ಭಾರತ vs ಶ್ರೀಲಂಕಾ: ಟೀಮ್ ಇಂಡಿಯಾದ ದಿಟ್ಟ ನಿರ್ಧಾರದ ಬಗ್ಗೆ ಇನ್ಜಮಾಮ್ ಉಲ್ ಹಕ್ ಪ್ರಶಂಸೆ

ಕೊಲಂಬೋ, ಜುಲೈ 29: ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಟಿ20 ಸರಣಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಪ್ರತಿಕ್ರಿಯಿತಿಸಿದ್ದಾರೆ. ಟಿ20 ಸರಣಿಯಲ್ಲಿ ಭಾರತ ತೆಗೆದುಕೊಂಡಿರುವ ದೊಡ್ಡ ನಿರ್ಧಾರಕ್ಕೆ ಪಾಕ್ ಮಾಜಿ ನಾಯಕ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಭಾರತತೆಗೆದುಕೊಂಡಿದ್ದು ದಿಟ್ಟ ನಿರ್ಧಾರ ಎಂದು ಇನ್ಜಮಾಮ್ ಉಲ್ ಹಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೊನಾವೈರಸ್‌ನ ಆತಂಕದ ಮದ್ಯೆಯೇ ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ನಡೆಯುತ್ತಿದೆ. ಟೀಮ್ ಇಂಡಿಯಾದ ಆಟಗಾರ ಕೃನಾಲ್ ಪಾಂಡ್ಯ ಕೊರೊನಾವೈರಸ್‌ಗೆ ತುತ್ತಾದ ಬಳಿಕ ಭಾರತದ 8 ಮಂದಿ ಆಟಗಾರರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಭಾರತದ ಪ್ರಮುಖ ಆಟಗಾರರು ಆಡುವ ಬಳಗದಿಂದ ಅನಿವಾರ್ಯವಾಗಿ ಹೊರಗುಳಿದಿದ್ದರೂ ಸರಣಿಯನ್ನು ಮುಂದುವರಿಸಲಾಗಿದೆ.

ಟೋಕಿಯೋ ಒಲಿಂಪಿಕ್ಸ್: ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಭಾರತದ ಅತನು ದಾಸ್‌ಗೆ ಜಯಟೋಕಿಯೋ ಒಲಿಂಪಿಕ್ಸ್: ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಭಾರತದ ಅತನು ದಾಸ್‌ಗೆ ಜಯ

ಭಾರತ ತಂಡದ ಇದೇ ನಿರ್ಧಾರ ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗನ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಾದರೆ ಇನ್ಜಮಾಮ್ ಉಲ್ ಹಕ್ ಹೇಳಿದ್ದೇನು? ಮುಂದೆ ಓದಿ..

ಭಾರತಕ್ಕೆ ಸರಣಿ ರದ್ದುಗೊಳಿಸುವ ಅವಕಾಶವಿತ್ತು

ಭಾರತಕ್ಕೆ ಸರಣಿ ರದ್ದುಗೊಳಿಸುವ ಅವಕಾಶವಿತ್ತು

ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದ ಬಳಿಕ ಕೃನಾಲ್ ಪಾಂಡ್ಯ ಕೊರೊನಾವೈರಸ್‌ಗೆ ತುತ್ತಾಗಿದ್ದರು. ಅವರ ಸಂಪರ್ಕದಲ್ಲಿದ್ದ 8 ಮಂದಿ ಕ್ರಿಕೆಟಿಗರು ಕ್ವಾರಂಟೈನ್‌ಗೆ ಒಳಗಾಗಿದ್ದರು ಉಳಿದ ಎರಡು ಪಂದ್ಯಗಳಿಗೂ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಸರಣಿಯಿಂದ ಹಿಂದಕ್ಕೆ ಸರಿಯುವ ಅವಕಾಶವೂ ಇತ್ತು ಆದರೆ ಭಾರತ ಈ ಸಂದರ್ಭದಲ್ಲಿ ನಿಜಕ್ಕೂ ದಿಟ್ಟವಾದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದಿದ್ದಾರೆ ಇನ್ಜಮಾಮ್ ಉಲ್ ಹಕ್.

ಸೋಲಿಗೆ ಹೆದರಲ್ಲ ಎಂದು ಸಾಬೀತುಪಡಿಸಿದೆ

ಸೋಲಿಗೆ ಹೆದರಲ್ಲ ಎಂದು ಸಾಬೀತುಪಡಿಸಿದೆ

"ಭಾರತ ಸರಣಿಯಲ್ಲಿ ಮುಂದಿವರಿಯುವ ನಿರ್ಧಾರವನ್ನು ತೆಗೆದುಕೊಂಡಿರುವುದು ತಂಡ ಸೋಲಿಗೆ ಭಯಪಡುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಯಾವಾಗ ನೀವು ಸೋಲಿನ ಭಯವನ್ನು ಹೊಂದಿರುವುದಿಲ್ಲವೋ ಆಗ ಗೆಲುವು ನಿಮ್ಮ ದಾರಿಯನ್ನು ಹುಡುಕಿ ಬರುತ್ತದೆ. ಅವರು ಆಡಲು ಲಭ್ಯವಿರುವ ತಂಡದ ಸದಸ್ಯರ ಮೇಲೆ ನಂಬಿಕೆಯನ್ನಿಟ್ಟರು. ಕೇವಕ ಐವರು ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದ ಕಾರಣ ಭುವನೇಶ್ವರ್ ಕುಮಾರ್ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದರು" ಎಂದು ಇನ್ಜಮಾಮ್ ಉಲ್ ಹಕ್ ಟೀಮ್ ಇಂಡಿಯಾವನ್ನು ಹಾಡಿಹೊಗಳಿದ್ದಾರೆ.

ಬಲಿಷ್ಠ ಕ್ರಿಕೆಟ್ ಆಡುತ್ತಿದೆ ಭಾರತ

ಬಲಿಷ್ಠ ಕ್ರಿಕೆಟ್ ಆಡುತ್ತಿದೆ ಭಾರತ

ಇತ್ತೀಚಿನ ದಿನಗಳಲ್ಲಿ ಭಾರತ ಅತ್ಯಂತ ಬಲಿಷ್ಠ ಪ್ರದರ್ಶನವನ್ನು ನೀಡುತ್ತಿದೆ. ಯಾಕೆಂದರೆ ಮಾನಸಿಕವಾಗಿ ಅವರು ಕಠಿಣ ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ. ಎರಡನೇ ಟಿ20 ಪಂದ್ಯದಲ್ಲಿ ಭಾರತ ಸೋಲು ಕಂಡಿರಬಹುದು, ಆದರೆ ಭಾರತ ಅತ್ಯಂತ ಪ್ರತಿರೋಧವನ್ನು ಒಡ್ಡಿ ಸೋಲು ಕಂಡಿದೆ. ಅವರಿಂದ ಕೇವಲ 132 ರನ್‌ಗಳನ್ನು ಮಾತ್ರವೇ ಗಳಿಸಲು ಸಾಧ್ಯವಾಯಿತಾದರೂ ಶ್ರೀಲಂಕಾ ತಂಡ ಕೇವಲ ಎರಡು ಎಸೆತಗಳು ಉಳಿದಿರುವಂತೆ ಗೆದ್ದುಕೊಂಡಿದೆ. ಪಂದ್ಯದಲ್ಲಿ ಟೀಮ್ ಇಂಡಿಯಾ ಹೊಂದಿದ್ದ ಹಿಡಿತವೆಂದರೆ ಇದು" ಎಂದು ಟೀಮ್ ಇಂಡಿಯಾದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

BJP ಪಕ್ಷ ಯಾರಿಗು ಉಪಯೋಗ ಆಗ್ಲಿಲ್ಲಾ!! | Oneindia Kannada
ದ್ರಾವಿಡ್ ಬಗ್ಗೆ ಹೊಗಳಿದ ಇನ್ಜಿ

ದ್ರಾವಿಡ್ ಬಗ್ಗೆ ಹೊಗಳಿದ ಇನ್ಜಿ

ಇನ್ನು ಇದೇ ಸಂದರ್ಭದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಬಗ್ಗೆಯೂ ರಾಹುಲ್ ದ್ರಾವಿಡ್ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ರಾಹುಲ್ ದ್ರಾವಿಡ್ ಭಾರತೀಯ ಆಟಗಾರರಲ್ಲಿ ಸಕಾರಾತ್ಮಕ ಅಂಶವನ್ನು ತುಂಬಿದ್ದಲ್ಲದೆ ಹೋರಾಟದಿಂದ ಹಿಂದಕ್ಕೆ ಸರಿಯದಂತಾ ಉತ್ತೇಜನವನ್ನು ನೀಡಿದ್ದಾರೆ ಎಂದಿದ್ದಾರೆ. "ಭಾರತೀಯ ತಂಡದ ಮಾನಸಿಕ ಸಾಮರ್ಥ್ಯಕ್ಕೆ ನಾನು ರಾಹುಲ್ ದ್ರಾವಿಡ್‌ಗೆ ಶ್ರೇಯಸ್ಸು ನಿಡುತ್ತೇನೆ. ಆಟಗಾರರ ತಾಂತ್ರಿಕತೆಯನ್ನು ಉತ್ತಮಪಡಿಸುವುದು ಒಂದು ಸಂಗತಿಯಾದರೆ ಮನಸಿಕವಾಗು ಆಟಗಾರರನನ್ನು ಕಠಿಣಗೊಳಿಸುವುದು ಮತ್ತೊಂದು ಸಂಗತಿ. ಆಟಗಾರರ ಲಭ್ಯತೆಯ ಹೊರತಾಗಿಯೂ ಭಾರತ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ದಿಟ್ಟವಾದ ನಿರ್ಧಾರವನ್ನು ತೆಗೆದುಕೊಂಡಿದೆ" ಎಮದು ಇನ್ಜಮಾಮ್ ಉಲ್ ಹಕ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, July 29, 2021, 18:00 [IST]
Other articles published on Jul 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X