Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಶ್ರೀಲಂಕಾ ಏಕದಿನ ಸರಣಿ ಆರಂಭದ ದಿನಾಂಕ ಅಧಿಕೃತ ಘೋಷಣೆ

India vs Sri Lanka ODI series to start on July 18, says BCCI secretary Jay Shah

ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಆರು ಪಂದ್ಯಗಳ ಸರಣಿ ಜುಲೈ 18ರಿಂದ ಆರಂಭಗೊಳ್ಳಲಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಶನಿವಾರ (ಜುಲೈ 10) ಘೋಷಿಸಿದ್ದಾರೆ. ಕೋವಿಡ್-19 ಸೋಂಕು ಹಬ್ಬುತ್ತಿರುವುದರಿಂದ ಏಕದಿನ ಸರಣಿಯ ಆರಂಭದ ದಿನಾಂಕ ಬದಲಾಗಿರುವುದಾಗಿ ಶಾ ಹೇಳಿದ್ದಾರೆ.

ಅಸಲಿಗೆ ಏಕದಿನ ಸರಣಿ ಜುಲೈ 13ಕ್ಕೆ ಆರಂಭಗೊಳ್ಳಬೇಕಿತ್ತು. ಆದರೆ ಶ್ರೀಲಂಕಾ ತಂಡದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಏಕದಿನ ಸರಣಿಯ ಆರಂಭದ ದಿನಾಂಕ ಬದಲಾಗಿದೆ. ಅದರ ಜೊತೆಗೆ ಟಿ20ಐ ಆರಂಭದ ದಿನಾಂಕವೂ ಬದಲಾಗಿದೆ.

"ಶ್ರೀಲಂಕಾ ತಂಡದಲ್ಲಿ ಕೊರೊನಾವೈರಸ್ ಸೋಂಕಿನ ಕಾರಣ ಶ್ರೀಲಂಕಾ-ಭಾರತ ಏಕದಿನ ಸರಣಿ ಜುಲೈ 18ರಿಂದ ಆರಂಭಗೊಳ್ಳಲಿದೆ," ಎಂದು ಜಯ್ ಶಾ ಪಿಟಿಐ ಜೊತೆ ಹೇಳಿಕೊಂಡಿದ್ದಾರೆ. ಲಂಕಾ ಬ್ಯಾಟಿಂಗ್‌ ಕೋಚ್ ಗ್ರ್ಯಾಂಟ್ ಫ್ಲವರ್ ಮತ್ತು ದತ್ತಾಂಶ ವಿಶ್ಲೇಷಕ ಜಿಟಿ ನಿರೋಶನ್‌ಗೆ ಕೋವಿಡ್ ಸೋಂಕು ತಗುಲಿದ್ದರಿಂದ ಏಕದಿನ ಸರಣಿಯ ವೇಳಾಪಟ್ಟಿ ಬದಲಾಗಿದೆ.

ಹೊಸ ವೇಳಾಪಟ್ಟಿ
* ಮೊದಲ ಏಕದಿನ: ಜುಲೈ 18, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (2:30 PM IST)
* ಎರಡನೇ ಏಕದಿನ: ಜುಲೈ 20, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (2:30 PM IST)
* ಮೂರನೇ ಏಕದಿನ: ಜುಲೈ 23, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (2:30 PM IST)
* ಮೊದಲ ಟಿ20ಐ: ಜುಲೈ 25, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (7 PM IST)
* ಎರಡನೇ ಟಿ20ಐ: ಜುಲೈ 27, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (7 PM IST)
* ಮೂರನೇ ಟಿ20ಐ: ಜುಲೈ 29, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (7 PM IST)

Story first published: Saturday, July 10, 2021, 20:38 [IST]
Other articles published on Jul 10, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+