ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್‌ ಇಂಡೀಸ್ ಟಿ20: ರೋಚಕ ಕಾದಾಟದಲ್ಲಿ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ

India vs West Indies, 1st T20I: india won the match

ಭಾರತ ಮತ್ತು ವೆಸ್ಟ್‌ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯವನ್ನು ಭಾರತ ಗೆದ್ದು ಕೊಂಡಿದೆ. ರೋಚಕವಾಗಿ ನಡೆದ ಕಾದಾಟ ಎರಡೂ ತಂಡಗಳ ಮಧ್ಯೆ ಸಾಕಷ್ಟು ಪೈಪೋಟಿಗೆ ಕಾರಣವಾಗಿತ್ತು. ವೆಸ್ಟ್‌ ಇಂಡೀಸ್‌ ನೀಡಿದ ಕಠಿಣ ಸವಾಲನ್ನು ಬೆನ್ನತ್ತಿದ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು ಗುರಿತಪುಪಿದೆ. ಈ ಮೂಲಕ ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿದೆ.

ಟೀಮ್ ಇಂಡಿಯಾ ಪರವಾಗಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ತಲಾ ಅರ್ಧಶತಕವನ್ನು ಸಿಡಿಸಿ ಗೆಲುವಿಗೆ ಕಾರಣರಾದರು. ರಾಹುಲ್ 40 ಎಸೆತಗಳಲ್ಲಿ 62 ರನ್ ಬಾರಿಸಿದರೆ ಕೊಹ್ಲಿ ಅಜೇಯ 94 ರನ್ ಬಾರಿಸಿ ಗೆಲುವಿಗೆ ಕಾರಣರಾದರು. ಇದಕ್ಕಾಗಿ ಕೊಹ್ಲಿ ಕೇವಲ 50 ಎಸೆತಗಳನ್ನಷ್ಟೇ ತೆಗೆದುಕೊಂಡರು. ರಾಹುಲ್ ಹಾಗೂ ಕೊಹ್ಲಿ ವಿಂಡಿಸ್ ಬೌಲರ್‌ಗಳನ್ನು ಅಕ್ಷರಶಃ ಅಟ್ಟಾಡಿಸಿ ಹೊಡೆದರು.

ವಿಂಡಿಸ್ ಬೌಲರ್‌ಗಳು ಕೊಹ್ಲಿ ವಿಕೆಟ್ ಪಡೆಯಲು ಯತ್ನಿಸಿದ ಎಲ್ಲಾ ಪ್ರಯತ್ನಗಳು ವಿಫಲವಾದವು. ಈ ಮೂಲಕ ವಿರಾಟ್ ತಾನು ಯಾಕೆ ಶ್ರೇಷ್ಟ ಬ್ಯಾಟ್ಸ್‌ಮನ್‌ ಅನ್ನೋದನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದರು.ಈ ಮೂಲಕ ಟೀಮ್ ಇಂಡಿಯಾ ಇನ್ನೂ 8 ಎಸೆತಗಳು ಇರುವಂತೆಯೇ ವಿಂಡಿಸ್ ನೀಡಿದ್ದ ಬೃಹತ್ ಮೊತ್ತವನ್ನು ಮೀರಿ ಗೆಲುವಿನ ಸಂಭ್ರಮ ಆಚರಿಸಿತು.

ಭಾರತ vs ವೆಸ್ಟ್‌ ಇಂಡೀಸ್ ಟಿ20: ಭಾರತಕ್ಕೆ ಕಠಿಣ ಸವಾಲು ನೀಡಿದ ವಿಂಡಿಸ್ಭಾರತ vs ವೆಸ್ಟ್‌ ಇಂಡೀಸ್ ಟಿ20: ಭಾರತಕ್ಕೆ ಕಠಿಣ ಸವಾಲು ನೀಡಿದ ವಿಂಡಿಸ್

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ವೆಸ್ಟ್‌ ಇಂಡೀಸ್ ಭರ್ಜರಿಯಾಗಿ ರನ್ ಕಲೆ ಹಾಕಿತು. ಮೊದಲ ವಿಕೆಟನ್ನು ಬೇಗನೆ ಕಳೆದುಕೊಂಡರೂ ಬಳಿಕ ಬಂದ ಬ್ರಾಂಡನ್ ಕಿಂಗ್ ಜೊತೆ ಸೇರಿಕೊಂಡ ಇವಿನ್ ಲೀವಿಸ್ ಬೌಂಡರಿ ಸಿಕ್ಸರ್ ಸುರಿಮಳೆಗರೆಯಲು ಆರಂಭಿಸಿದರು. ಬ್ರಾಂಡನ್ ಕಿಂಗ್ ಕೇವಲ 17 ಎಸೆತ ಎದುರಿಸಿ 40 ರನ್ ಬಾರಿಸಿ ಔಟಾದರೆ, ಕಿಂಗ್ 31 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ಬಳಿಕ ಶಿಮ್ರಾನ್ ಹೇಟ್ಮೇರ್ ಮತ್ತು ನಾತಕ ಕಿರಾನ್ ಪೋಲಾರ್ಡ್ ಬಾರತದ ಬೌಲಿಂಗ್ ಪಡೆಯ ಬೆವರಿಳಿಸಿದರು. ಹೆಟ್ಮೆರ್ 56ರನ್‌ಗಳಿಸಿದರೆ ಪೊಲಾರ್ಡ್ 37 ಗಳಿಸಿ ಔಟಾದರು. ಅಂತಿಮವಾಗಿ ವೆಸ್ಟ್‌ ಇಂಡೀಸ್ 20 ಓವರ್‌ಗಳಲ್ಲಿ5 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತ್ತು.
ಭಾರತದ ಪರವಾಗಿ ಯಜುವೇಂದ್ರ ಚಹಲ್ 2 ವಿಕೆಟ್ ಕಿತ್ತು ಮಿಂಚಿದರು. ಉಳಿದಂತೆ ವಾಶಿಂಗ್ಟನ್ ಸುಂದರ್, ದೀಪಕ್ ಚಾಹರ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.

Story first published: Friday, December 6, 2019, 22:57 [IST]
Other articles published on Dec 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X