ಐಪಿಎಲ್ 2020: ಬ್ರೇಕ್ ದಿ ಬಿಯರ್ಡ್ ಸವಾಲು ಸ್ವೀಕರಿಸಿದ ಪಡಿಕ್ಕಲ್

ಈ ಬಾರಿಯ ಐಪಿಎಲ್‌ನಲ್ಲಿ ಆಟಗಾರರು ಅಂಗಳದಲ್ಲಿ ಹಾಕುವ ಸವಾಲಿನ ಜೊತೆಗೆ ಅಂಗಳ ಆಚೆಗೆ ಹಾಕುತ್ತಿರುವ ಸವಾಲೊಂದು ಸಾಕಷ್ಟು ಸದ್ದು ಮಾಡುತ್ತಿದೆ. ಸಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರು ಈ ಚಾಲೆಂಜನ್ನು ಮುಂದುವರಿಸುತ್ತಾ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದ್ದಾರೆ. ಈ ಚಾಲೆಂಜನ್ನು ಈಗ ಆರ್‌ಸಿಬಿ ಆಟಗಾರ ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ಸ್ವೀಕರಿಸಿದ್ದಾರೆ.

ಆ ಸವಾಲು ಬೇರೆ ಯಾವುದೂ ಅಲ್ಲ, ಬ್ರೇಕ್ ದಿ ಬಿಯರ್ಡ್ ಚಾಲೆಂಜ್. ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಿರುವ ಅನೇಕ ಕ್ರಿಕೆಟಿಗರು ಈ ಸವಾಲನ್ನು ಸ್ವೀಕರಿಸುತ್ತಾ ಇನ್ನಷ್ಟು ಕ್ರಿಕೆಟಿಗರಿಗೆ ಸವಾಲೊಡ್ಡುತ್ತಿದ್ದಾರೆ. ಇತ್ತೀಚೆಗೆ ಆರ್‌ಸಿಬಿ ಆಟಗಾರ ಎಬಿ ಡಿವಿಲಿಯರ್ಸ್ ಕೂಡ ಇದೇ ಸವಾಲನ್ನು ಸ್ವೀಕರಿಸಿದ್ದರು.

ಐಪಿಎಲ್ 2020: ಕೆಕೆಆರ್‌vsಎಸ್‌ಆರ್‌ಹೆಚ್: ಸೂಪರ್ ಓವರ್‌ನಲ್ಲಿ ಗೆದ್ದು ಬೀಗಿದ ಕೊಲ್ಕತಾ

ಭಾನುವಾರ ಆರ್‌ಸಿಬಿಯ ದೇವದತ್ ಪಡಿಕ್ಕಲ್ ಈ ಸವಾಲನ್ನು ಸ್ವೀಕರಿಸಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಈ ಮೂಲಕ ತಾನೇನು ಕಡಿಮೆಯಿಲ್ಲ ಎಂದು ಯುವ ಕ್ರಿಕೆಟಿಗ ಈ ಸವಾಲಿನಲ್ಲಿ ತಾನೂ ಪಾಲ್ಗೊಂಡು ಅಭಿಮಾನಿಗಳಿಗೆ ಖುಷಿ ಪಡಿಸಿದ್ದಾರೆ.

ಇನ್ನು ಈ ವಿಡಿಯೋ ಜೊತೆಗೆ ದೇವದತ್ ಪಡಿಕ್ಕಲ್ ಎಬಿ ಡಿವಿಲಿಯರ್ಸ್ ಅವರನ್ನು ಉಲ್ಲೇಖಿಸಿ 'ಧನ್ಯವಾದಗಳು ಎಬಿ ಡಿವಿಲಿಯರ್ಸ್ ಅಂಗಳದ ಹೊರಗೆ ಹಾಗೂ ಒಳಗೆ ನನ್ನ ಐಕಾನ್ ಆಗಿರುವುದಕ್ಕೆ. ನಿಮ್ಮ ಆ ಶೈಲಿಗೆ ವಿಸ್ಮಿತನಾಗಿದ್ದೇನೆ. ಇಲ್ಲಿ ನನ್ನದೇ ಆದ ವಿಷಯಗಳಿವೆ' ಎಂದು ಎಬಿ ಡಿವಿಲಿಯರ್ಸ್ ಅವರನ್ನು ಅನುಕರಿಸುತ್ತಿರುವುದಾಗಿ ವ್ಯಕ್ತಪಡಿಸಿದ್ದಾರೆ.

ಐಪಿಎಲ್: ಡೆಲ್ಲಿ, ಮುಂಬೈ, ಬೆಂಗಳೂರು ಪ್ಲೇ ಆಫ್ ಚಾನ್ಸ್ ಎಷ್ಟಿದೆ?

ಇದರ ಜೊತೆಗೆ ದೇವದತ್ ಪಡಿಕ್ಕಲ್ ಇಬ್ಬರು ಆಟಗಾರರಿಗೆ ಈ ಸವಾಲನ್ನು ಪಡಿಕ್ಕಲ್ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ತಂಡದ ರಾಹುಲ್ ತೆವಾಟಿಯಾ ಹಾಗೂ ವಿಜಯ್ ಶಂಕರ್ ಅವರನ್ನು ಉದ್ದೇಶಿಸಿ ಈ ಸವಾಲಿಗೆ ನೀವು ಸಿದ್ಧರಿದ್ದೀರಾ? ಎಂದು ಚಾಲೆಂಜ್ ಮಾಡಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, October 18, 2020, 22:34 [IST]
Other articles published on Oct 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X