ಶಿಖರ್ ಧವನ್-ಆಯೆಶಾ ವೈವಾಹಿಕ ಜೀವನ ವಿಚ್ಛೇದನದೊಂದಿಗೆ ಅಂತ್ಯ

Dhawan ಅವರಿಗೆ Divorce ನೀಡಿದ Aesha Mukerji | Oneindia Kannada

ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರ ಶಿಖರ್ ಧವನ್ ಮತ್ತು ಅವರ ಪತ್ನಿ ಆಯೆಶಾ ಮುಖರ್ಜಿ ತಮ್ಮ 8 ವರ್ಷಗಳ ವೈವಾಹಿಕ ಜೀವನವನ್ನು ಮುರಿದುಕೊಂಡಿದ್ದಾರೆ. ಶಿಖರ್ ಧವನ್ ಪತ್ನಿ ಆಯೆಶಾ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು ಸುಮಾರು ಒಂದು ದಶಕದ ದಾಂಪತ್ಯ ಜೀವನದ ನಂತರ ವಿಚ್ಛೇದನ ಪಡೆದುಕೊಂಡು ಬೇರೆಯಾಗಿರುವುದಾಗಿ ತಿಳಿಸಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ 2012ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್ ಮೂಲದ ಬಾಕ್ಸರ್ ಆಯೆಶಾ ಅವರನ್ನು 2012ರಲ್ಲಿ ವಿವಾಹವಾಗಿದ್ದರು. ಇನ್ಸ್ಟಾಗ್ರಾಮ್‌ನಲ್ಲಿ ಆಯೆಶಾ ಮುಖರ್ಜಿ ತನ್ನ ಹೊಸ ಖಾತೆಯಿಂದ ಮಂಗಳವಾರ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿಯಿರುವ ಮೂಲಗಳು ಸುದ್ದಿಯನ್ನು ಎಎನ್‌ಐ ಸುದ್ದಿ ಸಂಸ್ಥೆಗೆ ಈ ಬೆಳವಣಿಗೆಯನ್ನು ಖಚಿತಪಡಿಸಿದೆ.

2012ರ ಅಕ್ಟೋಬರ್ 30ರಂದು ಶಿಖರ್ ಧವನ್ ಆಯೆಶಾ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೂಲತಃ ಬಂಗಾಳದವರಾದ ಆಯೆಶಾ 8 ವರ್ಷವಿದ್ದಾಗ ಆಸ್ಟ್ರೇಲಿಯಾಗೆ ಸ್ಥಳಾಂತರವಾಗಿ ಜೀವನ ನಡೆಸುತ್ತಿದ್ದರು. ಕಿಕ್ ಬಾಕ್ಸರ್ ಆಗಿರುವ ಆಯೆಶಾ ಕ್ರೀಡಾ ತರಬೇತುದಾರರು ಕೂಡ ಹೌದು.

46ರ ಹರೆಯದ ಆಯೆಶಾ ಧವನ್ ಜೊತೆಗೆ ವಿವಾಹಕ್ಕೂ ಮುನ್ನ ಆಸ್ಟ್ರೇಲಿಯಾದ ಉದ್ಯಮಿಯೋರ್ವರೊಂದಿಗೆ ವಿವಾಹವಾಗಿದ್ದರು. ಈ ದಂಪತಿಗೆ ಅಲಿಯಾಹ್ ಹಾಗೂ ರಿಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ದಾಂಪತ್ಯ ಬೇರ್ಪಟ್ಟ ಬಳಿಕ ಆಯೆಶಾ ಧವನ್ ಅವರನ್ನು ವಿವಾಹವಾಗಿದ್ದರು. ಧವನ್ ಹಾಗೂ ಆಯೆಶಾ ದಂಪತಿಗೆ ಜೊರಾವರ್ ಎಂಬ ಪುತ್ರನಿದ್ದಾನೆ.

ಧವನ್ ಹಾಗೂ ಆಯೆಶಾ ದಂಪತಿಯ ಈ ವಿವಾಹ ವಿಚ್ಛೇದನದ ಸುದ್ದಿಯನ್ನು ಕ್ರಿಕೆಟಿಗ ಧವನ್ ಈವರೆಗೆ ಖಚಿತಪಡಿಸಿಲ್ಲ. ಕಳೆದ ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆದ ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಧವನ್ ಮೊದಲ ಬಾರಿಗೆ ಮುನ್ನಡೆಸಿದ್ದರು. ಶ್ರೀಲಂಕಾದಲ್ಲಿ ನಡೆದ ಈ ಸರಣಿಯಲ್ಲಿ ಆರು ಸೀಮಿತ ಓವರ್‌ಗಳ ಪಂದ್ಯದಲ್ಲಿ ಭಾರತ ತಂಡವನ್ನು ಧವನ್ ಮುನ್ನಡೆಸಿದ್ದಾರೆ. ಟೀಮ್ ಇಂಡಿಯಾ ಸೀಮಿತ ಓವರ್‌ಗಳ ತಂಡದ ಪ್ರಮುಖ ಸದಸ್ಯನಾಗಿರುವ ಧವನ್ ಕಳೆದ ಒಂದು ದಶಕದಿಂದ ತಂಡದ ಖಾಯಂ ಸದಸ್ಯನಾಗಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, September 7, 2021, 23:42 [IST]
Other articles published on Sep 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X