ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ವೃತ್ತಿಜೀವನದಲ್ಲಿ ಅದೇ ದೊಡ್ಡ ತಿರುವು ಎಂದ ರಾಹುಲ್ ದ್ರಾವಿಡ್

Indian Coad Rahul Dravid praises Rohit Sharma reveals turning point of his career

ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿಯೂ ಭರ್ಜರಿ ಗೆಲುವು ಸಾಧಿಸಿದ್ದು ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಇದೀಗ ಏಕದಿನ ಸರಣಿಯ ಕೊನೆಯ ಪಂದ್ಯವನ್ನಾಡಲು ಭಾರತ ತಂಡ ಸಜ್ಜಾಗಿದ್ದು ಮೂರು ಪಂದ್ಯಗಳ ಏಕದಿನ ಸರಣಿಯನ್ನು ವೈಟ್‌ವಾಶ್ ಮಾಡುವ ಉತ್ಸಾಹದಲ್ಲಿದೆ ಟೀಮ್ ಇಂಡಿಯಾ. ಅಂತಿಮ ಪಂದ್ಯಕ್ಕೂ ಮುನ್ನ ಮಾತನಾಡಿರುವ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದು ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ವೃತ್ತಿ ಜೀವನದ ಪ್ರಮುಖ ತಿರುವುದು ಯಾವುದು ಎಂಬುದನ್ನು ಹೇಳಿಕೊಂಡಿದ್ದಾರೆ.

ಪ್ರಸ್ತುತ ನಾಯಕನಾಗಿರುವ ರೋಹಿತ್ ಶರ್ಮಾ ವೈಟ್‌ಬಾಲ್ ಕ್ರಿಕೆಟ್‌ನ ಆಧುನಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಆದರೆ ರೋಹಿತ್ ಶರ್ಮಾ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಗಳನ್ನು ಹೊಂದಲು ಆರಂಭಿಕನಾಗಿ ಕಣಕ್ಕಿಳಿಯುವ ನಿರ್ಧಾರವೇ ಕಾರಣ ಎಂದಿದ್ದಾರೆ ರಾಹುಲ್ ದ್ರಾವಿಡ್. ಆರಂಭಿಕನಾಗಿ ಬ್ಯಾಟಿಂಗ್‌ಗೆ ಇಳಿದ ಕಾರಣದಿಂದಾಗಿಯೇ ರೋಹಿತ್ ಶರ್ಮಾ ಅವರ ನೈಜ ಸಾಮರ್ಥ್ಯ ಬೆಳಕಿಗೆ ಬಂದಿದೆ ಎಂದಿದ್ದಾರೆ.

4 ಪಂದ್ಯಗಳ ನಿಷೇಧ ಶಿಕ್ಷೆಯಿಂದ ತಪ್ಪಿಸಿಕೊಂಡ ಇಶಾನ್ ಕಿಶನ್: ಖಡಕ್ ವಾರ್ನಿಂಗ್ ಕೊಟ್ಟ ರೆಫರಿ4 ಪಂದ್ಯಗಳ ನಿಷೇಧ ಶಿಕ್ಷೆಯಿಂದ ತಪ್ಪಿಸಿಕೊಂಡ ಇಶಾನ್ ಕಿಶನ್: ಖಡಕ್ ವಾರ್ನಿಂಗ್ ಕೊಟ್ಟ ರೆಫರಿ

ಭಾರತ ಕಂಡ ಅಪರೂಪದ ಆಟಗಾರ

ಭಾರತ ಕಂಡ ಅಪರೂಪದ ಆಟಗಾರ

ರೋಹಿತ್ ಶರ್ಮಾ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ ರಾಹುಲ್ ದ್ರಾವಿಡ್ "ಆತ ಭಾರತ ಕಂಡ ಅಪರೂಪದ ಆಟಗಾರ. ಆತ 17 ಅಥವಾ 18ರ ಹರೆಯದಲ್ಲಿದ್ದಾಗ ಮೊದಲ ಬಾರಿಗೆ ಆತನನ್ನು ನಾನು ನೋಡಿದ್ದೆ. ಆತ ಆಗಲೇ ಭಿನ್ನವಾಗಿ ಕಾಣಿಸುತ್ತಿದ್ದ. ಅದನ್ನು ಬಳಿಕ ಆತ ಸಾಬೀತುಪಡಿಸಿದ್ದಾನೆ. ಸಾಕಷ್ಟು ಆಟಗಾರರು 19ರ ಹರೆಯದಲ್ಲಿದ್ದಾಗ ಭಿನ್ನವಾಗಿ ಕಾಣಿಸುತ್ತಾರೆ. ಆದರೆ ಅದರಲ್ಲಿ ಹೆಚ್ಚಿನವರು ತಮ್ಮ ಸಾಮರ್ಥ್ಯಕ್ಕೆ ತಕ್ಕಬಾದ ಪ್ರದರ್ಶನ ನೀಡಲು ಸಫಲವಾಗುವುದಿಲ್ಲ. ಆದರೆ ರೋಹಿತ್ ಶರ್ಮಾ ಕಳೆದ 15 ವರ್ಷಗಳಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕನಾದ ಪ್ರದರ್ಶನ ನೀಡಿದ್ದಾರೆ. ಆತ ಭಾರತೀಯ ಕ್ರಿಕೆಟ್‌ನ ಅದ್ಭುತವಾಗಿ ಸೇವೆ ಸಲ್ಲಿಸಿದ ಆಟಗಾರ. ನಿಜಕ್ಕೂ ಅದ್ಭುತವಾಗಿರುವುದನ್ನು ಸಾಧಿಸಿದ್ದಾರೆ" ಎಂದಿದ್ದಾರೆ ರಾಹುಲ್ ದ್ರಾವಿಡ್.

ಆರಂಭಿಕನಾಗಿ ಆಡಲು ಆರಂಭಿಸಿದ್ದೆ ದೊಡ್ಡ ತಿರುವು

ಆರಂಭಿಕನಾಗಿ ಆಡಲು ಆರಂಭಿಸಿದ್ದೆ ದೊಡ್ಡ ತಿರುವು

ಮುಂದುವರಿದು ಮಾತನಾಡಿರುವ ರಾಹುಲ್ ದ್ರಾವಿಡ್ "ಆರಂಭಿಕನಾಗಿ ಬ್ಯಾಟಿಂಗ್ ನಡೆಸಲು ಶುರು ಮಾಡಿದ್ದೇ ಆತನ ವೃತ್ತಿ ಜೀವನದ ಬಹುದೊಡ್ಡ ತಿರುವು. ಆತನ ನಿಜವಾದ ಸಾಮರ್ಥ್ಯ ಏನು ಎಂಬುದನ್ನು 2019ರ ವಿಶ್ವಕಪ್‌ನಲ್ಲಿ ನಾವೆಲ್ಲರೂ ನೋಡಿದ್ದೇವೆ. ಅಷ್ಟು ಮಾತ್ರವಲ್ಲದೆ ಬೃಹತ್ ಪ್ರಮಾಣದಲ್ಲಿ ರನ್‌ಗಳನ್ನು ಗಳಿಸುವುದು ಅಲ್ಲದೆ ಏಕದಿನ ಮಾದರಿಯಲ್ಲಿ ಮೂರು ದ್ವಿಶತಕಗಳನ್ನು ಸಿಡಿಸಿರುವುದು ಅತ್ಯದ್ಭುತ ಸಾಧನೆಯಾಗಿದೆ" ಎಂದಿದ್ದಾರೆ ರಾಹುಲ್ ದ್ರಾವಿಡ್.

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕದ ದಾಖಲೆ

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕದ ದಾಖಲೆ

ರೋಹಿತ್ ಶರ್ಮಾ ಏಜದಿನ ಕ್ರಿಕೆಟ್‌ನಲ್ಲಿ ದ್ವಿಶತಕದ ವಿಶ್ವದಾಖಲೆ ಹೊಂದಿದ್ದಾರೆ. ಒಂದು ದ್ವಿಶತಕ ಸಿಡಿಸುವುದೇ ವಿಶೇಷ ಸಾಧನೆ ಎನಿಸಿಕೊಂಡಿರುವಾಗ ರೋಹಿತ್ ಶರ್ಮಾ ಈಗಾಗಲೇ ಮೂರು ದ್ವಿಶತಕಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. 2007ರಲ್ಲಿ ಪಾದಾರ್ಪಣೆ ಮಾಡಿದ ಬಳಿಕ ಈವರೆಗೆ 240 ಏಕದಿನ ಪಂದ್ಯಗಳಲ್ಲಿ ಆಡಿರುವ ರೋಹಿತ್ ಶರ್ಮಾ 89.66ರ ಸ್ಟ್ರೈಕ್‌ರೇಟ್‌ನಲ್ಲಿ 29 ಶತಕ ಮತ್ತು 48 ಅರ್ಧಶತಕಗಳನ್ನು ಗಳಿಸಿದ್ದು ಏಕದಿನ ಮಾದರಿಯಲ್ಲಿ ಒಟ್ಟು 9681 ರನ್ ಗಳಿಸಿದ್ದಾರೆ. ಕಳೆದ ವರ್ಷ ವಿರಾಟ್ ಕೊಹ್ಲಿಯಿಂದ ನಾಯಕತ್ವವನ್ನು ವಹಿಸಿಕೊಂಡಿರುವ ರೋಹಿತ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

Story first published: Monday, January 23, 2023, 20:15 [IST]
Other articles published on Jan 23, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X