ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಆಯೋಜನೆಯ ದಿನಾಂಕದ ಬಗ್ಗೆ 'ಸ್ಟಾರ್ ಇಂಡಿಯಾ'ಗೆ ಗೊಂದಲ!

Ipl 2020 : Ipl Broadcaster Star India ‘Unsure And Confused’ On Ipl 2020

ಐಪಿಎಲ್ ಆರಂಭ ಹಾಗೂ ಅಂತ್ಯದ ದಿನಾಂಕವನ್ನು ಐಪಿಎಲ್ ಚೇರ್‌ಮನ್ ಬೃಜೇಶ್ ಪಟೇಲ್ ಇತ್ತೀಚೆಗಷ್ಟೇ ಬಹಿರಂಗಪಡಿಸಿದ್ದರು. ಆದರೆ ಅಚ್ಚರಿಯ ಸಂಗತಿಯೇನೆಂದರೆ ಐಪಿಎಲ್ ಆರಂಭದ ದಿನಾಂಕದ ಬಗ್ಗೆ ಐಪಿಎಲ್‌ನ ಅಧಿಕೃತ ಪ್ರಸಾರಕರಾದ ಸ್ಟಾರ್ ಇಂಡಿಯಾ ಗೆ ಇನ್ನೂ ಮಾಹಿತಿಯನ್ನೇ ನೀಡಿಲ್ವಂತೆ. ಈ ವಿಚಾರವನ್ನು ಸ್ಟಾರ್ ಇಂಡಿಯಾದ ಮೂಲಗಳು ಇನ್‌ಸೈಡ್ ಸ್ಪೋರ್ಟ್ ಕ್ರೀಡಾ ಸುದ್ದಿಸಂಸ್ಥೆಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆಂದು ಅದು ವರದಿ ಮಾಡಿದೆ.

ಇದು ತುಂಬಾ ವಿಪರ್ಯಾಸ. 13ನೇ ಆವೃತ್ತಿಯ ಐಪಿಎಲ್ ಆರಂಭದ ಬಗ್ಗೆ ಯಾರೂ ಕೂಡ ಸ್ಟಾರ್ ಇಂಡಿಯಾಗೆ ಈವರೆಗೂ ಮಾಹಿತಿಯನ್ನು ನೀಡಿಲ್ಲ.ಸೆಪ್ಟೆಂಬರ್ 19ನೇ ತಾರೀಖಿಗೆ ಟೂರ್ನಿ ಆರಂಭವಾಗುವುದೇ ನಿಜವಾದರೆ ಅದಕ್ಕೆ ಉಳಿದಿರುವುದು ಇನ್ನು ಕೇವಲ 50 ದಿನಗಳು ಮಾತ್ರ. ಆದರೆ ಅದಕ್ಕಾಗಿ ನಾವು ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳಬೇಕಿದೆ ಎಂದು ಸ್ಟಾರ್ ಇಂಡಿಯಾಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಹೇಳಿರುವುದನ್ನು ಇನ್ ಸೈಡ್ ಸ್ಪೋರ್ಟ್ ವರದಿ ಮಾಡಿದೆ.

ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌: ಭಾರತ ನಂ.1 ತಂಡ, ಬ್ರಾಡ್ ನಂ.1 ಬೌಲರ್!ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌: ಭಾರತ ನಂ.1 ತಂಡ, ಬ್ರಾಡ್ ನಂ.1 ಬೌಲರ್!

'ಐಪಿಎಲ್ ಆರಂಭಕ್ಕೂ ಮುನ್ನ ಈ ಬಗ್ಗೆ ಮಾರುಕಟ್ಟೆ ತಂತ್ರಗಳನ್ನು ರಚಿಸಬೇಕು. ಐಪಿಎಲ್ ಮಾರ್ಕೆಟಿಂಗ್ ಅಭಿಯಾನಗಳನ್ನು ಆರಂಭಿಸಬೇಕು. ಜಾಹೀರಾತುದಾರರು ಕೂಡ ಅವರ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಆದರೆ ನಾವು ಸಂಪೂರ್ಣವಾಗಿ ಅನಿಶ್ಚಿತತೆಯನ್ನು ಹೊಂದಿದ್ದೇವೆ, ಮತ್ತು ಗೊಂದಲದಲ್ಲಿದ್ದೇವೆ' ಎಂದು ಮಾಹಿತಿಯನ್ನು ನೀಡಿದ್ದಾರೆ.

ಇದೊಂದು ಅನಿರೀಕ್ಷಿತ ಸಂದರ್ಭ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಆದರೆ ಇಂತಾ ಸಂದರ್ಭದಲ್ಲಿ ಸೂಕ್ತ ಸಂವಹನಗಳು ಅಗತ್ಯ. ಪ್ರತಿಯೊಬ್ಬ ಹೂಡಿಕೆದಾರರಿಗೂ ಇದು ಕಠಿಣ ಸಂದರ್ಭ. ನಾವು ಕೂಡ ಅಧಿಕೃತ ವೇಳಾಪಟ್ಟಿಗಾಗಿ ಕಾಯುತ್ತಿದ್ದೇವೆ ಎಂದು ಸ್ಟಾರ್ ಇಂಡಿಯಾದ ಮೂಲಗಳು ಮಾಹಿತಿ ನೀಡಿವೆ.

ವೈರಲ್ ಆಯ್ತು ಐಪಿಎಲ್ 2020 ವೇಳಾಪಟ್ಟಿ: ಅನುಮಾನಕ್ಕೆ 3 ಕಾರಣಗಳುವೈರಲ್ ಆಯ್ತು ಐಪಿಎಲ್ 2020 ವೇಳಾಪಟ್ಟಿ: ಅನುಮಾನಕ್ಕೆ 3 ಕಾರಣಗಳು

ಈ ಮಧ್ಯೆ ಧನಾತ್ಮಕ ಬೆಳವಣಿಗೆಯೊಂದು ನಡೆದಿದ್ದು ಐಪಿಎಲ್ ಯುಎಇನಲ್ಲಿ ಆಯೋಜಿಸಲು ಮಾಡಿದ್ದ ಮನವಿಗೆ ಪ್ರತಿಯಾಗಿ ಯುಎಇನ ಕ್ರಿಕೆಟ್ ಮಂಡಳಿಗೆ ಮನವಿ ಸ್ವೀಕೃತ ಪತ್ರವನ್ನು ರವಾನಿಸಿರುವುದನ್ನು ಬ್ರಿಜೇಶ್ ಪಟೇಲ್ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

Story first published: Monday, July 27, 2020, 16:03 [IST]
Other articles published on Jul 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X