ಭಾರತ vs ದ.ಆಫ್ರಿಕಾ: ಮೈದಾನದಲ್ಲಿ ಮಯಾಂಕ್ ಕುರಿತು ಅಸಮಾಧಾನ ಹೊರಹಾಕಿದ ಕೊಹ್ಲಿ

ಕೇಪ್ ಟೌನ್ ಟೆಸ್ಟ್ ನಲ್ಲಿ ವಿಶಿಷ್ಟ ಶತಕ ಸಿಡಿಸಿದ Virat Kohli | Oneindia Kannada

ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಹರಿಣಗಳ ವಿರುದ್ಧ ಮೊದಲಿಗೆ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಈ ಟೆಸ್ಟ್ ಸರಣಿ ಪೈಕಿ ಇತ್ತಂಡಗಳ ನಡುವೆ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು ಸೆಂಚೂರಿಯನ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ಜಯ ಗಳಿಸಿದರೆ, ಜೋಹಾನ್ಸ್ ಬರ್ಗ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಜಯ ಸಾಧಿಸಿತು. ಹೀಗೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಜಯವನ್ನು ಸಾಧಿಸಿದ ಕಾರಣ ಇತ್ತಂಡಗಳು ಕೂಡ ಸರಣಿಯ ಮೇಲೆ ಸಮಬಲವನ್ನು ಸಾಧಿಸಿವೆ.

 ಬಲಿಷ್ಠ ಡೆಲ್ಲಿಗೆ ಮಣ್ಣು ಮುಕ್ಕಿಸಿದ ಬೆಂಗಳೂರು: ಪಿಕೆಎಲ್ ಇತಿಹಾಸದಲ್ಲೇ ಇದು 2ನೇ ದೊಡ್ಡ ಗೆಲುವು! ಬಲಿಷ್ಠ ಡೆಲ್ಲಿಗೆ ಮಣ್ಣು ಮುಕ್ಕಿಸಿದ ಬೆಂಗಳೂರು: ಪಿಕೆಎಲ್ ಇತಿಹಾಸದಲ್ಲೇ ಇದು 2ನೇ ದೊಡ್ಡ ಗೆಲುವು!

ಹೀಗಾಗಿ ಸದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಕೇಪ್ ಟೌನ್ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯ ಸರಣಿಯಲ್ಲಿ ಯಾವ ತಂಡ ವಿಜೇತವಾಗಿ ಹೊರಹೊಮ್ಮಲಿದೆ ಎಂಬುದನ್ನು ನಿರ್ಧರಿಸಲಿದ್ದು ಭಾರೀ ಕುತೂಹಲವನ್ನು ಕೆರಳಿಸಿದೆ. ಇನ್ನು ಇತ್ತಂಡಗಳ ನಡುವೆ ತೃತೀಯ ಟೆಸ್ಟ್ ಪಂದ್ಯ ಈಗಾಗಲೇ ಆರಂಭವಾಗಿದ್ದು ಎರಡನೇ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 70 ರನ್‌ಗಳ ಮುನ್ನಡೆಯನ್ನು ಸಾಧಿಸಿದೆ.

ದ್ರಾವಿಡ್ ಮತ್ತು ನಾನು ಒಂದೇ ಕುಟುಂಬದವರು ಎಂದ ನಟಿ; ದ್ರಾವಿಡ್‌ಗೂ ಆ ನಟಿಗೂ ಇರುವ ನಂಟೇನು?ದ್ರಾವಿಡ್ ಮತ್ತು ನಾನು ಒಂದೇ ಕುಟುಂಬದವರು ಎಂದ ನಟಿ; ದ್ರಾವಿಡ್‌ಗೂ ಆ ನಟಿಗೂ ಇರುವ ನಂಟೇನು?

ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿ ಮೊದಲನೇ ಇನ್ನಿಂಗ್ಸ್‌ನಲ್ಲಿ 223 ರನ್‌ಗಳಿಗೆ ಆಲ್ ಔಟ್ ಆಗಿ ಹಿನ್ನಡೆ ಅನುಭವಿಸಿದ್ದ ಟೀಂ ಇಂಡಿಯಾ ಎರಡನೇ ದಿನದಾಟದಂದು ದಕ್ಷಿಣ ಆಫ್ರಿಕಾವನ್ನು 210 ರನ್‌ಗಳಿಗೆ ಆಲ್ ಔಟ್ ಮಾಡುವುದರ ಮೂಲಕ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿತು. ಹೀಗೆ ಎರಡನೇ ದಿನದಾಟದಂದೇ ತನ್ನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 57 ರನ್ ಕಲೆಹಾಕಿದೆ. ಇನ್ನು ಎರಡನೇ ದಿನದಾಟದಂದು ದಕ್ಷಿಣ ಆಫ್ರಿಕಾ ತಂಡದ ಮೊದಲನೇ ಇನಿಂಗ್ಸ್ ಬ್ಯಾಟಿಂಗ್ ವೇಳೆ ನಾಯಕ ವಿರಾಟ್ ಕೊಹ್ಲಿ ತಂಡದ ಆಟಗಾರ ಮಯಾಂಕ್ ಅಗರ್ವಾಲ್ ವಿರುದ್ಧ ಮೈದಾನದಲ್ಲಿಯೇ ಅಸಮಾಧಾನ ಹೊರಹಾಕಿರುವ ಘಟನೆ ನಡೆದಿದೆ. ಮಾಡು ಇಲ್ಲವೇ ಮಡಿ ಪಂದ್ಯವಾದ್ದರಿಂದ ಎರಡೂ ತಂಡಗಳಿಗೂ ಒತ್ತಡ ಹೆಚ್ಚಿದ್ದು ನಾಯಕ ವಿರಾಟ್ ಕೊಹ್ಲಿ ಮಯಾಂಕ್ ಅಗರ್ವಾಲ್ ಸರಿಯಾಗಿ ಕ್ಷೇತ್ರ ರಕ್ಷಣೆ ಮಾಡುವಲ್ಲಿ ವಿಫಲವಾದ ಕಾರಣಕ್ಕೆ ಈ ಕೆಳಕಂಡಂತೆ ಅಸಮಾಧಾನ ಹೊರಹಾಕಿದ್ದಾರೆ.

ಪೀಟರ್ಸನ್ ಬಾರಿಸಿದ ಬೌಂಡರಿ ತಡೆಯುವಲ್ಲಿ ವಿಫಲವಾದ ಮಯಾಂಕ್ ಅಗರ್ವಾಲ್

ಪೀಟರ್ಸನ್ ಬಾರಿಸಿದ ಬೌಂಡರಿ ತಡೆಯುವಲ್ಲಿ ವಿಫಲವಾದ ಮಯಾಂಕ್ ಅಗರ್ವಾಲ್

ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವೇಳೆ ಕೀಗನ್ ಪೀಟರ್ ಸನ್ ಜಸ್ಪ್ರೀತ್ ಬುಮ್ರಾ ಎಸೆತಕ್ಕೆ ಬೌಂಡರಿಯೊಂದನ್ನು ಬಾರಿಸಿದರು. ಆದರೆ ಆ ಬೌಂಡರಿಯನ್ನು ಮಯಾಂಕ್ ಅಗರ್ವಾಲ್ ಬೌಂಡರಿ ಗೆರೆಯ ಬಳಿ ತಡೆಯುವ ಯತ್ನ ಮಾಡಿದರು. ಎಷ್ಟೇ ಕಷ್ಟದ ಪ್ರಯತ್ನವನ್ನೂ ಪಟ್ಟರು ಕೂಡ ಮಯಾಂಕ್ ಅಗರ್ವಾಲ್ ಹಿಡಿತಕ್ಕೆ ಸಿಗದ ಚೆಂಡು ಬೌಂಡರಿ ಗೆರೆಯನ್ನು ಮುಟ್ಟಿತ್ತು. ಇದೇ ವೇಳೆ ಮಯಾಂಕ್ ಅಗರ್ವಾಲ್ ಕ್ಷೇತ್ರರಕ್ಷಣೆಯನ್ನು ನೋಡುತ್ತಾ ಇದ್ದ ತಂಡದ ನಾಯಕ ವಿರಾಟ್ ಕೊಹ್ಲಿ ಮಯಾಂಕ್ ಅಗರ್ವಾಲ್ ಕಂಡು ಎರಡೂ ಕೈಗಳನ್ನು ಮೇಲೆತ್ತಿ ಅಸಮಾಧಾನವನ್ನು ಹೊರಹಾಕಿದರು.

ದಕ್ಷಿಣ ಆಫ್ರಿಕಾ ತಂಡದ ಪರ ಜವಾಬ್ದಾರಿಯುತ ಪ್ರದರ್ಶನ ನೀಡಿದ ಪೀಟರ್ಸನ್

ದಕ್ಷಿಣ ಆಫ್ರಿಕಾ ತಂಡದ ಪರ ಜವಾಬ್ದಾರಿಯುತ ಪ್ರದರ್ಶನ ನೀಡಿದ ಪೀಟರ್ಸನ್

ತೃತೀಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ತನ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ 210 ರನ್‌ಗಳಿಗೆ ಆಲ್ ಔಟ್ ಆಗಿದೆ. ಕೀಗನ್ ಪೀಟರ್ಸನ್ ಹೊರತುಪಡಿಸಿ ದಕ್ಷಿಣ ಆಫ್ರಿಕಾ ತಂಡದ ಬಹುತೇಕ ಎಲ್ಲಾ ಬ್ಯಾಟ್ಸ್‌ಮನ್‌ಗಳೂ ಸಹ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ಪ್ರತ್ಯುತ್ತರ ನೀಡುವಲ್ಲಿ ವಿಫಲವಾದರು. ಅತ್ತ ಏಕಾಂಗಿ ಹೋರಾಟವನ್ನು ನಡೆಸಿದ ಕೀಗನ್ ಪೀಟರ್ಸ್ 72 ರನ್ ಗಳಿಸಿ ಜವಾಬ್ದಾರಿಯುತ ಪ್ರದರ್ಶನವನ್ನು ನೀಡಿದರು.

ಮೋಡಿ ಮಾಡಿದ ಬುಮ್ರಾ

ಮೋಡಿ ಮಾಡಿದ ಬುಮ್ರಾ

ಇನ್ನು ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 233 ರನ್‌ಗಳಿಗೆ ಆಲ್ ಔಟ್ ಆಗಿ ಸಾಮಾನ್ಯ ಪ್ರದರ್ಶನವನ್ನು ನೀಡಿದ್ದ ಟೀಮ್ ಇಂಡಿಯಾಗೆ ಮುನ್ನಡೆಯನ್ನು ತಂದುಕೊಟ್ಟದ್ದು ಭಾರತದ ಬೌಲಿಂಗ್ ವಿಭಾಗ. ಹೌದು, ಮೊದಲನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 210 ರನ್‌ಗಳಿಗೆ ಕಟ್ಟಿ ಹಾಕಿದ ಭಾರತದ ಬೌಲಿಂಗ್ ವಿಭಾಗ ಉತ್ತಮ ಪ್ರದರ್ಶನವನ್ನು ನೀಡಿತು. ಅದರಲ್ಲಿಯೂ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ 42 ರನ್ ನೀಡಿ 5 ವಿಕೆಟ್ ಪಡೆಯುವುದರ ಮೂಲಕ ಭಾರತ ತಂಡಕ್ಕೆ ಆಪತ್ಬಾಂಧವರಾದರು.

For Quick Alerts
ALLOW NOTIFICATIONS
For Daily Alerts
Story first published: Thursday, January 13, 2022, 13:08 [IST]
Other articles published on Jan 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X