ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೊಚ್ಚಲ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ ಇಶಾನ್, ಲಂಕಾ ವಿರುದ್ಧ ಧವನ್ 1000 ರನ್

India vs Sri lanka: Ishan Kishan and Shikhar Dhawan special achievement

ಕೊಲಂಬೋ, ಜುಲೈ 18: ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಬ್ಯಾಟ್ಸ್‌ಮನ್‌ಗಳು ಭರ್ಜರಿ ಆಟವನ್ನು ಪ್ರದರ್ಶಿಸಿದ್ದಾರೆ. ಅದರಲ್ಲೂ ಯುವ ಆಟಗಾರರಾದ ಪೃಥ್ವಿ ಶಾ ಹಾಗೂ ಇಶಾನ್ ಕಿಶನ್ ಶ್ರೀಲಂಕಾ ತಂಡದ ಬೌಲರ್‌ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದರು. ಸ್ಪೋಟಕ ಆಟವನ್ನು ಪ್ರದರ್ಶಿಸಿದ ಈ ಆಟಗಾರರು ರನ್‌ ಮಳೆಯನ್ನೇ ಹರಿಸಿದರು. ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ ಇಶಾನ್ ಕಿಶನ್ ಮೊದಲ ಪಂದ್ಯದಲ್ಲಿಯೇ ಅರ್ಧ ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ.

ಇಶಾನ್ ಕಿಶನ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 42 ಎಸೆತಗಳನ್ನು ಎದುರಿಸಿ 59 ರನ್‌ ಬಾರಿಸಿದರು. ಇದರಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸೇರಿತ್ತು. ಈ ಅರ್ಧ ಶತಕದ ಮೂಲಕ ಇಶಾನ್ ಕಿಶನ್ ವಿಶೇಷ ದಾಖಲೆಯೊಂದನ್ನು ಬರೆದರು. ಚೊಚ್ಚಲ ಪಂದ್ಯದಲ್ಲಿ ಟಿ20 ಹಾಗೂ ಏಕದಿನ ಮಾದರಿಯಲ್ಲಿ ಅರ್ಧ ಶತಕ ಸಿಡಿಸಿದ ಎರಡನೇ ಭಾರತೀಯ ಆಟಗಾರ ಎನಿಸಿದ್ದಾರೆ ಇಶಾನ್ ಕಿಶನ್. ಇದಕ್ಕೂ ಮುನ್ನ ಈ ಸಾಧನೆಯನ್ನು ಕನ್ನಡಿಗ ರಾಬಿನ್ ಉತ್ತಪ್ಪ ಮಾಡಿದ್ದರು.

ಬರ್ತ್‌ ಡೇ ಗರ್ಲ್ ಸ್ಮೃತಿ ಮಂಧಾನರ 3 ಅಪರೂಪದ ದಾಖಲೆಗಳಿವು!ಬರ್ತ್‌ ಡೇ ಗರ್ಲ್ ಸ್ಮೃತಿ ಮಂಧಾನರ 3 ಅಪರೂಪದ ದಾಖಲೆಗಳಿವು!

ಶ್ರೀಲಂಕಾ ವಿರುದ್ಧ 1000 ರನ್‌ ಸರದಾರ

ಶ್ರೀಲಂಕಾ ವಿರುದ್ಧ 1000 ರನ್‌ ಸರದಾರ

ಮತ್ತೊಂದೆಡೆ ಭಾರತೀಯ ತಂಡದ ನಾಯಕ ಶಿಖರ್ ಧವನ್ ಶ್ರೀಲಂಕಾ ತಂಡದ ವಿರುದ್ಧ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಧವನ್ ಶ್ರೀಲಂಕಾ ತಂಡದ ವಿರುದ್ಧ 1000 ರನ್‌ಗಳನ್ನು ಬಾರಿಸಿದ ಸಾಧನೆ ಮಾಡಿದರು.

13ನೇ ಭಾರತೀಯನಾಗಿ ಧವನ್ ಸಾಧನೆ

13ನೇ ಭಾರತೀಯನಾಗಿ ಧವನ್ ಸಾಧನೆ

ಈ ಮೈಲಿಗಲ್ಲು ತಲುಪಲು ಶಿಖರ್ ಧವನ್‌ಗೆ 17 ರನ್‌ಗಳ ಅವಶ್ಯಕತೆಯಿತ್ತು. ಪಂದ್ಯದ 14ನೇ ಓವರ್‌ನಲ್ಲಿ ಧವನ್ ಈ ಸಾಧನೆಯನ್ನು ಪೂರೈಸಿದರು. ಶ್ರೀಲಂಕಾ ಕ್ರಿಕೆಟ್ ತಂಡದ ವಿರುದ್ಧ 1,000 ರನ್‌ ಬಾರಿಸಿದ 13ನೇ ಭಾರತೀಯ ಆಟಗಾರ ಎನಿಸಿದ್ದಾರೆ ಧವನ್.

ಸಚಿನ್‌ಗೆ ಮೊದಲ ಸ್ಥಾನ

ಸಚಿನ್‌ಗೆ ಮೊದಲ ಸ್ಥಾನ

ಒಟ್ಟಾರೆಯಾಗಿ ಧವನ್ ಶ್ರೀಲಂಕಾ ವಿರುದ್ಧ ಈ ಸಾಧನೆ ಮಾಡಿದ 33ನೇ ಕ್ರಿಕೆಟಿಗ ಎನಿಸಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದು ಶ್ರೀಲಂಕಾ ವಿರುದ್ಧ 84 ಏಕದಿನ ಪಂದ್ಯಗಳನ್ನು ಆಡಿದ್ದು 3113 ರನ್‌ ಬಾರಿಸಿದ್ದಾರೆ. ಬಳಿಕ ಧೋನಿ(2383), ಇನ್ಜಮಾಮ್ ಉಲ್ ಹಕ್(2265), ವಿರಾಟ್ ಕೊಹ್ಲಿ(2220), ಸಯೀದ್ ಅನ್ವರ್(2198) ಇದ್ದಾರೆ. ಎಲ್ಲಾ ಆಟಗಾರರನ್ನು ಹೋಲಿಸಿದರೆ ಶಿಖರ್ ಧವನ್ ಸರಾಸರಿ ಹೆಚ್ಚಾಗಿರುವುದು ಮತ್ತೊಂದು ವಿಶೇಷತೆಯಾಗಿದೆ. 70ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ಶ್ರೀಲಂಕಾ ವಿರುದ್ಧ 1000ಕ್ಕೂ ಅಧಿಕ ರನ್‌ ಬಾರಿಸಿದ ಏಕೈಕ ಕ್ರಿಕೆಟಿಗನಾಗಿದ್ದಾರೆ ಶಿಖರ್ ಧವನ್.

ಪೃಥ್ವಿ ಶಾ ಹಾಗು ಇಶಾನ್ ಕಿಶನ್ ಆಟ ನೋಡಿ ಧವನ್ ಹೇಳಿದ್ದೇನು | Oneindia Kannada
ಭಾರತ ಶ್ರೀಲಂಕಾ ಪ್ಲೇಯಿಂಗ್ XI

ಭಾರತ ಶ್ರೀಲಂಕಾ ಪ್ಲೇಯಿಂಗ್ XI

ಟೀಮ್ ಇಂಡಿಯಾ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್
ಶ್ರೀಲಂಕಾ: ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿಕೆಟ್ ಕೀಪರ್), ಭನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕಾ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ಇಸುರು ಉದಾನ, ದುಷ್ಮಂತ ಚಮೀರ, ಲಕ್ಷನ್ ಸಂದಕ

Story first published: Sunday, July 18, 2021, 21:40 [IST]
Other articles published on Jul 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X