ ಮಟ್ಟಿನ ವ್ಯವಹಾರಕ್ಕೆ ಉತ್ತಮ ನೆಪವೂ ಹೌದು. ಸದ್ಯ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯೂ ಅದಕ್ಕೆ ಹೊರತಾಗಿಲ್ಲ. ಅದರಲ್ಲೂ ವಿಶ್ವಕಪ್‌ನಲ್ಲಿ ಭಾರತ vs ಪಾಕಿಸ್ತಾನ ತಂಡಗಳ ಮುಖಾಮುಖಿ ಬೇರೆಯೇ ಕ್ರೇಝ್ ಸೃಷ್ಠಿಸಿಬಿಡುತ್ತದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ನೆರೆಯ ರಾಷ್ಟ್ರಗಳಾದರೂ ಪರಸ್ಪರ ಉತ್ತಮ ಸೌಹಾರ್ದ ಹೊಂದಿರದ ಭಾರತ ಮತ್ತು ಪಾಕಿಸ್ತಾನ ತಂಡಗಳು ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗುತ್ತಿದೆಯೆಂದರೆ ಅಲ್ಲಿ ವಿಶೇಷ ರೋಚಕತೆ ಮನೆ ಮಾಡಿರುತ್ತೆ. ಭಾನುವಾರ (ಜೂನ್ 16) ಓಲ್ಡ್ ಟ್ರಾಫೋರ್ಡ್ ನಲ್ಲಿನ ಪಂದ್ಯ ಇದಕ್ಕೆ ಉತ್ತಮ ಉದಾಹರಣೆಯಾಗಲಿದೆ.

ಪಾಕ್ ಜಾಹಿರಾತಿಗೆ ತಪರಾಕಿ ಕೊಟ್ಟ ಭಾರತದ 'ಸ್ಟಾರ್‌'ಗಳು: ವೈರಲ್ ವಿಡಿಯೋಪಾಕ್ ಜಾಹಿರಾತಿಗೆ ತಪರಾಕಿ ಕೊಟ್ಟ ಭಾರತದ 'ಸ್ಟಾರ್‌'ಗಳು: ವೈರಲ್ ವಿಡಿಯೋ

ಭಾರತ ಮತ್ತು ಪಾಕಿಸ್ತಾನ ಪಂದ್ಯ ಹೇಗೆ ಭಾವನಾತ್ಮಕವಾಗಿ ಮತ್ತು ವ್ಯವಹಾರಾತ್ಮಕವಾಗಿ ಕಾರಣವಾಗುತ್ತವೆ ಎಂಬುದಕ್ಕೆ ಇಲ್ಲೊಂದಿಷ್ಟು ಅಂಶಗಳಿವೆ.

ಪಂದ್ಯ ಮತ್ತು ಪ್ರಚೋದನೆ

ಪಂದ್ಯ ಮತ್ತು ಪ್ರಚೋದನೆ

ವರದಿಯ ಪ್ರಕಾರ 22ನೇ ವಿಶ್ವಕಪ್ ಪಂದ್ಯವಾಗಿ ಕಾದಾಟಕ್ಕಿಳಿಯಲಿರುವ ಪಂದ್ಯ ಊಹಿಸಲಾಗದ ಪ್ರಚೋದನಾತ್ಮಕ ಪಂದ್ಯವಾಗಿ ಮಾರ್ಪಟ್ಟಿದೆ. ರಾಜಕೀಯವಾಗಿ ಭಾರತ ಮತ್ತು ಪಾಕಿಸ್ತಾನ ದೇಶಗಳ ಮಧ್ಯೆ ವೈಮನಸ್ಸು ಏರ್ಪಟ್ಟಿರುವುದು ಇದಕ್ಕೆ ಕಾರಣ. ಹೀಗಾಗಿ ಈ ಇತ್ತಂಡಗಳ ಮುಖಾಮುಖಿ ಭಾವನಾತ್ಮಕವಾಗಿಯೂ ವ್ಯಾಪಾರಾತ್ಮಕವಾಗಿಯೂ ಸೆಳೆದಿದೆ.

ಗಂಟೆಯೊಳಗೆ ಟಿಕೆಟ್ ಕಲಾಸ್

ಗಂಟೆಯೊಳಗೆ ಟಿಕೆಟ್ ಕಲಾಸ್

20,000ದಷ್ಟು ದೊಡ್ಡ ಮಟ್ಟಿನ ಸಾಮರ್ಥ್ಯ ಹೊಂದಿರುವ ಓಲ್ಡ್ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ಇತ್ತಂಡಗಳ ಪಂದ್ಯದ ಟಿಕೆಟ್‌ಗಾಗಿ ಕೌಂಟರ್ ತೆರೆದಿದ್ದೇ ತಡ, ಒಂದು ಗಂಟೆಯೊಳಗಾಗಿ ಅಷ್ಟೂ ಟಿಕೆಟ್‌ಗಳು ಫಿನಿಷ್. ಅಲ್ಲಿ ಟಿಕೆಟ್ ಖರೀದಿಸಿವರು ಅದೇ ಟಿಕೆಟನ್ನು ದೊಡ್ಡ ಬೆಲೆಗೆ ಮರು ಮಾರಾಟವೂ ನಡೆಸಿ ಕಿಸೆ ತುಂಬಿಸಿಕೊಳ್ಳುತ್ತಿದ್ದಾರೆ. ಟಿಕೆಟ್ ಒಂದರ ಮರು ಮಾರಾಟದ ಬೆಲೆ 60,000 ರೂ. ದಾಟುತ್ತದೆಯೆಂದರೆ ಭಾರತ vs ಪಾಕ್ ತಂಡಗಳ ಪಂದ್ಯದ ಬಿಸಿ ಎಷ್ಟರ ಮಟ್ಟಿನದ್ದು ಎಂಬುದು ಊಹಿಸಿ.

ವಾಪಸ್ಸು ಕೊಡಿ ಅನ್ನೋರು

ವಾಪಸ್ಸು ಕೊಡಿ ಅನ್ನೋರು

ವಯಾಗೊಗೊ ಎನ್ನುವ ಟಿಕೆಟ್ ಮಾರಾಟ ವೆಬ್‌ಸೈಟ್‌ವೊಂದು ಅಭಿಮಾನಿಗಳಿಂದ ಟಿಕೆಟ್ ಖರೀದಿಸಿ ಅದನ್ನೇ ಮರು ಮಾರಾಟ ನಡೆಸುತ್ತದೆ. ಆ ವೆಬ್‌ಸೈಟ್ ಹೇಳುವ ಪ್ರಕಾರ 480 ಜನ ತಾವು ಮಾರಾಟ ಮಾಡಿರುವ ಟಿಕೆಟನ್ನು ತಮಗೇ ಮಾರಾಟ ಮಾಡುವಂತೆ ಕೇಳಿಕೊಂಡಿದ್ದಾರಂತೆ. ಯಾಕಂದರೆ ಇವರಿಗೆ ಆ ಟಿಕೇಟ್‌ಗಳನ್ನು ಕೊಟ್ಟವರು ಇವರಿಂದ ಟಿಕೆಟ್ ವಾಪಸ್ ಕೇಳುತ್ತಿದ್ದಾರಂತೆ. ಅಂದ್ಹಾಗೆ ಟಿಕೆಟ್ ಒಂದರ ಅತ್ಯಧಿಕ ದರ 62,610 ರೂ. ಆದರೆ, ಕನಿಷ್ಠ ದರ 20,171 ರೂ.

ಮರು ಮಾರಾಟಕ್ಕೆ ಮಳೆ ಭೀತಿ

ಮರು ಮಾರಾಟಕ್ಕೆ ಮಳೆ ಭೀತಿ

ಭಾರತ vs ಪಾಕಿಸ್ತಾನ ತಂಡಗಳ ಹೈ ವೋಲ್ಟೇಜ್ ಪಂದ್ಯವವನ್ನು ನೋಡುವ ಸಲುವಾಗಿ ಟಿಕೆಟ್ ಖರೀದಿಸಿ ಅದನ್ನು ಮಾರುತ್ತಿರುವುದಕ್ಕೆ ಒಂದು ಕಾರಣ ಮಳೆಯ ಭೀತಿ. ಈಗಾಗಲೇ ಟೂರ್ನಿಯ ನಾಲ್ಕು ಪಂದ್ಯಗಳು ಮಳೆಯ ಕಾರಣಕ್ಕೆ ಫಲಿತಾಂಶವನ್ನೇ ಕಾಣಲಿಲ್ಲ. ಹೀಗಾಗಿ ಅಷ್ಟೊಂದು ಬೆಲೆ ತೆತ್ತು ಖರೀದಿಸುವ ಟಿಕೆಟ್‌ ನಿಂದ ಪಂದ್ಯ ನೋಡಲು ಅವಕಾಶ ಸಿಗದಿದ್ದರೆ ಆಗೋ ಲಾಸಿನ ಬದಲು ಬೇರೆಯವರಿಗೆ ದಾಟಿಸೋದೆ ಲೇಸು ಅನ್ನೋದು ಕೆಲವರ ಐಡಿಯಾ.

Story first published: Saturday, June 15, 2019, 21:28 [IST]
Other articles published on Jun 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X