ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಬೆಂಬಲಕ್ಕೆ ನಿಂತ ಕರ್ನಾಟಕದ ಲಿಟ್ಲ್ ಮಾಸ್ಟರ್!

ವಿರಾಟ್ ಕೊಹ್ಲಿ ಒಬ್ಬ ವಿಶ್ವದರ್ಜೆಯ ಬ್ಯಾಟ್ ಮನ್ ಆಡುವ ಆಟ ಅದಲ್ಲ. ಅವರು ಕನ್ನಡಿಯಲ್ಲಿ ತಮ್ಮ ಮುಖವನ್ನು ತಾವೇ ನೋಡಿಕೊಳ್ಳಲಿ ಎಂದು ಗವಾಸ್ಕರ್ ಟೀಕಿಸಿದ್ದರೆ, ಮತ್ತೊಬ್ಬ ಲಿಟ್ಲ್ ಮಾಸ್ಟರ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.

By Mahesh

ಬೆಂಗಳೂರು, ಮೇ 07 : ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಒಬ್ಬ ವಿಶ್ವದರ್ಜೆಯ ಬ್ಯಾಟ್ಸ್ ಮನ್ ಆಡುವ ಆಟ ಅದಲ್ಲ. ಅವರು ಕನ್ನಡಿಯಲ್ಲಿ ತಮ್ಮ ಮುಖವನ್ನು ತಾವೇ ನೋಡಿಕೊಳ್ಳಲಿ ಎಂದು ಗವಾಸ್ಕರ್ ಟೀಕಿಸಿದ್ದರೆ, ಮತ್ತೊಬ್ಬ ಲಿಟ್ಲ್ ಮಾಸ್ಟರ್ ಗುಂಡಪ್ಪ ವಿಶ್ವನಾಥ್ ಅವರು ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಕೊಹ್ಲಿ ಅವರ ಆಟ ಈಗ ಬಾವ ಬಾಮೈದ ನಡುವಿನ ಮಾತಿನ ತಿಕ್ಕಾಟಕ್ಕೆ ಕಾರಣವಾಗಿದೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಸತತ ಕ್ರಿಕೆಟ್ ಆಡಿರುವುದರಿಂದ ಕೊಹ್ಲಿ ಅವರಿಗೆ ವಿಶ್ರಾಂತಿ ಇಲ್ಲದ್ದಂತಾಗಿದೆ. ಅವರು ಟಿ20 ಆಕರ್ಷಕ ಹೊಡೆತಗಳಿಗೆ ಮುಂದಾಗಬಾರದು. ಈ ರೀತಿ ಬ್ಯಾಟ್ಸ್ ಮನ್ ಗಳಿಗೆ ಆಗುವುದು ಸಹಜ. ಕೊಹ್ಲಿ ಅವರ ವೃತ್ತಿ ಬದುಕಿನಲ್ಲಿ ಈ ಹಿಂದೆ ಕೂಡಾ ಈ ರೀತಿ ಆಗಿತ್ತು. [ಗೋ ಗ್ರೀನ್ ಎಂದು ಬಿಎಂಟಿಸಿ ಹತ್ತಿದ ಕೊಹ್ಲಿ ಪಡೆ]

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಪ್ರವಾಸದ ಬಳಿಕ ಕೊಹ್ಲಿ ಅವರು ಬ್ಯಾಟ್ಸ್ ಮನ್ ಆಗಿ ಸೋತಿದ್ದಾರೆ ಎಂದು ಬರೆಯಲಾಯಿತು. ಆನಂತರ ಕೊಹ್ಲಿ ಸಾಧನೆ ಕಂಡು ಎಲ್ಲರೂ ಮುಗಿನ ಮೇಲೆ ಬೆರಳಿಟ್ಟು ನೋಡುವಂತಾಯಿತು. ಈಗಲೂ ಅಷ್ಟೇ, ಐಪಿಎಲ್ ಆಟವನ್ನು ಮರೆತು ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿ ಆಟವನ್ನು ನೋಡಿ ಆನಂದಿಸಿ ಎಂದು ಕ್ರಿಕೆಟ್ ದಿಗ್ಗಜ ಗುಂಡಪ್ಪ ವಿಶ್ವನಾಥ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಗುಂಡಪ್ಪ ವಿಶ್ವನಾಥ್

ಗುಂಡಪ್ಪ ವಿಶ್ವನಾಥ್

ಕರ್ನಾಟಕದ ವಿಶ್ವನಾಥ್ ಅವರು ಸುನಿಲ್ ಗವಾಸ್ಕರ್ ಅವರ ಬಾವನಾಗಬೇಕು. ಗವಾಸ್ಕರ್ ಅವರಷ್ಟೇ ಅಲ್ಲ ಇತರೆ ಮಾಜಿ ಆಟಗಾರರು ಕೊಹ್ಲಿ ಆಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದಿದ್ದಾರೆ.

ವಿರಾಟ್ ಕೊಹ್ಲಿಗೆ ಒತ್ತಡ

ವಿರಾಟ್ ಕೊಹ್ಲಿಗೆ ಒತ್ತಡ

ವಿರಾಟ್ ಕೊಹ್ಲಿ ಮೇಲೆ ಒತ್ತಡ ಹೇರಬೇಡಿ. ಈ ರೀತಿ ಕಳಪೆ ಅವಧಿಯನ್ನು ಸವೆಸದೆ ಇರುವ ಯಾವುದಾದರೂ ಬ್ಯಾಟ್ಸ್ ಮನ್ ಇದ್ದಾರೆಯೇ? ಹೇಳಿ, ಕೊಹ್ಲಿ ಶ್ರೇಷ್ಠ ಬ್ಯಾಟ್ಸ್ ಮನ್, ಒಂದೆರಡು ಪಂದ್ಯಗಳ ನಂತರ ಮತ್ತೆ ಲಯಕ್ಕೆ ಮರಳುತ್ತಾರೆ ಎಂದ ಗುಂಡಪ್ಪ ವಿಶ್ವನಾಥ್

ಗವಾಸ್ಕರ್ ಟೀಕಿಸಿದ್ದರು.

ಗವಾಸ್ಕರ್ ಟೀಕಿಸಿದ್ದರು.

ಇದೇ ಐಪಿಎಲ್ ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಆಡಿದ ಪಂದ್ಯವೊಂದರಲ್ಲಿ ಅಂಥದ್ದೇ ಹೊಡೆತವೊಂದನ್ನು ಬಾರಿಸಿ ಅವರು ಯಶಸ್ಸು ಕಂಡಿದ್ದರು. ಆದರೆ, ಅದೇ ಯಶಸ್ಸು ಪುನರಾವರ್ತನೆಯಾಗಲಾರದು. ತಮ್ಮ ಆಟದ ಬಗ್ಗೆ ಅವರು ಅವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ಕನ್ನಡಿಯಲ್ಲಿ ಒಮ್ಮೆ ನೋಡಿಕೊಳ್ಳಲಿ ಎಂದು ಸುನಿಲ್ ಗವಾಸ್ಕರ್ ಟೀಕಿಸಿದ್ದರು.

ಆರ್ ಸಿಬಿ ಬ್ಯಾಟಿಂಗ್ ಮರೆತಿಲ್ಲ

ಆರ್ ಸಿಬಿ ಬ್ಯಾಟಿಂಗ್ ಮರೆತಿಲ್ಲ

ಚುಟುಕು ಮಾದರಿಯ ಪಂದ್ಯಗಳಲ್ಲಿ ಇನಿಂಗ್ಸ್ ಶುರುವಾದಾಗಿನಿಂದಲೇ ಬಿರುಸಾಗಿ ಬ್ಯಾಟ್ ಬೀಸಬೇಕಿರುತ್ತದೆ. ಆದರೆ, ಅದನ್ನು ಬ್ಯಾಟ್ಸ್ ಮನ್ ಗಳು ತಮ್ಮ ಸಹಜ ಆಟದಲ್ಲೇ ರೂಢಿಸಿಕೊಳ್ಳಬೇಕು.
***

ಹಾಗೆಂದ ಮಾತ್ರಕ್ಕೇ ಆರ್ ಸಿಬಿ ಬ್ಯಾಟ್ಸ್ ಮನ್ ಗಳು ಕ್ರಿಕೆಟ್ ಮರೆತಿದ್ದಾರೆಂದು ಅರ್ಥವಲ್ಲ. ಸರಿಯಾಗಿ, ತಮ್ಮ ಸಾಮರ್ಥ್ಯಕ್ಕೆ ತಕ್ಕುದಾದ ಆಟ ಆಡುತ್ತಿಲ್ಲ ಅಷ್ಟೇ'' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X