ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಪಾಯಕಾರಿ ಆಟಗಾರರು, ವೇಳಾಪಟ್ಟಿ, ಮಾಹಿತಿ

IPL 2020: Delhi Capitals Strength, Weakness, Schedule, Top Players

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳಲ್ಲಿ ಒಂದಾದ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಕಪ್ ಗೆಲ್ಲದ ತಂಡಗಳ ಸಾಲಿನಲ್ಲಿ ಗುರುತಿಸಲಾಗುತ್ತದೆ. ಅಷ್ಟೇ ಅಲ್ಲ, ಐಪಿಎಲ್ ಇತಿಹಾಸದಲ್ಲಿ ಒಂದು ಬಾರಿಯೂ ಫೈನಲ್‌ಗೆ ಪ್ರವೇಶಿಸಿದ ತಂಡವೆಂಬ ಹಣೆಪಟ್ಟಿಯೂ ಡೆಲ್ಲಿಗಿದೆ. ಹಾಗಂತ ಡೆಲ್ಲಿ ಅಷ್ಟೊಂದು ದುರ್ಬಲ ತಂಡವೇ? ಈ ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುವ ಐಪಿಎಲ್ ಹಬ್ಬದಲ್ಲಿ ಡೆಲ್ಲಿಗೆ ಕಪ್ ಗೆಲ್ಲುವ ಅವಕಾಶ ಇಲ್ಲವಾ? ಖಂಡಿತಾ ಇದೆ.

ಐಪಿಎಲ್: ಕ್ವಾರಂಟೈನ್ ದಿನ ಕಡಿತಕ್ಕೆ ಇಂಗ್ಲೆಂಡ್-ಆಸೀಸ್ ಆಟಗಾರರಿಂದ ಪತ್ರಐಪಿಎಲ್: ಕ್ವಾರಂಟೈನ್ ದಿನ ಕಡಿತಕ್ಕೆ ಇಂಗ್ಲೆಂಡ್-ಆಸೀಸ್ ಆಟಗಾರರಿಂದ ಪತ್ರ

ಯಾವ ವ್ಯಕ್ತಿಯನ್ನೂ, ತಂಡವನ್ನೂ, ವಿಚಾರವನ್ನೂ ಕಡೆಗಣಿಸುವಂತಿಲ್ಲ. ಕೇವಲವಾಗಿ ನೋಡುವಂತಿಲ್ಲ. ಪರಿಶ್ರಮವಿದ್ದರೆ, ಎಚ್ಚರಿಕೆಯಿಂದ ಮುನ್ನಡೆದರೆ ಯಾರಿಗೂ ಯಶಸ್ಸು ಬಾರೆನೆನ್ನದು. ಯಶಸ್ಸಿನೆಗೆಡೆಗಿನ ಪ್ರಯತ್ನ ಬೇಕಷ್ಟೇ. ಗೆಲುವು ಸಿಗುವವರೆಗೂ ತಾಳ್ಮೆಯಿಂದ ಕಾಯಬೇಕಷ್ಟೇ.

ಕನ್ನಡಿಗರ ತಂಡ ಕಿಂಗ್ಸ್ XI ಪಂಜಾಬ್‌ನ ಬಲ-ದೌರ್ಬಲ್ಯ, ವೇಳಾಪಟ್ಟಿ, ವಿಶೇಷತೆಕನ್ನಡಿಗರ ತಂಡ ಕಿಂಗ್ಸ್ XI ಪಂಜಾಬ್‌ನ ಬಲ-ದೌರ್ಬಲ್ಯ, ವೇಳಾಪಟ್ಟಿ, ವಿಶೇಷತೆ

ಈ ಐಪಿಎಲ್‌ ಆವೃತ್ತಿಗೆ ಸಜ್ಜಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಲ-ದೌರ್ಬಲ್ಯ, ಸಂಪೂರ್ಣ ತಂಡ, ವೇಳಾಪಟ್ಟಿ ಜೊತೆಗೆ ಇನ್ನೊಂದಿಷ್ಟು ಉಪಯುಕ್ತ ಮಾಹಿತಿಗಳು ಇಲ್ಲಿವೆ.

ಡೆಲ್ಲಿ ಕ್ಯಾಪಿಟಲ್ಸ್ ಶಕ್ತಿ

ಡೆಲ್ಲಿ ಕ್ಯಾಪಿಟಲ್ಸ್ ಶಕ್ತಿ

ಡೆಲ್ಲಿ ಕ್ಯಾಪಿಟಲ್ಸ್ ಒಂಥರಾ ಯುವಕರ ತಂಡ. ಬರೀ ಯುವಕರೇ ಎಂದೇನಲ್ಲ. ಒಂದಿಷ್ಟು ಅನುಭವಿಗಳೂ ಇದ್ದಾರೆ. ಆದರೆ ಹೆಚ್ಚಿನವರು ಯುವಕರೆ. ಇದೇ ಈ ತಂಡಕ್ಕೆ ಪ್ಲಸ್ ಪಾಯಿಂಟ್. ಯಾಕೆಂದರೆ ಯುವಕರಿಗೆ ಗೆಲುವಿನೆಡೆಗಿನ ಹಪಹಪಿ ಹೆಚ್ಚು. ಅಲ್ಲದೆ ಉತ್ತಮ ಪ್ರದರ್ಶನ ಮೂಲಕ ಗಮನ ಸೆಳೆಯುವ ಆಯೋಚನೆಯೂ ಆಟಗಾರರಲ್ಲಿರುತ್ತದೆ. ಶ್ರೇಯಸ್ ಐಯ್ಯರ್, ರಿಷಭ್ ಪಂತ್, ಪೃಥ್ವಿ ಶಾ, ಶಿಮ್ರನ್ ಹೆಟ್ಮೈಯರ್, ಸಂದೀಪ್ ಲಮಿಚಾನೆ ಇಂಥ ಯುವಕರಲ್ಲದೆ ಶಿಖರ್ ಧವನ್, ಅಜಿಂಕ್ಯ ರಹಾನೆ, ಆರ್‌ ಅಶ್ವಿನ್, ಕಾಗಿಸೊ ರಬಾಡ, ಮಾರ್ಕಸ್ ಸ್ಟೋಯ್ನಿಸ್ ನಂಥ ಅನುಭವಿಗಳೂ ಈ ತಂಡದಲ್ಲಿದ್ದಾರೆ. ಅಲ್ಲದೆ ಹೆಡ್ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಜವಾಬ್ದಾರಿಯಲ್ಲಿದ್ದಾರೆ.

ಮೈನಸ್ ಪಾಯಿಂಟ್

ಮೈನಸ್ ಪಾಯಿಂಟ್

ಯುವ ತಂಡದ ಪ್ಲಸ್ ಪಾಯಿಂಟ್‌ಗಳು ಇನ್ನೊಂದೆಡೆ ಮೈನಸ್ ಪಾಯಿಂಟ್ ಕೂಡ ಆಗಬಲ್ಲದು. ಯಾಕೆಂದರೆ ಪೃಥ್ವಿ ಶಾ, ರಿಷಭ್ ಪಂತ್, ಶಿಮ್ರನ್ ಹೆಟ್ಮೈರ್ ಇವರೆಲ್ಲ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳು. ಆದರೆ ಎಚ್ಚರಿಕೆಯ ಆಟದ ಮೊರೆ ಹೋಗುವುದಕ್ಕಿಂತ ದೊಡ್ಡ ಹೊಡೆತಗಳಿಗೆ ಮುಂದಾಗಿ ಬೇಗನೆ ವಿಕೆಟ್ ಒಪ್ಪಿಸುವ ಸಾಧ್ಯತೆಯಿದೆ. ಅನುಭವಿ ಶಿಖರ್ ಧವನ್, ಅಜಿಂಕ್ಯ ರಹಾನೆ ಕೂಡ ಅಂಥ ಫಾರ್ಮ್‌ನಲ್ಲಿ ಇದ್ದಂಗಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್ ತಂಡ

ಡೆಲ್ಲಿ ಕ್ಯಾಪಿಟಲ್ಸ್ ತಂಡ

ಅಜಿಂಕ್ಯ ರಹಾನೆ (ಬ್ಯಾಟ್ಸ್‌ಮನ್), ಪೃಥ್ವಿ ಶಾ (ಬ್ಯಾಟ್ಸ್‌ಮನ್), ಶಿಖರ್ ಧವನ್ (ಬ್ಯಾಟ್ಸ್‌ಮನ್), ಕೀಮೋ ಪೌಲ್ (ಬ್ಯಾಟ್ಸ್‌ಮನ್, ವೆಸ್ಟ್ ಇಂಡೀಸ್), ಶ್ರೇಯಸ್ ಐಯ್ಯರ್ (ಬ್ಯಾಟ್ಸ್‌ಮನ್-ನಾಯಕ), ಅಮಿತ್ ಮಿಶ್ರಾ (ಬೌಲರ್), ಅನ್ರಿಚ್ ನಾರ್ಟ್ಜೆ (ಬೌಲರ್, ದಕ್ಷಿಣ ಆಫ್ರಿಕಾ), ಆವೇಶ್ ಖಾನ್ (ಬೌಲರ್), ಹರ್ಷಲ್ ಪಟೇಲ್ (ಬೌಲರ್), ಇಶಾಂತ್ ಶರ್ಮಾ (ಬೌಲರ್), ಕಾಗಿಸೊ ರಬಾಡ (ಬೌಲರ್, ದಕ್ಷಿಣ ಆಫ್ರಿಕಾ), ಮೋಹಿತ್ ಶರ್ಮಾ (ಬೌಲರ್), ರವಿಚಂದ್ರನ್ ಅಶ್ವಿನ್ (ಬೌಲರ್), ಸಂದೀಪ್ ಲಮಿಚಾನೆ (ಬೌಲರ್, ನೇಪಾಳ), ತುಷಾರ್ ದೇಶಪಾಂಡೆ (ಬೌಲರ್), ಅಕ್ಸರ್ ಪಟೇಲ್ (ಆಲ್ ರೌಂಡರ್), ಡೇನಿಯಲ್ ಸ್ಯಾಮ್ಸ್ (ಆಲ್ ರೌಂಡರ್, ಆಸ್ಟ್ರೇಲಿಯಾ), ಕೀಮೋ ಪೌಲ್ (ಆಲ್ ರೌಂಡರ್, ವೆಸ್ಟ್ ಇಂಡೀಸ್), ಲಲಿತ್ ಯಾದವ್ (ಆಲ್ ರೌಂಡರ್), ಮಾರ್ಕಸ್ ಸ್ಟೋಯ್ನಸ್ (ಆಲ್ ರೌಂಡರ್, ಆಸ್ಟ್ರೇಲಿಯಾ), ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್, ಆಸ್ಟ್ರೇಲಿಯಾ) ರಿಷಭ್ ಪಂತ್ (ವಿಕೆಟ್ ಕೀಪರ್).

ಡಿಸಿ ಲೀಗ್ ಪಂದ್ಯಗಳ ವೇಳಾಪಟ್ಟಿ

ಡಿಸಿ ಲೀಗ್ ಪಂದ್ಯಗಳ ವೇಳಾಪಟ್ಟಿ

* ಸೆಪ್ಟೆಂಬರ್ 20, ಭಾನುವಾರ, ದೆಹಲಿ ಕ್ಯಾಪಿಟಲ್ಸ್ vs ಕಿಂಗ್ಸ್ ಇಲೆವೆನ್ ಪಂಜಾಬ್, 7:30 PM, ದುಬೈ
* ಸೆಪ್ಟೆಂಬರ್ 25, ಶುಕ್ರವಾರ, ಚೆನ್ನೈ ಸೂಪರ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್, 7:30 PM, ದುಬೈ
* ಸೆಪ್ಟೆಂಬರ್ 29, ಮಂಗಳವಾರ, ದೆಹಲಿ ಕ್ಯಾಪಿಟಲ್ಸ್ vs ಸನ್‌ರೈಸರ್ಸ್ ಹೈದರಾಬಾದ್, 7:30 PM, ಅಬುಧಾಬಿ
* ಅಕ್ಟೋಬರ್ 3, ಶನಿವಾರ, ದೆಹಲಿ ಕ್ಯಾಪಿಟಲ್ಸ್ vs ಕೋಲ್ಕತಾ ನೈಟ್ ರೈಡರ್ಸ್, 7.30 PM, ಶಾರ್ಜಾ
* ಅಕ್ಟೋಬರ್ 5, ಸೋಮವಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್, 7.30 PM, ದುಬೈ
* ಅಕ್ಟೋಬರ್ 9, ಶುಕ್ರವಾರ, ರಾಜಸ್ಥಾನ್ ರಾಯಲ್ಸ್ vs ದೆಹಲಿ ಕ್ಯಾಪಿಟಲ್ಸ್, 7.30 PM, ಶಾರ್ಜಾ
* ಅಕ್ಟೋಬರ್ 11, ಭಾನುವಾರ, ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್, 7.30 PM, ಅಬುಧಾಬಿ
* ಅಕ್ಟೋಬರ್ 14, ಬುಧವಾರ, ದೆಹಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್, 7.30 PM, ದುಬೈ
* ಅಕ್ಟೋಬರ್ 17, ಶನಿವಾರ, ದೆಹಲಿ ಕ್ಯಾಪಿಟಲ್ಸ್ Vs ಚೆನ್ನೈ ಸೂಪರ್ ಕಿಂಗ್ಸ್, 7.30 PM, ಶಾರ್ಜಾ
* ಅಕ್ಟೋಬರ್ 20, ಮಂಗಳವಾರ, ಕಿಂಗ್ಸ್ ಇಲೆವೆನ್ ಪಂಜಾಬ್ vs ದೆಹಲಿ ಕ್ಯಾಪಿಟಲ್ಸ್, 7.30 PM, ದುಬೈ
* ಅಕ್ಟೋಬರ್ 24, ಶನಿವಾರ, ಕೋಲ್ಕತಾ ನೈಟ್ ರೈಡರ್ಸ್ vs ದೆಹಲಿ ಕ್ಯಾಪಿಟಲ್ಸ್, 3.30 PM, ಅಬುಧಾಬಿ
* ಅಕ್ಟೋಬರ್ 27, ಮಂಗಳವಾರ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್, 7.30 PM, ದುಬೈ
* ಅಕ್ಟೋಬರ್ 31, ಶನಿವಾರ, ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್, 3.30 PM ದುಬೈ
* ನವೆಂಬರ್ 2, ಸೋಮವಾರ, ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, 7.30 PM, ಅಬುಧಾಬಿ

Story first published: Wednesday, September 16, 2020, 10:37 [IST]
Other articles published on Sep 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X