ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ ಸಿಬಿ ವಿರುದ್ಧದ ಪಂದ್ಯಕ್ಕೆ ಚೆನ್ನೈ ತಂಡದಿಂದ ಭರ್ಜರಿ ತಯಾರಿ

 IPL 2019: CSK begin full fledged preparations for IPL-12

ಚೆನ್ನೈ, ಮಾರ್ಚ್ 17: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 12ರ ಮೊದಲ ಪಂದ್ಯಕ್ಕಾಗಿ ಭರ್ಜರಿ ತಯಾರಿ ನಡೆಸಿದೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಧೋನಿ ಬಳಗ ಸಾಕಷ್ಟು ಬೆವರಿಳಿಸಿದ್ದು, ನಾಲ್ಕನೇ ಬಾರಿ ಕಪ್ ಎತ್ತುವ ಉತ್ಸಾಹದಲ್ಲಿದ್ದಾರೆ. ಐಪಿಎಲ್ 12ರ ಮೊದಲ ಪಂದ್ಯದ ಟಿಕೆಟ್ ಎಲ್ಲವೂ ಸೋಲ್ಡ್ ಔಟ್ ಆಗಿರುವ ಸುದ್ದಿ ಬಂದಿದೆ.

ಮ್ಯಾಚ್ ಫಿಕ್ಸಿಂಗ್ ನಿಂದ ಎರಡು ವರ್ಷಗಳ ನಿಷೇಧ ಅನುಭವಿಸಿದ್ದ ಚೆನ್ನೈ ತಂಡವು 2018ರಲ್ಲಿ ಐಪಿಎಲ್ ಗೆ ಮರಳಿದ್ದಲ್ಲದೆ, ಟ್ರೋಫಿ ಗೆದ್ದು ಬೀಗಿತ್ತು. ಐಪಿಎಲ್ 12ರ ಮೊದಲ ಪಂದ್ಯದಲ್ಲಿ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮಾರ್ಚ್ 23ರಂದು ಎದುರಿಸಲಿದೆ.

ಮೊದಲ ಪಂದ್ಯಕ್ಕಾಗಿ ಅಂಬಟಿ ರಾಯುಡು, ಕೇದಾರ್ ಜಾಧವ್ ಜತೆ ಧೋನಿ ಅವರು ಮೈದಾನದಲ್ಲಿ ನೆಟ್ ಅಭ್ಯಾಸ ನಡೆಸಿದರು. ಶುಕ್ರವಾರದಂದು ಚೆನ್ನೈಗೆ ಬಂದ ಧೋನಿ ಅವರು ಚೆನ್ನೈ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಹಾಗೂ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಅವರೊಟ್ಟಿಗೆ ಧೋನಿ ಅವರು ಒಂದು ಸುತ್ತಿನ ಚರ್ಚೆ ನಡೆಸಿದರು.

IPL 2019: ಟೂರ್ನಿಯ ಅವಿಸ್ಮರಣೀಯ ಪಂದ್ಯ ಮೆಲುಕು ಹಾಕಿದ ವಿರಾಟ್ ಕೊಹ್ಲಿ IPL 2019: ಟೂರ್ನಿಯ ಅವಿಸ್ಮರಣೀಯ ಪಂದ್ಯ ಮೆಲುಕು ಹಾಕಿದ ವಿರಾಟ್ ಕೊಹ್ಲಿ

ಧೋನಿ, ರಾಯು, ಜಾಧವ್, ರೈನಾ ಹಾಗೂ ಇನ್ನಿತರ ಆಟಗಾರರು ನೆಟ್ ಅಭ್ಯಾಸದಲ್ಲಿ ತೊಡಗಿಕೊಂಡರು. ಕರಣ್ ಶರ್ಮ, ಕೆಎಂ ಆಸಿಫ್ ಹಾಗೂ ತಮಿಳುನಾಡಿನ ವಿಕೆಟ್ ಕೀಪರ್ ಎನ್ ಜಗದೀಶ್ ಅವರು ಮಾರ್ಚ್ 06ರಿಂದಲೇ ತರಬೇತಿ ಕ್ಯಾಂಪಿನಲ್ಲಿದ್ದಾರೆ.

ದಕ್ಷಿಣ ಆಫ್ರಿಕಾದ ಫಾಫ್ ಡುಫ್ಲೆಸಿಸ್, ಲೆಗ್ ಸ್ಪಿನರ್ ಇಮ್ರಾನ್ ತಾಹೀರ್ ಅವರು ಕೇಪ್ ಟೌನ್ ನಲ್ಲಿ ಶ್ರೀಲಂಕಾದಲ್ಲಿ ಏಕದಿನ ಕ್ರಿಕೆಟ್ ಪಂದ್ಯವನ್ನಾಡಿದ್ದು, ನಂತರ ತಂಡವನ್ನು ಸೇರಲಿದ್ದಾರೆ.

ಕಳೆದ ಬಾರಿ ಕಾವೇರಿ ವಿವಾದದಿಂದ ಚೆನ್ನೈನಲ್ಲಿ ನಡೆಯಬೇಕಿದ್ದ ಪಂದ್ಯಗಳು ಪುಣೆ ಶಿಫ್ಟ್ ಅಗಿತ್ತು. ಈ ಬಾರಿ ಹೆಚ್ಚಿನ ಪಂದ್ಯಗಳು ಚೆನ್ನೈನಲ್ಲೇ ನಡೆಸುವ ಸಾಧ್ಯತೆಯಿದೆ.

Story first published: Sunday, March 17, 2019, 12:47 [IST]
Other articles published on Mar 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X