
ಪಿಚ್ ರಿಪೋರ್ಟ್
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಪಿಚ್ ಗಣನೀಯವಾಗಿ ನಿಧಾನವಾಗಿದೆ. ನಿಧಾನಗತಿಯ ಬೌಲರ್‌ಗಳು ತಡವಾಗಿ ಎದುರಾಳಿ ಮೇಲೆ ದಾಳಿ ಮಾಡುತ್ತಾರೆ. ಈ ಸ್ಥಳದಲ್ಲಿ ಕಳೆದ ಮೂರು ಐಪಿಎಲ್ ಪಂದ್ಯಗಳಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ ಕೇವಲ 142 ರನ್ ಆಗಿದೆ.
ಬೌಲರ್‌ಗಳು ಸಾಕಷ್ಟು ಸ್ವಿಂಗ್ ಹೊರತಾಗಿಯೂ, ಈ ಮೈದಾನದಲ್ಲಿ ನಡೆದ ಪಂದ್ಯಗಳಲ್ಲಿ ಸ್ಪಿನ್ನರ್‌ಗಳು ಮಹತ್ವದ ಪಾತ್ರ ವಹಿಸಿದ್ದಾರೆ. ಈ ಪಿಚ್‌ನಲ್ಲಿ 155ರ ಆಸುಪಾಸಿನ ಸ್ಕೋರ್ ಸ್ಪರ್ಧಾತ್ಮಕ ಮೊತ್ತವಾಗಿದೆ. ಇನ್ನು ಡ್ಯೂ ಫ್ಯಾಕ್ಟರ್(ಇಬ್ಬನಿ) ಕೆಲ ಪಾತ್ರವನ್ನು ವಹಿಸಬಹುದು. ಟಾಸ್ ಗೆದ್ದ ತಂಡವು ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಹೆಡ್ ಟು ಹೆಡ್
ಐಪಿಎಲ್ ಇತಿಹಾಸದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ 16 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಹೈದ್ರಾಬಾದ್ 10 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ 6 ಪಂದ್ಯಗಳಲ್ಲಿ ಗೆಲುವನ್ನ ತನ್ನದಾಗಿಸಿಕೊಂಡಿದೆ.

ಹೈದ್ರಾಬಾದ್ ಸಂಭಾವ್ಯ ಪ್ಲೇಯಿಂಗ್ 11
ಡೇವಿಡ್ ವಾರ್ನರ್ (C), ಜಾನಿ ಬೈರ್‌ಸ್ಟೋವ್ (WK), ಮನೀಶ್ ಪಾಂಡೆ, ವಿಜಯ್ ಶಂಕರ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್ / ಅಭಿಷೇಕ್ ಶರ್ಮಾ, ಜೇಸನ್ ಹೋಲ್ಡರ್, ರಶೀದ್ ಖಾನ್, ಖಲೀಲ್ ಅಹ್ಮದ್ / ಬೆಸಿಲ್ ಥಂಪಿ, ಟಿ ನಟರಾಜನ್ ಮತ್ತು ಸಂದೀಪ್ ಶರ್ಮಾ.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ 11
ಶಿಖರ್ ಧವನ್, ಪೃಥ್ವಿ ಶಾ / ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (C), ರಿಷಭ್ ಪಂತ್ (WK), ಶಿಮ್ರಾನ್ ಹೆಟ್ಮಾಯರ್, ಮಾರ್ಕಸ್ ಸ್ಟೊಯ್ನಿಸ್, ಅಕ್ಷರ್ ಪಟೇಲ್, ರವಿ ಅಶ್ವಿನ್, ಕಗಿಸೊ ರಬಡಾ, ತುಷಾರ್ ದೇಶಪಾಂಡೆ / ಹರ್ಷಲ್ ಪಟೇಲ್ ಮತ್ತು ಅನ್ರಿಕ್ ನೊರ್ಕಿಯಾ


Click it and Unblock the Notifications