ಬಾಂಗ್ಲಾದೇಶ ವಿರುದ್ಧದ ಚುಟುಕು ಸರಣಿಗೆ ಅನನುಭವಿ ನ್ಯೂಜಿಲೆಂಡ್ ತಂಡ ಸಿದ್ಧ

ಆಸ್ಟ್ರೇಲಿಯಾ ತಂಡವನ್ನು ತನ್ನದೇ ನೆಲದಲ್ಲಿ ಮಣಿಸಿ ಐತಿಹಾಸಿಕ ಸರಣಿ ಗೆದ್ದಿರುವ ಬಾಂಗ್ಲಾದೇಶ ಈಗ ಮತ್ತೊಂದು ಚುಟುಕು ಸರಣಿಗೆ ಸಜ್ಜಾಗಿದೆ. ಈ ಬಾರಿ ಮಹಮ್ಮದುಲ್ಲಾ ನೇತೃತ್ವದ ತಂಡಕ್ಕೆ ಎದುರಾಳಿಯಾಗಿ ಸವಾಲು ಸ್ವೀಕರಿಸಿದ್ದು ನ್ಯೂಜಿಲೆಂಡ್ ತಂಡ. ಆದರೆ ನ್ಯೂಜಿಲೆಂಡ್ ತಂಡ ಕೂಡ ಪೂರ್ಣ ಸಾಮರ್ಥ್ಯದ ಆಟಗಾರರೊಂದಿಗೆ ಈ ಪ್ರವಾಸಕ್ಕೆ ತೆರಳಿಲ್ಲ. ಎರಡನೇ ಹಂತದ ಆಟಗಾರರ ತಂಡ ಇದಾಗಿದ್ದು ಬಾಂಗ್ಲಾದೇಶ ನೆಲದಲ್ಲಿ ಕಠಿಣ ಸವಾಲನ್ನು ಸ್ವೀಕರಿಸಲಿದೆ.

ಈ ಸರಣಿಯಲ್ಲಿ ಅನನುಭವಿ ಆಟಗಾರರನ್ನು ಹೊಂದಿರುವ ನ್ಯೂಜಿಲೆಂಡ್ ತಂಡವನ್ನು ಟಾಮ್ ಲಾಥಮ್ ಮುನ್ನಡೆಸಲಿದ್ದಾರೆ. ಐದು ಪಂದ್ಯಗಳ ಸರಣಿ ಇದಾಗಿದ್ದು ಬುಧವಾರದಿಂದ ಈ ಸರಣಿ ಆರಂಭವಾಗಲಿದೆ. ವಿಪರ್ಯಾಸವೆಂದರೆ ಈ ತಂಡದಲ್ಲಿರುವ ಯಾವ ಆಟಗಾರ ಕೂಡ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡಲು ಆಯ್ಕೆಯಾಗಿಲ್ಲ.

ಕೊರೊನಾವೈರಸ್‌ನ ಕಾರಣದಿಂದಾಗಿ ಈ ಸರಣಿ ಮುಚ್ಚಿದ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗೈರಿನಲ್ಲಿ ನಡೆಯಲಿದೆ. ಸೆಪ್ಟೆಂಬರ್ 1, 3, 5, 8 ಹಾಗೂ 10ನೇ ತಾರೀಕಿನಂದು ಈ ಸರಣಿಯ ಪಂದ್ಯಗಳು ನಡೆಯಲಿದೆ. ಬುಧವಾರ ಆರಂಭವಾಗಲಿರುವ ಈ ಸರಣಿಯಲ್ಲಿ ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡವನ್ನು 4-1 ಅಂತರದಿಂದ ಮಣಿಸಿರುವ ಪೂರ್ಣ ಸಾಮರ್ಥ್ಯದ ಬಾಂಗ್ಲಾದೇಶ ತಂಡದ ಸವಾಲನ್ನು ಎದುರಿಸಲು ನ್ಯೂಜಿಲೆಂಡ್ ಪಡೆ ಸಜ್ಜಾಗಿದೆ.

ಓವಲ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಹೆಚ್ಚಿನ ಬದಲಾವಣೆ ಮಾಡಿಕೊಳ್ಳಲ್ಲ'ಓವಲ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಹೆಚ್ಚಿನ ಬದಲಾವಣೆ ಮಾಡಿಕೊಳ್ಳಲ್ಲ'

ಸರಣಿಯ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಟಾಮ್ ಲಾಥಮ್ ಪ್ರತಿಕ್ರಿಯೆ ನೀಡಿದ್ದಾರೆ. "ಈ ಸಂದರ್ಭದಲ್ಲಿ ಇಡೀ ಜಗತ್ತು ಸಂಕಷ್ಟದಲ್ಲಿದೆ. ನ್ಯೂಜಿಲ್ಯಾಂಡ್ ಕ್ರಿಕೆಟ್ ಆಟಗಾರರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈ ಸರಣಿಯ ಮೂಲಕ ನಾನು ಸೇರಿದಂತೆ ಬಹಳಷ್ಟು ವ್ಯಕ್ತಿಗಳಿಗೆ ಅವಕಾಶವನ್ನು ಒದಗಿಸಿದೆ" ಎಂದು ಟಾಮ್ ಟಾಥಮ್ ಹೇಳಿದ್ದಾರೆ. ಇನ್ನು ಈ ಸರಣಿಯ ಬಗ್ಗೆ ಮಾತನಾಡಿದ ಅವರು ನಾವು ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ನಡುವಿನ ಸರಣಿಯನ್ನು ಗಮನಿಸಿದ್ದೇವೆ. ಎಲ್ಲವೂ ಸುಲಭವಾಗಿರುವುದಿಲ್ಲ ಎಂಬ ಅರಿವು ನಮಗಿದೆ. ಆದರೆ ತಂಡದ ಒಳಗೆ ಅದ್ಭುತವಾದ ಸಕಾರಾತ್ಮಕ ಸ್ಪೂರ್ತಿಯನ್ನು ಹೊಂದಿದ್ದೇವೆ" ಎಂದು ಟಾಮ್ ಲಾಥಮ್ ಹೇಳಿಕೆ ನೀಡಿದ್ದಾರೆ.

ಮುಂದುವರಿದು ಮಾತನಾಡಿದ ಲಾಥಮ್ "ತಂಡದಲ್ಲಿರುವ ಬಹುತೇಕ ಆಟಗಾರರಿಗೆ ಇದಕ್ಕೂ ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಅನುಭವವಿದೆ. ಒಂದಿಬ್ಬರು ಆಟಗಾರರಿಗೆ ಮಾತ್ರವೇ ಇದು ಹೊಸ ಅನುಭವವಾಗಿದೆ. ಅವರು ಕೂಡ ತಂಡದೊಳಗೆ ಅವಕಾಶವನ್ನು ಪಡೆದ ಕಾರಣಕ್ಕೆ ಸಾಕಷ್ಟು ಉತ್ಸುಕರಾಗಿದ್ದಾರೆ. ಸಾಧ್ಯವಾದಷ್ಟು ನಮ್ಮ ಯೋಜನೆಯ ಪ್ರಕಾರವೇ ನಡೆಯಲು ಪ್ರಯತ್ನವನ್ನು ನಡೆಸಲಿದ್ದೇವೆ" ಎಂದು ಲಾಥಮ್ ಪ್ರತಿಕ್ರಿಯೆ ನೀಡಿದ್ದಾರೆ.

ಐದಯ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿರುವ ಎರಡು ತಂಡಗಳ ಸಂಪೂರ್ಣ ಸ್ಕ್ವಾಡ್ ಇಲ್ಲಿದೆ.
ಬಾಂಗ್ಲಾದೇಶ ತಂಡ: ಮಹ್ಮದುಲ್ಲಾ ರಿಯಾದ್, (ಕ್ಯಾಪ್ಟನ್), ಶಕೀಬ್ ಅಲ್ ಹಸನ್, ಮುಷ್ಫಿಕರ್ ರಹೀಮ್, ಸೌಮ್ಯ ಸರ್ಕಾರ್, ಲಿಟನ್ ದಾಸ್, ಮೊಸದ್ದೆಕ್ ಹುಸೇನ್, ಅಫೀಫ್ ಹೊಸೈನ್, ನಯೀಮ್ ಶೇಖ್, ನೂರುಲ್ ಹಸನ್ ಸೋಹನ್, ಶಮೀಮ್ ಹುಸೇನ್, ರುಬೆಲ್ ಹುಸೇನ್, ಮುಸ್ತಫಿಜುರ್ ರಹಮಾನ್, ತಸ್ಕಿನ್ ಅಹ್ಮದ್, ಮೊಹಮ್ಮದ್ ಸೈಫುದ್ದೀನ್, ಶೊರಿಫುಲ್ ಇಸ್ಲಾಂ, ತೈಜುಲ್ ಇಸ್ಲಾಂ, ಮಹೇದಿ ಹಸನ್, ಅಮೀನುಲ್ ಇಸ್ಲಾಂ ಬಿಪ್ಲಬ್, ನಸುಮ್ ಅಹ್ಮದ್

ಟೀಮ್ ಇಂಡಿಯಾವನ್ನ ಹೇಗೆ ಕಟ್ಟಿಹಾಕ್ಬೇಕು ಅಂತ ನಮ್ಗೆ ಚನ್ನಾಗಿ ಗೊತ್ತು | Oneindia Kannada

ನ್ಯೂಜಿಲೆಂಡ್ ತಂಡ: ಟಾಮ್ ಲಥಮ್ (ಕ್ಯಾಪ್ಟನ್), ಹಮೀಶ್ ಬೆನೆಟ್, ಟಾಮ್ ಬ್ಲಂಡೆಲ್, ಡೌಗ್ ಬ್ರೇಸ್‌ವೆಲ್, ಕಾಲಿನ್ ಡಿ ಗ್ರಾಂಡ್‌ಹೋಮ್, ಜಾಕೋಬ್ ಡಫಿ, ಮ್ಯಾಟ್ ಹೆನ್ರಿ, ಸ್ಕಾಟ್ ಕುಗೆಲೆಜ್ನ್, ಕೋಲ್ ಮೆಕ್ಕಾಂಚಿ, ಹೆನ್ರಿ ನಿಕೊಲ್ಸ್, ಅಜಾಜ್ ಪಟೇಲ್, ರಚಿನ್ ರವೀಂದ್ರ, ಬೆನ್ ಸಿಯರ್ಸ್, ಬ್ಲೇರ್ ಟಿಕ್ನರ್, ವಿಲ್ ಯಂಗ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 31, 2021, 19:12 [IST]
Other articles published on Aug 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X