ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನೇನು ದೇವರಲ್ಲ: ಸ್ಟಾರ್ ಆಲ್‌ರೌಂಡರ್ ಬಗ್ಗೆ ಆಕಾಶ್ ಚೋಪ್ರ ಹೇಳಿಕೆ

IPL 2020: Ben Stokes is not God - Aakash Chopra

ಈ ಬಾರಿಯ ಐಪಿಎಲ್‌ನ ಆರಂಭಿಕ ಎರಡು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಪ್ರದರ್ಶನ ನೀಡುವ ಮೂಲಕ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆದರೆ ಮುಂದಿನ ಮೂರು ಪಂದ್ಯಗಳಲ್ಲಿ ಸತತ ಸೋಲು ಕಾಣುವ ಮೂಲಕ ಭಾರೀ ನಿರಾಸೆಯನ್ನು ಮೂಡಿಸಿದೆ. ಸಂಜು ಸ್ಯಾಮ್ಸನ್ ಹಾಗೂ ಸ್ಟೀವ್ ಸ್ಮಿತ್ ಆಟವನ್ನೇ ತಂಡ ಹೆಚ್ಚಾಗಿ ನೆಚ್ಚಿ ಕೊಂಡಿದೆ ಎಂದು ವಿಶ್ಲೇಷಣೆಗಳು ನಡೆಯುತ್ತಿದೆ. ಈ ಮಧ್ಯೆ ಸ್ಟಾರ್ ಆಲ್‌ರೌಂಡರ್ ಮುಂದಿನ ದಿನಗಳಲ್ಲಿ ತಂಡಕ್ಕೆ ಲಭ್ಯರಾಗಲಿರುವುದು ತಂಡದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿದೆ.

ಆದರೆ ಈ ವಿಶ್ಲೇಷಣೆಗಳಿಗೆ ಸಂಬಂಧ ಪಟ್ಟಂತೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ವ್ಯತಿರಿಕ್ತ ಹೇಳಿಕೆಯನ್ನು ನೀಡಿದ್ದಾರೆ. ಆರಂಭದಲ್ಲಿ ಹುಟ್ಟುಹಾಕಿದ ಭಾರೀ ನಿರೀಕ್ಷೆಯ ಬಳಿಕ ಈಗ ಮುಳುಗುತ್ತಿರುವ ಹಡಗಿನಂತಾಗಿರುವ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆ ಓರ್ವ ಆಟಗಾರನ ಆಗಮನ ಹೆಚ್ಚಿನ ಬದಲಾವಣೆಯನ್ನು ಮಾಡಲಾರದು ಎಂದಿದ್ದಾರೆ. ಆ ರೀತಿಯ ನಿರೀಕ್ಷೆಯನ್ನು ಇಟ್ಟುಕೊಳ್ಳುವುದೇ ತಪ್ಪು ಎಂಬ ಅಭಿಪ್ರಾಯವನ್ನು ಚೋಪ್ರ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್‌ಗೆ 12 ಲಕ್ಷ ರೂ. ದಂಡರಾಜಸ್ಥಾನ್ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್‌ಗೆ 12 ಲಕ್ಷ ರೂ. ದಂಡ

ಹಾಗಾದರೆ ಆಕಾಶ್ ಚೋಪ್ರ ಹೇಳಿದ ಆ ಆಟಗಾರ ಯಾರು? ಯಾವ ಕಾರಣಕ್ಕೆ ಈ ರೀತಿಯ ಅಭಿಪ್ರಾಯವನ್ನು ಚೋಪ್ರ ವ್ಯಕ್ತಡಿಸಿದರು ಮುಂದೆ ಓದಿ..

ಬೆನ್ ಸ್ಟೋಕ್ಸ್ ಲಭ್ಯತೆಗೆ ಕಾಯುತ್ತಿದೆ ರಾಜಸ್ಥಾನ್

ಬೆನ್ ಸ್ಟೋಕ್ಸ್ ಲಭ್ಯತೆಗೆ ಕಾಯುತ್ತಿದೆ ರಾಜಸ್ಥಾನ್

ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ಈಗ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೊಕ್ಸ್ ತಂಡಕ್ಕೆ ಸೇರ್ಪಡೆಗೊಳ್ಳುವುದನ್ನು ಕಾಯುತ್ತಿದೆ. ಕೌಟುಂಬಿಕ ಕಾರಣಗಳಿಂದ ತಡವಾಗಿ ಟೂರ್ನಿಯನ್ನು ಸೇರಿಕೊಂಡಿರುವ ಬೆನ್ ಸ್ಟೋಕ್ಸ್ ಸದ್ಯ ಕ್ವಾರಂಟೈನ್ ಅವಧಿಯನ್ನು ಪೂರೈಸುತ್ತಿದ್ದಾರೆ.

ಆರ್‌ಆರ್‌ಗೆ ಬಲ ನೀಡಲಿದ್ದಾರ ಸ್ಟೋಕ್ಸ್?

ಆರ್‌ಆರ್‌ಗೆ ಬಲ ನೀಡಲಿದ್ದಾರ ಸ್ಟೋಕ್ಸ್?

ಬೆನ್ ಸ್ಟೋಕ್ಸ್ ಆರ್‌ಆರ್ ಆಡುವ ಬಳಗದಲ್ಲಿ ಕಾಣಿಸಿಕೊಂಡರೆ ತಂಡಕ್ಕೆ ದೊಡ್ಡ ಬಲ ಬಂದಂತೆ ಎಂಬ ವಿಶ್ಲೇಷಣೆಗಳು ನಡೆಯುತ್ತಿದೆ. ಆಲ್‌ರೌಂಡರ್ ಆಗಿರುವುದರಿಂದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ತಂಡಕ್ಕೆ ನೆರವಾಗಲಿದ್ದಾರೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ತಂಡಕ್ಕೂ ಇದು ಭಾರೀ ಸಮತೋಲನವನ್ನು ನೀಡಲಿದೆ ಎಂದು ಸ್ವತಃ ಆರ್‌ಆರ್ ನಾಯಕ ಸ್ಟೀವ್ ಸ್ಮಿತ್ ಹೇಳಿಕೊಂಡಿದ್ದರು.

ಬೆನ್ ಸ್ಟೋಕ್ಸ್ ಅಂತಿಮ ಪರಿಹಾರವಲ್ಲ

ಬೆನ್ ಸ್ಟೋಕ್ಸ್ ಅಂತಿಮ ಪರಿಹಾರವಲ್ಲ

"ರಾಜಸ್ಥಾನ್ ರಾಯಲ್ಸ್ ತಂಡ ಬೆನ್ ಸ್ಟೋಕ್ಸ್ ಆಗಮನಕ್ಕೆ ಕಾಯುತ್ತಿದೆ. ಆದರೆ ಬೆನ್ ಸ್ಟೋಕ್ಸ್ ತಂಡದ ಪರಿಸ್ಥಿತಿಗೆ ಅಂತಿಮ ಪರಿಹಾರವಲ್ಲ. ಯಾಕೆಂದರೆ ಇಡೀ ತಂಡದ ಕೊಡುಗೆ ಬಹಳ ಮುಖ್ಯವಾಗಿದೆ. ಫಲಿತಾಂಶ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಬರಬೇಕೆಂದರೆ ಇಡೀ ತಂಡ ಇಗ್ಗಟ್ಟಿನ ಪ್ರದರ್ಶನವನ್ನು ನೀಡಬೇಕು. ಏಕಾಂಗಿಯಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ" ಎಂದು ಆಕಾಶ್ ಚೋಪ್ರ ಹೇಳಿದ್ದಾರೆ.

ಬೆನ್ ಸ್ಟೋಕ್ಸ್ ದೇವರಲ್ಲ

ಬೆನ್ ಸ್ಟೋಕ್ಸ್ ದೇವರಲ್ಲ

"ಬೆನ್ ಸ್ಟೋಕ್ಸ್ ಅತ್ಯುತ್ತಮ ಆಟಗಾರ, ವಿಶ್ವದ ಅತ್ಯುತ್ತಮ ಆಲ್‌ರೌಂಡರ್. ಆದರೆ ಆತ ದೇವರಲ್ಲ. ಈ ಸಂಗತಿಯನ್ನು ತಲೆಯಲ್ಲಿಟ್ಟುಕೊಳ್ಳಬೇಕು. ತಂಡದ ಇತರ ಸದಸ್ಯರು ಉತ್ತಮ ಕಾರ್ಯ ನಿರ್ವಹಿಸದೇ ಇದ್ದರೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ ಏಕಾಂಗಿಯಾಗಿ ಇದ್ದಂತೆ ಬೆನ್ ಸ್ಟೋಕ್ಸ್ ಕೂಡ ಏಕಾಂಗಿಯಾಗಿ ಉಳಿಯಲಿದ್ದಾರೆ ಎಂದು ಆಕಾಶ್ ಚೋಪ್ರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Story first published: Wednesday, October 7, 2020, 16:22 [IST]
Other articles published on Oct 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X