ಐಪಿಎಲ್ ಫೈನಲ್ ಬಗ್ಗೆ ಅಕ್ಟೋಬರ್ 16ರಂದೇ ಭವಿಷ್ಯ ನುಡಿದಿದ್ದ ಆಕಾಶ್ ಚೋಪ್ರ!

ಕ್ರಿಕೆಟ್ ಲೋಕದ ಶ್ರೀಮಂತ ಟೂರ್ನಿಯಾಗಿರುವ ಐಪಿಎಲ್ ಈ ಬಾರಿ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಪ್ಲೇಆಫ್ ಹಂತಕ್ಕೇರಲು ಎಂತಿಮ ಪಂದ್ಯದವರೆಗೂ ಬಹುತೇಕ ಎಲ್ಲಾ ತಂಡಗಳಿಗೂ ಅವಕಾಶ ಇದ್ದಿದ್ದು ಈ ಟೂರ್ನಿಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಯಾರು ಗೆಲ್ಲಬಹುದು ಎಂಬ ಊಹೆಗಿಂತಲೂ ಯಾರು ಪ್ಲೇಆಫ್‌ಗೆ ಏರಬಹುದು ಎಂಬುದೇ ಸಾಕಷ್ಟು ಕುತೂಹಲಕಾರಿಯಾಗಿತ್ತು.
ಆದರೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಟೂರ್ನಿಯ ಫೈನಲ್ ಹಂತಕ್ಕೆ ಯಾವ ಎರಡು ತಂಡಗಳು ಪ್ರವೇಶ ಪಡೆದುಕೊಳ್ಳಬಹುದು ಎಂಬುದನ್ನು ಊಹೆ ಮಾಡಿದ್ದರು. ಕಾಮೆಂಟೇಟರ್ ಆಗಿರುವ ಆಕಾಶ್ ಚೋಪ್ರ ಮಾಡಿರುವ ಊಹೆ ನಿಜವಾಗಿದ್ದು ಈ ಬಗ್ಗೆ ಸ್ವತಃ ಆಕಾಶ್ ಚೋಪ್ರ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 16ನೇ ತಾರಿಕಿನಂದು ಆಕಾಶ್ ಚೋಪ್ರ ಟ್ವಿಟ್ಟರ್‌ನಲ್ಲಿ ಫೈನಲ್‌ಗೆ ಪ್ರವೇಶ ಪಡೆದುಕೊಳ್ಳುವ ಎರಡು ತಮಡಗಳನ್ನು ಹೆಸರಿಸಿದ್ದರು. "ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈಗಾಗಲೇ ಫೈನಲ್‌ಗೆ ಪ್ರವೇಶ ಪಡೆದುಕೊಂಡೆದಿಯಾ" ಎಂದು ಆಕಾಶ್ ಚೋಪ್ರ ಟ್ವಿಟ್‌ನಲ್ಲಿ ಬರೆದುಕೊಂಡಿದ್ದರು.
ಈಗ ಆಕಾಶ್ ಚೋಪ್ರ ಅಂದು ಮಾಡಿದ್ದ ಟ್ವೀಟ್ ನಿಜವಾಗಿದೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಫೈನಲ್ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈಗ ಫೈನಲ್‌ನಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ಲಭಿಸಲಿದೆ.
ಆಕಾಶ್ ಚೋಪ್ರ ಈ ಟ್ವಿಟ್ ಮಾಡುವ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಎರಡು ತಂಡಗಳು ಕೂಡ 8 ಪಂದ್ಯಗಳನ್ನು ಆಡಿ 6 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿತ್ತು. ಈ ಮೂಲಕ ಟೂರ್ನಿಯಲ್ಲಿ ಭರ್ಜರಿ ಆರಂಭವನ್ನು ಪಡೆದುಕೊಂಡಿತ್ತು. ಈ ಗೆಲುವಿನ ಸರಣಿಯನ್ನು ಮುಂಬೈ ಮುಂದುವರಿಸುತ್ತಾ ಹೋದರೆ ಡೆಲ್ಲಿ ಬಳಿಕ ಸತತ ಹಿನ್ನೆಡೆಯನ್ನು ಕಂಡಿತ್ತು. ಹಾಗಿದ್ದರೂ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications