ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: ತಂಡಕ್ಕೆ ಒಳ್ಳೆ ಆಟಗಾರರು ಬೇಕು ಎಂದಿದ್ದ ರಾಹುಲ್‌ಗೆ ರೋಹಿತ್ ಶರ್ಮಾ ಪ್ರತ್ಯುತ್ತರ?

India vs West Indies ODI: Rohit Sharma ready for his first press conference ahead of First ODI

ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಂತರ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿದರು. ಹೀಗೆ ವಿರಾಟ್ ಕೊಹ್ಲಿ ನಂತರ ರೋಹಿತ್ ಶರ್ಮಾ ಭಾರತ ಟಿ ಟ್ವೆಂಟಿ ತಂಡದ ನೂತನ ನಾಯಕರಾಗಿ ಆಯ್ಕೆಗೊಂಡರು. ಹಾಗೂ ತಾವು ಭಾರತ ಟಿ ಟ್ವೆಂಟಿ ತಂಡದ ಪೂರ್ಣಾವಧಿ ನಾಯಕನಾಗಿ ಕಣಕ್ಕಿಳಿದ ಮೊದಲ ಸರಣಿಯಲ್ಲಿಯೇ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 3 - 0 ಅಂತರದಲ್ಲಿ ಟಿ ಟ್ವೆಂಟಿ ಸರಣಿಯಲ್ಲಿ ವೈಟ್ ವಾಷ್ ಸಾಧನೆ ಮಾಡಿತು. ಹೀಗೆ ಟಿ ಟ್ವೆಂಟಿ ನಾಯಕನಾಗಿ ಶುಭಾರಂಭವನ್ನು ಮಾಡಿದ ರೋಹಿತ್ ಶರ್ಮಾ ನಂತರದ ದಿನಗಳಲ್ಲಿ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿಯೂ ಕೂಡ ಆಯ್ಕೆಗೊಂಡರು. ಹೌದು, ವೈಟ್ ಬಾಲ್ ತಂಡಗಳಿಗೆ ಒಬ್ಬನೇ ನಾಯಕನಿರಬೇಕು ಎಂಬ ನಿರ್ಧಾರದಿಂದ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿದ ಬಿಸಿಸಿಐ ರೋಹಿತ್ ಶರ್ಮಾ ಹೆಗಲಿಗೆ ಜವಬ್ದಾರಿಯನ್ನು ಹಾಕಿತು.

ಭಾರತ vs ವಿಂಡೀಸ್: ಚೊಚ್ಚಲ ಏಕದಿನ ಪಂದ್ಯಕ್ಕಾಗಿ ಬೆವರಿಳಿಸಿದ ವಿರಾಟ್ ಕೊಹ್ಲಿಭಾರತ vs ವಿಂಡೀಸ್: ಚೊಚ್ಚಲ ಏಕದಿನ ಪಂದ್ಯಕ್ಕಾಗಿ ಬೆವರಿಳಿಸಿದ ವಿರಾಟ್ ಕೊಹ್ಲಿ

ಹೀಗೆ ಎಲ್ಲಾ ಯೋಜನೆಯ ಪ್ರಕಾರವೇ ನಡೆದಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿಯೇ ರೋಹಿತ್ ಶರ್ಮಾ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಅಧಿಕಾರವನ್ನು ಸ್ವೀಕರಿಸಬೇಕಿತ್ತು. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಗಾಯದ ಸಮಸ್ಯೆಗೆ ಒಳಗಾದ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದರು ಹಾಗೂ ಕೆಎಲ್ ರಾಹುಲ್ ಆ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಆದರೆ ಇದೀಗ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನೆಡೆಸಲು ಫಿಟ್ ಆಗಿದ್ದು, ಈಗಾಗಲೇ ತಂಡದ ಉಳಿದ ಆಟಗಾರರ ಜೊತೆ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕಾಗಿ ಕಣಕ್ಕಿಳಿದಿದ್ದಾರೆ.

ಈ ಆಟಗಾರರಿಗೆ ಅವಕಾಶ ಕೊಡಿ, ಇವರಿಗೆ ಕೊಡಬೇಡಿ ಎಂದಿದ್ರಾ ಗಂಗೂಲಿ? ಕೊನೆಗೂ ತುಟಿಬಿಚ್ಚಿದ ದಾದಾಈ ಆಟಗಾರರಿಗೆ ಅವಕಾಶ ಕೊಡಿ, ಇವರಿಗೆ ಕೊಡಬೇಡಿ ಎಂದಿದ್ರಾ ಗಂಗೂಲಿ? ಕೊನೆಗೂ ತುಟಿಬಿಚ್ಚಿದ ದಾದಾ

ಇನ್ನು ರೋಹಿತ್ ಶರ್ಮಾ ಭಾನುವಾರ ಆರಂಭವಾಗಲಿರುವ ಪಂದ್ಯದ ಕುರಿತು ಶನಿವಾರ ( ಫೆಬ್ರವರಿ 5 ) ಮಧ್ಯಾಹ್ನ 1.30ಕ್ಕೆ ಸುದ್ದಿಗೋಷ್ಠಿಯೊಂದರಲ್ಲಿ ಪಾಲ್ಗೊಳ್ಳಲಿದ್ದು ಮಾಧ್ಯಮ ಮಿತ್ರರು ಕೇಳಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲಿರುವ ರೋಹಿತ್ ಶರ್ಮಾಗೆ ಈ ಕೆಳಕಂಡ ದೊಡ್ಡ ಪ್ರಶ್ನೆಗಳು ಎದುರಾಗುವ ಸಾಧ್ಯತೆಗಳಿವೆ.

ಮುಂಬರುವ ವಿಶ್ವಕಪ್ ಟೂರ್ನಿಗಳ ಕುರಿತ ಪ್ರಶ್ನೆಗಳು

ಮುಂಬರುವ ವಿಶ್ವಕಪ್ ಟೂರ್ನಿಗಳ ಕುರಿತ ಪ್ರಶ್ನೆಗಳು

ಸದ್ಯ ರೋಹಿತ್ ಶರ್ಮಾ ಭಾರತ ಸೀಮಿತ ಓವರ್ ತಂಡಗಳ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾಗಿದ್ದು ಇದೇ ವರ್ಷ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಕುರಿತು ಹಾಗೂ 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿ ಕುರಿತ ಪ್ರಶ್ನೆಗಳನ್ನು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಎದುರಿಸುವ ಸಾಧ್ಯತೆಗಳಿವೆ. ಈ 2 ಮಹತ್ವದ ಟೂರ್ನಿಗಳಿಗಾಗಿ ನೀವು ಯಾವ ರೀತಿ ಸಿದ್ಧವಾಗಿದ್ದೀರ ಮತ್ತು ಯಾವ ರೀತಿಯ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂಬುದರ ಕುರಿತ ಪ್ರಶ್ನೆಗಳು ಶರ್ಮಾಗೆ ಎದುರಾಗಬಹುದು.

ವೈಟ್ ಬಾಲ್ ತಂಡ ಬದಲಾಗಬೇಕಿದೆ ಎಂದಿದ್ದ ಕೆಎಲ್ ರಾಹುಲ್

ವೈಟ್ ಬಾಲ್ ತಂಡ ಬದಲಾಗಬೇಕಿದೆ ಎಂದಿದ್ದ ಕೆಎಲ್ ರಾಹುಲ್

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ಕೆಎಲ್ ರಾಹುಲ್ ಕಳೆದ 4 ವರ್ಷಗಳಿಂದ ಟೀಮ್ ಇಂಡಿಯಾ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದೆ ಆದರೆ ಮುಂಬರುವ ವಿಶ್ವಕಪ್ ಟೂರ್ನಿಗಳ ಉದ್ದೇಶದಿಂದ ಸದ್ಯ ಭಾರತ ಸೀಮಿತ ಓವರ್ ತಂಡಗಳಲ್ಲಿ ಕೆಲ ಕೂಲಂಕುಷ ಪರೀಕ್ಷೆಗಳು ಹಾಗೂ ಬದಲಾವಣೆಗಳು ಆಗಬೇಕಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಹೀಗೆ ತಂಡದಲ್ಲಿ ಕೆಲ ಬದಲಾವಣೆಗಳು ಆಗಬೇಕು ಎಂದಿದ್ದ ಕೆಎಲ್ ರಾಹುಲ್ ಅಭಿಪ್ರಾಯದ ಕುರಿತು ಪತ್ರಕರ್ತರು ರೋಹಿತ್ ಶರ್ಮಾಗೆ ಪ್ರಶ್ನೆಗಳನ್ನು ಹಾಕಲಿದ್ದು, ಈ ಪ್ರಶ್ನೆಗಳಿಗೆ ರೋಹಿತ್ ಶರ್ಮಾ ಯಾವ ರೀತಿಯ ಉತ್ತರಗಳನ್ನು ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ನಿಮ್ಮ ನಾಯಕತ್ವದಲ್ಲಿ ಆಡಲಿರುವ ಕೊಹ್ಲಿ ಜತೆ ಚರ್ಚೆ ನಡೆಸಿದ್ದೀರಾ?

ನಿಮ್ಮ ನಾಯಕತ್ವದಲ್ಲಿ ಆಡಲಿರುವ ಕೊಹ್ಲಿ ಜತೆ ಚರ್ಚೆ ನಡೆಸಿದ್ದೀರಾ?

ಇನ್ನು ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿಯಲಿದ್ದು, ಇದಕ್ಕೂ ಮುನ್ನ ಇಬ್ಬರ ನಡುವೆ ಯಾವುದಾದರೂ ಚರ್ಚೆಗಳು ನಡೆದಿವೆಯಾ ಹಾಗೂ ಪಂದ್ಯಕ್ಕಾಗಿ ಇಬ್ಬರು ಯೋಜನೆಗಳನ್ನು ಹಾಕಿಕೊಂಡಿದ್ದೀರಾ ಎಂಬ ಪ್ರಶ್ನೆಗಳನ್ನು ಪತ್ರಕರ್ತರು ರೋಹಿತ್ ಶರ್ಮಾಗೆ ಎಸೆಯಲಿದ್ದಾರೆ. ಈ ಪ್ರಶ್ನೆಗಳಿಗೆ ರೋಹಿತ್ ಶರ್ಮಾ ಯಾವ ರೀತಿಯ ಉತ್ತರಗಳನ್ನು ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Story first published: Saturday, February 5, 2022, 15:35 [IST]
Other articles published on Feb 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X