ಭಾರತ vs ವೆಸ್ಟ್ ಇಂಡೀಸ್: 4ನೇ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಭಾರತದ ಸಂಭಾವ್ಯ ಆಡುವ ಬಳಗ

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ನಾಲ್ಕನೇ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಯುನೈಟೆಡ್ ಸ್ಟೇಟ್ಸ್‌ನ ಫ್ಲೋರಿಡಾದಲ್ಲಿ ಅಂತಿಮ ಎರಡು ಪಂದ್ಯಗಳು ನಡೆಯಲಿದ್ದು ಸರಣಿಯ ನಾಲ್ಕನೇ ಪಂದ್ಯ ಶನಿವಾರ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದು ಸರಣಿಯನ್ನು ವಶಕ್ಕೆ ಪಡೆದುಕೊಳ್ಳುವ ಉತ್ಸಾಹದಲ್ಲಿ ಭಾರತ ತಂಡವಿದ್ದರೆ ವೆಸ್ಟ್ ಇಂಡೀಸ್ ತಂಡ ಸರಣಿಯಲ್ಲಿ ಸಮಬಲ ಸಾಧಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಿದೆ.

ಸರಣಿಯ ಮೂರು ಪಂದ್ಯದಲ್ಲಿಯೂ ಭಾರತ ತಮಡ ಅದ್ಭುತ ಪ್ರದರ್ಶನ ನೀಡಿದ್ದು ಎರಡನೇ ಪಂದ್ಯದಲ್ಲಿ ಮಾತ್ರವೇ ಅಂತಿಮ ಹಂತದಲ್ಲಿ ಎಡವಿದ ಪರಿಣಾಮವಾಗಿ ಸೋಲು ಅನುಭವಿಸಿದೆ. ನಾಲ್ಕನೇ ಪಂದ್ಯಕ್ಕೆ ಭಾರತ ತಂಡ ಸಂಪೂರ್ಣವಾಗಿ ಸಜ್ಜಾಗಿದ್ದು ಆಡುವ ಬಳಗದಲ್ಲಿ ಯಾವೆಲ್ಲಾ ಆಟಗಾರರು ಸ್ಥಾನ ಪಡೆಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

CWG 2022: ಕ್ರಿಕೆಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ; ಪಂದ್ಯ ಯಾರ ವಿರುದ್ಧ, ಯಾವಾಗ?CWG 2022: ಕ್ರಿಕೆಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ; ಪಂದ್ಯ ಯಾರ ವಿರುದ್ಧ, ಯಾವಾಗ?

ಭಾರತ ತಂಡಕ್ಕೆ ಶುಭ ಸುದ್ದಿ

ಭಾರತ ತಂಡಕ್ಕೆ ಶುಭ ಸುದ್ದಿ

ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್‌ನ ವೇಳೆ ಬೆನ್ನುನೋವಿಗೆ ತುತ್ತಾಗಿ ಬ್ಯಾಟಿಂಗ್ ಮುಂದುವರಿಸದೆ ಹೊರಹೋಗಿದ್ದರು ನಾಯಕ ರೋಹಿತ್ ಶರ್ಮಾ. ಹೀಗಾಗಿ ರೋಹಿತ್ ಶರ್ಮಾ ಫಿಟ್‌ನೆಸ್ ಬಗ್ಗೆ ಭಾರತೀಯ ಅಭಿಮಾನಿಗಳು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಆದರೆ ಇದೀಗ ಸಂತಸದ ಸುದ್ದಿ ಹೊರಬಿದ್ದಿದ್ದು ರೋಹಿತ್ ಶರ್ಮಾ ಸಂಪೂರ್ಣ ಫಿಟ್‌ಆಗಿದ್ದಾರೆ. ಹೀಗಾಘಿ ನಾಲ್ಕನೇ ಪಂದ್ಯದಲ್ಲಿ ರೋಹಿತ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಎರಡು ಪಂದ್ಯ ಮಾತ್ರವೇ ಬಾಕಿಯಿರುವ ಕಾರಣ ಕುಲ್‌ದೀಪ್‌ ಯಾದವ್‌ಗೆ ಅವಕಾಶ ದೊರೆಯುವ ಸಾಧ್ಯತೆಯಿದೆ. ಆದರೆ ಹರ್ಷಲ್ ಪಟೇಲ್ ಚೇತರಿಕೆ ಕಾಣದಿರುವ ಕಾರಣ ಕಣಕ್ಕಿಳಿಯುವುದು ಅನುಮಾನವಾಗಿದೆ.

ಮೂರು ಪಂದ್ಯದಲ್ಲಿ ಬದಲಾವಣೆ ಮಾಡಿದ್ದು ಕೇವಲ ಎರಡು

ಮೂರು ಪಂದ್ಯದಲ್ಲಿ ಬದಲಾವಣೆ ಮಾಡಿದ್ದು ಕೇವಲ ಎರಡು

ಕಳೆದ ಮೂರು ಪಂದ್ಯಗಳಲ್ಲಿ ಭಾರತ ತಂಡದಲ್ಲಿ ಕೇವಲ ಎರಡು ಬದಲಾವನೆ ಮಾತ್ರವೇ ಮಾಡಲಾಗಿದೆ. ರಣತಂತ್ರದಲ್ಲಿ ಬದಲಾವಣೆ ಮಾಡಿದ ಪರಿಣಾಮವಾಗಿ ರವಿ ಬಿಷ್ಣೋಯ್ ಆಡುವ ಬಳಗದಿಂದ ಹೊರಗುಳಿದರೆ ಗಾಯದ ಕಾರಣಕ್ಕೆ ರವೀಂದ್ರ ಜಡೇಜಾ ಸ್ಥಾನದಲ್ಲಿ ದೀಪಕ್ ಹೂಡಾ ಕಣಕ್ಕಿಳಿದಿದ್ದರು. ಆದರೆ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿರುವ ಆವೇಶ್ ಖಾನ್ ಆಡುವ ಬಳಗದಿಂದ ಹೊರಗುಳಿಯುವ ಸಾಧ್ಯತೆಯಿದೆ.

ಸಂಭಾವ್ಯ ಆಡುವ ಬಳಗ

ಸಂಭಾವ್ಯ ಆಡುವ ಬಳಗ

ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ರಿಷಭ್ ಪಂತ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್/ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್/ಅವೇಶ್ ಖಾನ್, ಕುಲದೀಪ್ ಯಾದವ್

For Quick Alerts
ALLOW NOTIFICATIONS
For Daily Alerts
Story first published: Friday, August 5, 2022, 20:38 [IST]
Other articles published on Aug 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X