ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ವಿದೇಶಿ ಆಟಗಾರರ ಸಾಧನೆಯ ಹಿನ್ನೋಟ

ಹಣದ ಹೊಳೆಯನ್ನು ಹರಿಸುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ 10ನೇ ವರ್ಷದ ಸಂಭ್ರಮ.ಏಪ್ರಿಲ್ 27, 2017ರಂತೆ ಟಾಪ್ 10 ವಿದೇಶಿ ಆಟಗಾರರ ವಿವರ ಹೀಗಿದೆ.

By Mahesh

ಬೆಂಗಳೂರು, ಏಪ್ರಿಲ್ 27: ಹಣದ ಹೊಳೆಯನ್ನು ಹರಿಸುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ 10ನೇ ವರ್ಷದ ಸಂಭ್ರಮ. ಸ್ಥಳೀಯ ಪ್ರತಿಭೆಗಳಲ್ಲದೆ ವಿದೇಶಿ ಆಟಗಾರರಿಗೂ ಸೂಕ್ತ ವೇದಿಕೆ ಒದಗಿಸಿದೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಐಪಿಎಲ್ ನಲ್ಲಿ ಆಡುವ ವಿದೇಶಿ ಆಟಗಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಐಪಿಎಲ್ ನಲ್ಲಿ ಮಿಂಚಿದ ಬಳಿಕ ಆಟಗಾರರರಿಗೆ ರಾಷ್ಟ್ರೀಯ ತಂಡದಿಂದ ಕರೆ ಬಂದ ಉದಾಹರಣೆಗಳಿವೆ. ಕೆಲ ಮಾಜಿ ಆಟಗಾರರು ಕೂಡಾ ಐಪಿಎಲ್ ನಲ್ಲಿ ಮಿಂಚಿದ್ದಾರೆ, ಮಿಂಚುತ್ತಿದ್ದಾರೆ.

ನ್ಯೂಜಿಲೆಂಡಿನ ಬ್ರೆಂಡನ್ ಮೆಕಲಮ್ ಅವರು ಭರ್ಜರಿ ಶತಕ ಬಾರಿಸುವ ಮೂಲಕ ಐಪಿಎಲ್ ನಲ್ಲಿ ವಿದೇಶಿ ಆಟಗಾರರಿಗೆ ಅವಕಾಶಗಳ ಹೆಬ್ಬಾಗಿಲು ತೆರೆದರು. ಏಪ್ರಿಲ್ 27, 2017ರಂತೆ ಟಾಪ್ 10 ವಿದೇಶಿ ಆಟಗಾರರ ವಿವರ ಹೀಗಿದೆ.


#1 ಕ್ರಿಸ್ ಗೇಲ್

#1 ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ನ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು 37ರ ಹರೆಯದಲ್ಲೂ ಅದ್ಭುತ ಪ್ರದರ್ಶನ ನೀಡಬಲ್ಲ ಆಟಗಾರ ಎನಿಸಿದ್ದಾರೆ. ಆರ್ ಸಿಬಿ ಪರ ಹಾಗೂ ಟ್ವೆಂಟಿ20 ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಮನರಂಜನೆಯ ಮಹಾಪೂರ ಹರಿಸುವ ನಿರೀಕ್ಷೆಯೊಂದಿಗೆ ಐಪಿಎಲ್ 2017ರಲ್ಲಿ ಗೇಲ್ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ ನಲ್ಲಿ ಗರಿಷ್ಠ ವೈಯಕ್ತಿಕ ಮೊತ್ತ 175ರನ್ ಇನ್ನೂ ಗೇಲ್ ಹೆಸರಿನಲ್ಲೇ ಇದೆ. ಗೇಲ್ ಸಿಕರ್ ಬಾರಿಸಲು ಶುರು ಮಾಡಿದರೆ ಎಲ್ಲಾ ಕ್ರೀಡಾಂಗಣಗಳು ಚಿಕ್ಕದಾಗಿ ಕಾಣಿಸುತ್ತದೆ.

#2 ಡೇವಿಡ್ ವಾರ್ನರ್

#2 ಡೇವಿಡ್ ವಾರ್ನರ್

ಆಸ್ಟ್ರೇಲಿಯಾದ ಎಡಗೈ ದಾಂಡಿಗ ಡೇವಿಡ್ ವಾರ್ನರ್ ಅವರು 2016ರ ಐಪಿಎಲ್ ಟೂರ್ನಿಯಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇವರು 9 ಅರ್ಧಶತಕಗಳೊಂದಿಗೆ 151 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ವಾರ್ನರ್ ಹೈದರಾಬಾದ್ ತಂಡದ ಭದ್ರ ಬುನಾದಿ ಹಾಕಬಲ್ಲ ಆಟಗಾರನಾಗಿದ್ದಾನೆ. ಇವರ ನಾಯಕತ್ವದಲ್ಲಿಯೇ ಸನ್ ರೈಸರ್ಸ್ 2016 ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ ಸಿಬಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

#3 ಎಬಿ ಡಿ ವಿಲಿಯರ್ಸ್

#3 ಎಬಿ ಡಿ ವಿಲಿಯರ್ಸ್

ಎಬಿ ಡಿ ವಿಲಿಯರ್ಸ್ ಅವರು ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಜತೆಗೆ ಆರ್ ಸಿಬಿಯ ಅತ್ಯಂತ ಪ್ರಮುಖ ಆಟಗಾರರಾಗಿದ್ದಾರೆ. ಆರ್ ಸಿಬಿ ಬ್ಯಾಟಿಂಗ್ ಆಧಾರ ಶಕ್ತಿಯಾಗಿದ್ದು, 360 ಡಿಗ್ರಿ ಆಟಗಾರ ಎನಿಸಿಕೊಂಡಿರುವ ಡಿ ವಿಲಿಯರ್ಸ್ ಅವರು ಸದ್ಯ ಮೊಣಕೈ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಗುಣಮುಖರಾಗಿದ್ದು ಐಪಿಎಲ್ 2017ರಲ್ಲಿ ಹೆಚ್ಚಿನ ಪ್ರಭಾವ ಬೀರುವ ನಿರೀಕ್ಷೆಯಿದೆ. ತಂಡವನ್ನು ಫೈನಲ್ ತನಕ ಕೊಂಡೊಯ್ಯಲು ವಿಲಿಯರ್ಸ್ ನೆರವು ಬೇಕೇಬೇಕು.

#4 ಶೇನ್ ವಾಟ್ಸನ್

#4 ಶೇನ್ ವಾಟ್ಸನ್

ಐಪಿಎಲ್ ನ ಸ್ಟಾರ್ ಆಲ್ ರೌಂಡರ್ ಆಸ್ಟ್ರೇಲಿಯಾದ ಶೇನ್ ವಾಟ್ಸನ್ ಅವರು 2016ರ ಹರಾಜಿನಲ್ಲಿ 9.5 ಕೋಟಿ ರು ಗಳಿಗೆ ಆರ್ ಸಿಬಿ ಪಾಲಾದರು. ಆಸ್ಟ್ರೇಲಿಯಾ ಬಲಗೈ ಬ್ಯಾಟ್ಸ್ ಮನ್ ಹಾಗೂ ಬೌಲರ್ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದು, ಐಪಿಎಲ್ ನಲ್ಲಿ ವೃತ್ತಿ ಬದುಕು ಮುಂದುವರೆಸಿದ್ದಾರೆ. ಆರ್ ಸಿಬಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ ಪರ ಉತ್ತಮ ಆಟ ಪ್ರದರ್ಶಿಸಿದ್ದರು.

#5 ಬ್ರೆಂಡನ್ ಮೆಕಲಮ್

#5 ಬ್ರೆಂಡನ್ ಮೆಕಲಮ್

ನ್ಯೂಜಿಲೆಂಡ್ ನ ದೈತ್ಯ ಪ್ರತಿಭೆ ಬ್ರೆಂಡಾನ್ ಮೆಕಲಂ. 2008ರಲ್ಲಿ ಮೊದಲ ಬಾರಿಗೆ ಐಪಿಎಲ್ ಗೆ ಕಾಲಿಟ್ಟಾಗಿನಿಂದ ತಮ್ಮ ಛಾಪು ಮೂಡಿಸಿದ್ದಾರೆ. ಆಗ, ಕೋಲ್ಕತಾ ನೈಟ್ ರೈಡರ್ಸ್ ಪರವಾಗಿ ಆಡಿದ್ದ ಅವರು, ಆ ವರ್ಷ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 158 ರನ್ ಚಚ್ಚಿದ್ದರು. ಈಗ 10ನೇ ಐಪಿಎಲ್ ನಲ್ಲಿ ಅವರ ಜನಪ್ರಿಯತೆಯೂ ಹೆಚ್ಚಾಗಿದ್ದು ಅವರ ಮೇಲಿನ ನಿರೀಕ್ಷೆಯೂ ಉಲ್ಬಣಿಸಿದೆ. ಕೆಕೆಆರ್ ಮಾತ್ರವಲ್ಲದೆ, ಕೊಚಿ ಟಸ್ಕರ್ಸ್ ಹಾಗೂ ಚೆನ್ನೈ ಸೂಪರ್ ಸಿಂಗ್ಸ್ (ಸಿಎಸ್ ಕೆ) ನಲ್ಲಿಯೂ ಅವರು ಆಡಿದ್ದರು.

#6 ಲಸಿತ್ ಮಾಲಿಂಗ

#6 ಲಸಿತ್ ಮಾಲಿಂಗ

ಲಸಿತ್ ಮಾಲಿಂಗ: ಮುಂಬೈ ಇಂಡಿಯನ್ಸ್ ತಂಡದ ಪಾಲಿನ ಮ್ಯಾಚ್ ವಿನ್ನರ್ ಆಗಿರುವ ಶ್ರೀಲಂಕಾದ ಬಲಗೈ ವಿನ್ನರ್ ಲಸಿತ್ ಮಾಲಿಂಗ ಅವರು ತಮ್ಮ ವೇಗ ಹಾಗೂ ಯಾರ್ಕರ್ ಗಳ ಮೂಲಕ ವಿಶ್ವದ ಕ್ರಿಕೆಟ್ ದಿಗ್ಗಜರನ್ನೇ ಕಾಡಿದ್ದಾರೆ. ಪಂದ್ಯದ ಮೊದಲ ಓವರ್ ಇರಲಿ, ಕೊನೆ ಓವರ್ ಇರಲಿ ಮಾಲಿಂಗ ಎಂದೆಂದಿಗೂ ವಿಕೆಟ್ ಗಳಿಸುವ ಬೌಲರ್ ಆಗಿ ತಂಡಕ್ಕೆ ಆಸರೆಯಾಗುತ್ತಾರೆ. ಟಿ20ಯಲ್ಲಿ ಅತಿ ಹೆಚ್ಚು ಬೌಲ್ಡ್ ಮಾಡಿ ವಿಕೆಟ್ ಗಳಿಸಿರುವ ಬೌಲರ್ ಆಗಿರುವ ಮಾಲಿಂಗ ಅವರು 2016ರಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. 2015ರಲ್ಲಿ 15 ಪಂದ್ಯಗಳಿಂದ 24 ವಿಕೆಟ್ ಗಳಿಸಿದ್ದರು. 34 ವರ್ಷ ವಯಸ್ಸಿನ ಮಾಲಿಂಗ ಅವರು 98 ಪಂದ್ಯಗಳಿಂದ 143 ವಿಕೆಟ್ ಗಳಿಸಿರುವ ಯಶಸ್ವಿ ಬೌಲರ್.

#7 ಜಾಕ್ ಕಾಲಿಸ್

#7 ಜಾಕ್ ಕಾಲಿಸ್

The former South African cricketer plays no more but because of his performances in the IPL, he's still considered as one of the best all-rounders this league has ever had in its journey of 10 years. In between 2008 and 2014, Kallis has played 98 matches and scored 2427 runs with 89* being his highest. The right-handed batsman slammed 17 fifties in the IPL. He has also picked up 65 wickets in the IPL. He's now the head coach of the Kolkata Knight Riders side.

#8 ಶಾನ್ ಮಾರ್ಷ್

#8 ಶಾನ್ ಮಾರ್ಷ್

ಐಪಿಎಲ್ ನ ಚೊಚ್ಚಲ ಆವೃತ್ತಿ ನಡೆದಿದ್ದ 2008ರಿಂದ ಈವರೆಗೆ ಪಂಜಾಬ್ ತಂಡದಲ್ಲಿ ಉಳಿದುಕೊಂಡಿರುವ ಏಕೈಕ ಆಟಗಾರನೆಂದರೆ ಅದು ಶಾನ್ ಮಾರ್ಷ್ ಮಾತ್ರ. ಆಸೀಸ್ ನ ಈ ಆಟಗಾರ ಈವರೆಗೆ ಐಪಿಎಲ್ ನಲ್ಲಿ 62 ಪಂದ್ಯಗಳಿಂದ 40 ರನ್ ಸರಾಸರಿಯಲ್ಲಿ 2213 ರನ್ ಗಳಿಸಿದ್ದಾರೆ. ಈವರೆಗಿನ ಐಪಿಎಲ್ ನಲ್ಲಿ 18 ಅರ್ಧಶತಕ ಹಾಗೂ 1 ಶತಕ ಅವರ ಸಾಧನೆಯ ಬುಟ್ಟಿಯಲ್ಲಿವೆ. ಅವರ ಸ್ಟ್ರೈಕ್ ರೇಟ್ 132 ಇದ್ದು, ಪಂಜಾಬ್ ತಂಡದ ಪ್ರಮುಖ ಆಟಗಾರ ಎನಿಸಿದ್ದಾರೆ.

#9 ಡ್ವಾಯ್ನೆ ಬ್ರಾವೊ

#9 ಡ್ವಾಯ್ನೆ ಬ್ರಾವೊ

ವೆಸ್ಟ್ ಇಂಡೀಸ್ ಪರ ಆಡುವ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ಡೆರ್ರೆನ್ ಬ್ರಾವೋ ಟೆಸ್ಟ್ ಕ್ರಿಕೆಟ್ ನಲ್ಲಿ ಪ್ರತಿಭಾವಂತ ಆಟಗಾರ ಮತ್ತು ವೆಸ್ಟ್ ಇಂಡೀಸ್ ನ ಅತ್ಯುತ್ತಮ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರು. ಏಕ ದಿನ ಪಂದ್ಯಗಳಲ್ಲಿ ಸಾಕಷ್ಟು ಆಡಿದ್ದರೂ ಅವರು ತಮ್ಮ ಕೈಚಳಕ ತೋರಲು ಸಾಧ್ಯವಾಗಿಲ್ಲ. ಕಳೆದ ಬಾರಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ಪರ ಬ್ರಾವೋ ಅವರು ಅಷ್ಟೊಂದು ಟಿ20 ಪಂದ್ಯಗಳನ್ನಾಡಿಲ್ಲ. ಹಾಗಾಗಿ ಕೆಕೆಆರ್ ನಲ್ಲಿ ಅವರನ್ನು ಸೇರಿಸಿಕೊಂಡಿದ್ದು ಹಲವರ ಹುಬ್ಬೇರುವಂತೆ ಮಾಡಿತ್ತು, ಅವರ ಆಯ್ಕೆಯನ್ನು ಪ್ರಶ್ನಿಸಲಾಯಿತು. ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದ್ದರೂ, ಅವರು ಈ ಸೀಸನ್ ನಲ್ಲಿ ಮೈದಾನಕ್ಕಿಳಿಯುವುದಕ್ಕಿಂತ ಬೆಂಚ್ ಮೇಲೆ ಕುಳಿತುಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ.

#10 ಸುನಿಲ್ ನಾರಾಯಣ್

#10 ಸುನಿಲ್ ನಾರಾಯಣ್

ಸುನೀಲ್ ನರೇನ್ ಕೋಲ್ಕತಾ ನೈಟ್ ರೈಡರ್ಸ್ ನ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರೆನ್ನುವುದರಲ್ಲಿ ಅನುಮಾನವೇ ಇಲ್ಲ. 2012ರಿಂದಲೇ ಕೆಕೆಆರ್ ಪರ ಆಡುತ್ತಿರುವ ಸುನೀಲ್ ನರೇನ್ ಕಳೆದ ವರ್ಷ ಅತೀಹೆಚ್ಚು ವಿಕೆಟ್ ಪಡೆದರಲ್ಲದೆ ಟೂರ್ನಾಮೆಂಟ್ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾಗಿದ್ದರು. ಒಟ್ಟು 24 ವಿಕೆಟ್ ಗಳಿಸಿದ್ದ ನರೇನ್ ಐಪಿಎಲ್ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2014ರಲ್ಲಿ ಈ ಮಿಸ್ಟರಿ ಸ್ಪನ್ ಬೌಲರನ್ನು ತಂಡದಲ್ಲಿ ಉಳಿಸಿಕೊಳ್ಳಲಾಯಿತು. ದುರಾದೃಷ್ಟವಶಾತ್ ಫಿಟ್ನೆಸ್ ಮತ್ತು ಹಲವಾರು ಕಾರಣದಿಂದಾಗಿ ಕಳೆದೆರಡು ಸೀಸನ್ ನಲ್ಲಿ ಅವರು ಹೆಚ್ಚು ಪಂದ್ಯವಾಡಲು ಸಾಧ್ಯವಾಗಿಲ್ಲ. ಐಪಿಎಲ್ ನಲ್ಲಿ ಒಟ್ಟು 44 ಪಂದ್ಯವಾಡಿರುವ ಅವರು 85 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X